ಭಾರತೀಯ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಕತೆಯನ್ನು ಆಧರಿಸಿ ಕಪಿಲ್ ದೇವ್ ಅವರ ಕಥೆಯನ್ನು ಪ್ರಮುಖವಾಗಿಟ್ಟು ಕೊಂಡು ತೆರೆಗೆ ಬರಲು ಸಿದ್ಧವಾಗಿದೆ 83 ಸಿನಿಮಾ. ರಣವೀರ್ ಸಿಂಗ್ ( Ranveer Singh) ನಟನೆಯ ಈ ಸಿನಿಮಾ ಭಾರತೀಯ ಕ್ರಿಕೆಟ್ ಇತಿಹಾಸದ ಸುವರ್ಣಾಕ್ಷರವನ್ನು ದಾಖಲಿಸುವ ಈ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಆದರೆ ಈಗ ಸಿನಿಮಾ ರಿಲೀಸ್ ಗೂ ಮುನ್ನವೇ ಚಿತ್ರತಂಡಕ್ಕೆ ಸಂಕಷ್ಟವೊಂದು ಎದುರಾಗಿದ್ದು, ಇದೀಗ ಚಿತ್ರದ ನಿರ್ಮಾಪಕರಾದ ದೀಪಿಕಾ ಪಡುಕೋಣೆ (Deepika Padukone) , ಸಾಜಿದ್ ನಾಡಿಯಡ್ವಾಲಾ, ಕಬೀರ್ ಖಾನ್ ವಿರುದ್ಧ ಕೋಟ್ಯಾಂತರ ರೂಪಾಯಿ ವಂಚನೆ (83 movie Cheating Complaint) ಪ್ರಕರಣ ದಾಖಲಾಗಿದೆ.
83 ಸಿನಿಮಾ ಭಾರತೀಯ ಕ್ರಿಕೆಟ್ ಆಟಗಾರ, ನಾಯಕ ದೇವ್ ನೇತೃತ್ವದಲ್ಲಿ ವಿಶ್ವಕಪ್ ಗೆದ್ದ ಕತೆಯನ್ನು ತೆರೆಗೆ ತರಲು ಸಿದ್ಧವಾಗಿದೆ. ಈಗಾಗಲೇ ತೆರೆಗೆ ಬರಲು ಸಿದ್ಧವಾಗಿರುವ ಸಿನಿಮಾ ರಣ್ಬೀರ್ ಸಿಂಗ್ ಕೆರಿಯರ್ ನ ಪ್ರಮುಖ ಸಿನಿಮಾ ಎಂದೇ ಬಿಂಬಿತವಾಗಿದೆ. ಇದೇ ಡಿಸೆಂಬರ್ 24 ರಂದು ಸಿನಿಮಾರಿಲೀಸ್ ಆಗಲಿದೆ.
ಹಿಂದಿ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯಲ್ಲಿ 83 ಏಕಕಾಲಕ್ಕೆ ಥಿಯೇಟರ್ ಗೆ ಬರಲಿದೆ. ಸಿನಿಮಾದ ಪ್ರಮೋಶನ್ ಕೂಡ ಅದ್ದೂರಿಯಾಗಿ ನಡೆದಿದ್ದು ಕಿಚ್ಚ ಸುದೀಪ್ ಸೇರಿದಂತೆ ಹಲವರು ಚಿತ್ರ ರಿಲೀಸ್ ಆಗೋದನ್ನು ಕಾಯ್ತಿರೋದಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಆದರೆ ಈಗ ಚಿತ್ರದ ನಿರ್ಮಾಪಕರ ಮೇಲೆ ವಂಚನೆ ಆರೋಪ ಕೇಳಿಬಂದಿದ್ದು ದೂರುದಾರರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಚಿತ್ರದ ನಿರ್ಮಾಪಕರುಗಳಾದ ದೀಪಿಕಾ ಪಡುಕೋಣೆ, ಸಾಜಿದ್ ನಾಡಿಯಡ್ವಾಲಾ, ಕಬೀರ್ ಖಾನ್ ವಿರುದ್ಧ ದುಬೈ ಮೂಲದ ಯುನೈಟೆಡ್ ಅರಬ್ ಎಮಿರೈಟ್ಸ್ ಕಂಪನಿ ವಂಚನೆ ದೂರು ಸಲ್ಲಿಸಿದೆ. ಈ ಫೈನಾನ್ಸ್ ಕಂಪನಿಯು ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಿರ್ಮಾಪಕರು ಚಿತ್ರದ ಹಕ್ಕುಗಳನ್ನು ಮಾರಾಟ ಮಾಡುವ ವಿಚಾರದಲ್ಲಿ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.
ಈ ಬಗ್ಗೆ ವಿವರವಾದ ದೂರು ಸಲ್ಲಿಸಿರುವ ಕಂಪನಿ, ಫೈನಾನ್ಸ್ ಕಂಪನಿಗೆ ಒಳ್ಳೆಯ ಆದಾಯದ ಆಮಿಷ ಒಡ್ಡಿ 16 ಕೋಟಿ ರೂಪಾಯಿ ಹೂಡಿಕೆ ಮಾಡಿಸಿಕೊಳ್ಳಲಾಗಿದೆ . ಆದರೆ ಈಗ ಚಿತ್ರದ ಹಕ್ಕುಗಳ ಮಾರಾಟದ ವೇಳೆ ನಮಗೆ ವಂಚಿಸಲಾಗುತ್ತಿದೆ ಎಂದು ಕಂಪನಿ ಪರ ವಕೀಲ ರಿಜ್ವಾನ್ ಸಿದ್ದಿಕಿ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಿರ್ಮಾಪಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ದೂರಿನಲ್ಲಿ ವಿಬ್ರಿ ಮೀಡಿಯಾ ಹಾಗೂ ನಿರ್ಮಾಪಕರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ನ್ಯಾಯಲಯ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲಿದ್ದು ಒಂದೊಮ್ಮೆ ವಂಚನೆ ಪ್ರಕರಣದಲ್ಲಿ ನಿರ್ಮಾಪಕರ ತಪ್ಪು ಸಾಬೀತಾದಲ್ಲಿ ಇದು ಚಿತ್ರದ ರಿಲೀಸ್ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ : IMDb Top 10 Indian Films of 2021 : ಭಾರತದ ಟಾಪ್ 10 ಸಿನಿಮಾ, ವೆಬ್ ಸಿರೀಸ್ ಪಟ್ಟಿ ರಿಲೀಸ್ ಮಾಡಿದ IMDb
ಇದನ್ನೂ ಓದಿ : Vaibhavi Shandilya : ಮಾರ್ಟಿನ್ ನಲ್ಲಿ ಮಾದಕ ಬೆಡಗಿ : ಧ್ರುವ ಸರ್ಜಾಗೆ ಜೊತೆಯಾಗ್ತಾರೆ ವೈಭವಿ ಶಾಂಡಿಲ್ಯ
ಇದನ್ನೂ ಓದಿ : Samantha Ruth Prabhu Pushpa : ಪುಷ್ಪ ಸಿನಿಮಾ ರಂಗೇರಿಸಿದ ಸಮಂತಾ: ಐಟಂ ಸಾಂಗ್ ಲುಕ್ ಗೆ ಫ್ಯಾನ್ಸ್ ಫಿದಾ
( Ranveer Singh Starrer 83 movie Cheating Complaint against Deepika Padukone)