ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ರೀತಿಯ ಪಾತ್ರದ ಮೂಲಕ ಚಿರಪರಿಚಿತರಾದ ರಂಗಾಯಣ ರಘು (Rangayana Raghu Birthday) ಅವರಿಗೆ ಇಂದು (ಏಪ್ರಿಲ್ 17) ಹುಟ್ಟುಹಬ್ಬದ ಸಂಭ್ರಮ. ರಂಗಾಯಣ ರಘು ಭಾರತೀಯ ಸಿನಿರಂಗ ಹಾಗೂ ಕನ್ನಡ ಸಿನಿರಂಗದಲ್ಲಿ ಹೆಸರುವಾಸಿಯಾಗಿದ್ದಾರೆ. ಇವರು ಈಗಾಗಲೇ ಕಾಮಿಡಿ ಹಾಗೂ ಪೋಷಕಪಾತ್ರದಲ್ಲಿ 250 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇಂದು ಅವರ ಹುಟ್ಟುಹಬ್ಬಕ್ಕೆ ಸ್ನೇಹಿತರು, ಸಿನಿಗಣ್ಯರು, ಆಪ್ತರು ಹಾಗೂ ವಿವಿಧ ಸಿನಿತಂಡದವರು ಸೇರಿದಂತೆ ಅನೇಕರು ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.
ಟಗರುಪಲ್ಯ ಸಿನಿತಂಡದಿಂದ ಧನಂಜಯ್ ಟ್ವೀಟ್‌ನಲ್ಲಿ, “ಪ್ರೀತಿಯ ರಂಗಾಯಣ ರಘು ಸರ್ ಅವರಿಗೆ “ಟಗರುಪಲ್ಯ” ಸಿನಿತಂಡದಿಂದ ಹುಟ್ಟು ಹಬ್ಬದ ಶುಭಾಶಯಗಳು” ಎಂದು ಶುಭ ಹಾರೈಸಿದ್ದಾರೆ. ಇನ್ನು ಕೌಸಲ್ಯಾ ಸುಪ್ರಜಾ ರಾಮ ಸಿನಿತಂಡದಿಂದ ನಿರ್ದೇಶಕ ಶಶಾಂಕ್,”ಕನ್ನಡಿಗರು ಎಂದಿಗೂ ಮರೆಯದಂತಹ ಹಲವಾರು ಅದ್ಭುತ ಪಾತ್ರಗಳಲ್ಲಿ ಅಭಿನಯಿಸಿದ್ದೀರಿ.. ಕೌಸಲ್ಯಾಸುಪ್ರಜಾರಾಮ ಚಿತ್ರದ “ಸಿದ್ದೇಗೌಡ” ಪಾತ್ರ ಸಹ ಆ ಸಾಲಿಗೆ ಸೇರುತ್ತದೆ ಎಂಬುದು ನಮ್ಮ ನಂಬಿಕೆ. ಹುಟ್ಟು ಹಬ್ಬದ ಶುಭಾಶಯಗಳು ರಘು ಸರ್” ಎಕನ್ನಡಿಗರು ಎಂದಿಗೂ ಮರೆಯದಂತಹ ಹಲವಾರು ಅದ್ಭುತ ಪಾತ್ರಗಳಲ್ಲಿ ಅಭಿನಯಿಸಿದ್ದೀರಿ.. ಕೌಸಲ್ಯಾಸುಪ್ರಜಾರಾಮ ಚಿತ್ರದ *ಸಿದ್ದೇಗೌಡ” ಪಾತ್ರ ಸಹ ಆ ಸಾಲಿಗೆ ಸೇರುತ್ತದೆ ಎಂಬುದು ನಮ್ಮ ನಂಬಿಕೆ. ಹುಟ್ಟು ಹಬ್ಬದ ಶುಭಾಶಯಗಳು ರಘು ಸರ್” ಎಂದು ಶುಭ ಕೋರಿದ್ದಾರೆ. ಬಾನದಾರಿಯಲಿ ನಿರ್ದೇಶಕ ಪ್ರೀತಂ ಗುಬ್ಬಿ, “ನಮ್ಮ ನೆಚ್ಚಿನ ರಘು ಅಣ್ಣನಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಶುಭ ಹಾರೈಸಿದ್ದಾರೆ.
ಪ್ರೀತಿಯ ರಂಗಾಯಣ ರಘು ಸರ್ ಅವರಿಗೆ “ಟಗರುಪಲ್ಯ” ಚಿತ್ರತಂಡದಿಂದ ಹುಟ್ಟು ಹಬ್ಬದ ಶುಭಾಶಯಗಳು❤️ pic.twitter.com/UaiYtberF4
— Dhananjaya (@Dhananjayaka) April 17, 2023
ಕನ್ನಡಿಗರು ಎಂದಿಗೂ ಮರೆಯದಂತಹ ಹಲವಾರು ಅದ್ಭುತ ಪಾತ್ರಗಳಲ್ಲಿ ಅಭಿನಯಿಸಿದ್ದೀರಿ.. #ಕೌಸಲ್ಯಾಸುಪ್ರಜಾರಾಮ ಚಿತ್ರದ *ಸಿದ್ದೇಗೌಡ” ಪಾತ್ರ ಸಹ ಆ ಸಾಲಿಗೆ ಸೇರುತ್ತದೆ ಎಂಬುದು ನಮ್ಮ ನಂಬಿಕೆ. ಹುಟ್ಟು ಹಬ್ಬದ ಶುಭಾಶಯಗಳು ರಘು ಸರ್ 💐 pic.twitter.com/6iwIdcc1Dv
— Shashank (@Shashank_dir) April 17, 2023
ಇದನ್ನೂ ಓದಿ : ಧೂಮಮ್ ಫಸ್ಟ್ ಲುಕ್ ರಿಲೀಸ್ ಮಾಡಿದ ಹೊಂಬಾಳೆ ಫಿಲ್ಮ್ ಸಂಸ್ಥೆ
ಇದನ್ನೂ ಓದಿ : ಸರಿಗಮಪ ಸೀಸನ್ 19 : ಫಿನಾಲೆ ಗೆದ್ದ ಹಳ್ಳಿ ಪ್ರತಿಭೆ ಪ್ರಗತಿ ಬಡಿಗೇರ್
Happy birthday to our favourite Raghu Anna 🤗😇 #Baandariyalli 🌈 pic.twitter.com/N6KNFcsP2d
— preetham gubbi (@preethamgubbi) April 17, 2023
ಆರಂಭಿಕ ದಿನಗಳಲ್ಲಿ ರಂಗಾಯಣ ರಘು ಅವರು 1988 ರಿಂದ 1999 ರವರೆಗೆ ಬಿ.ವಿ. ಕಾರಂತ್ ಅವರ ರಂಗಭೂಮಿ ತಂಡ ರಂಗಾಯಣದಲ್ಲಿ ರಂಗ ನಟರಾಗಿ ಕೆಲಸ ಮಾರುತ್ತಿದ್ದರು. ಅವರು 1995 ರಲ್ಲಿ ಸುಗ್ಗಿ ಸಿನಿಮಾದ ಮೂಲಕ ಸಿನಿಲೋಕಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಅದು ತೆರೆ ಕಂಡಿರುವುದಿಲ್ಲ. 2007 ರಲ್ಲಿ ತೆರೆಕಂಡ ದುನಿಯಾ ಸಿನಿಮಾದಲ್ಲಿನ ಅವರ ಅಭಿನಯಕ್ಕಾಗಿ ಅವರು ಅತ್ಯುತ್ತಮ ಪೋಷಕನಟನಾಗಿ ಗುರುತಿಸಲ್ಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಅವರಿಗೆ ಅತ್ಯುತ್ತಮ ಪೋಷಕ ನಟನ ಪಾತ್ರಕ್ಕಾಗಿ ಅವರ ಎರಡನೇ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.
Rangayana Raghu Birthday: Film crews wished comedian Rangayana Raghu on his birthday.