ಸೋಮವಾರ, ಏಪ್ರಿಲ್ 28, 2025
HomeCinemaRashmika Remuneration : ಟಾಪ್ ಸಂಭಾವನೆ ಪಟ್ಟಿಯಲ್ಲಿ ಎರಡನೇ ಸ್ಥಾನ : ಅನುಷ್ಕಾ, ಸಮಂತಾ ಹಿಂದಿಕ್ಕಿದ...

Rashmika Remuneration : ಟಾಪ್ ಸಂಭಾವನೆ ಪಟ್ಟಿಯಲ್ಲಿ ಎರಡನೇ ಸ್ಥಾನ : ಅನುಷ್ಕಾ, ಸಮಂತಾ ಹಿಂದಿಕ್ಕಿದ ರಶ್ಮಿಕಾ

- Advertisement -

ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ ನಟಿ ರಶ್ಮಿಕಾ ಮಂದಣ್ಣ. ಸ್ಯಾಂಡಲ್ ವುಡ್ ನಿಂದ ಪಯಣ ಆರಂಭಿಸಿದ ರಶ್ಮಿಕಾ ಈಗ ಸೌತ್ ಸಿನಿ ಇಂಡಸ್ಟ್ರಿಯ ಬಹುಬೇಡಿಕೆಯ ನಟಿ. ಕನ್ನಡದ ಸ್ಟಾರ್ ನಟರ ಜೊತೆ ಸ್ಕ್ರಿನ್ ಹಂಚಿಕೊಂಡು ಗೆದ್ದ ರಶ್ಮಿಕಾ ಸದ್ಯ ತೆಲುಗಿನಲ್ಲಿ ತಮ್ಮ ವಿಜಯಯಾತ್ರೆ ಮುಂದುವರೆಸಿದ್ದಾರೆ. ಪುಷ್ಪ ಗೆಲುವಿನ ಖುಷಿಯಲ್ಲಿ ಸಂಭಾವನೆ ಏರಿಸಿಕೊಂಡಿರೋ ರಶ್ಮಿಕಾ (Rashmika Remuneration) ಸೌತ್ ಸಿನಿ ಇಂಡಸ್ಟ್ರಿಯ ಟಾಪ್ ಫೈವ್ ನಟಿಯರಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಸೌತ್ ಇಂಡಸ್ಟ್ರಿಯಲ್ಲಿ ಪ್ರತಿಭಾವಂತ ನಟಿಯರಿಗೇನು ಕಡಿಮೆ ಇಲ್ಲ. ಒಬ್ಬರಿಗಿಂತ ಒಬ್ಬರೂ ಮಿಂಚುತ್ತಲೇ ಇದ್ದಾರೆ. ಟಾಲಿವುಡ್ ನಲ್ಲಂತೂ ಸಮಂತಾ,ಕೀರ್ತಿ ಸುರೇಶ್,ಅನುಷ್ಕಾ, ಪೂಜಾ ಹೆಗ್ಡೆ ಹೀಗೆ ಟಾಪ್ ಹೀರೋಯಿನ್ಸ್ ಗಳೇ ಇದ್ದಾರೆ. ಇವರೆಲ್ಲರ ಪೈಕಿ ಸದ್ಯ ರಶ್ಮಿಕಾ ಬೇಡಿಕೆ ಹೆಚ್ಚಿಸಿಕೊಂಡಿದ್ದು ಜೊತೆಗೆ ಸಂಭಾವನೆಯನ್ನು ಜಾಸ್ತಿ ಮಾಡಿಕೊಂಡಿದ್ದಾರಂತೆ. ಟಾಲಿವುಡ್ ನಲ್ಲಿ ನಟಿಸಿದ ಬಹುತೇಕ ಚಿತ್ರಗಳು ಹಿಟ್ ಆಗಿರೋದು ರಶ್ಮಿಕಾ ಈ ಬದಲಾವಣೆಗೆ ಕಾರಣವಾಗಿದೆ.

ಸಿನಿಮಾವೊಂದಕ್ಕೆ ೩.೫ ಕೋಟಿ ಸಂಭಾವನೆ ಪಡೆಯುವ ಬಾಲಿವುಡ್ ಹಾಗೂ ಟಾಲಿವುಡ್ ಬೆಡಗಿ ಪೂಜಾ ಹೆಗ್ಡೆ ಮೊದಲ ಸ್ಥಾನದಲ್ಲಿದ್ದಾರೆ‌. ಸ್ಟಾರ್ ನಟರ ಸಿನಿಮಾ ಅಂದಾಕ್ಷಣ ಪೂಜಾ ಹೆಗ್ಡೆಗೆ ನಾಯಕಿ ಪಾತ್ರಕ್ಕೆ ಕರೆಬರುವಷ್ಟರ ಮಟ್ಟಿಗೆ ಪೂಜಾ ತೆಲುಗು ಪ್ರೇಕ್ಷಕರ ಮನಗೆದ್ದಿದ್ದಾರೆ. ಇನ್ನು ರಶ್ಮಿಕಾ ಸದ್ಯ ಎರಡನೆ ಸ್ಥಾನದಲ್ಲಿದ್ದು ರಶ್ಮಿಕಾ ಈಗ ಚಿತ್ರವೊಂದಕ್ಕೆ ಪಡೆಯೋ ಸಂಭಾವನೆ 3 ಕೋಟಿ. 1 ಕೋಟಿ ಸಂಭಾವನೆಯ ಆಸುಪಾಸಿನಲ್ಲಿದ್ದ ರಶ್ಮಿಕಾ ಮಂದಣ್ಣ, ಪುಷ್ಪ ಗೆಲುವಿನ ಬಳಿಕ ತಮ್ಮ ಕಲೆಯ ಬೆಲೆ ಹೆಚ್ಚಿಸಿದ್ದಾರೆ.

ಪುಷ್ಪ 2 ಸಿನಿಮಾಗೆ ರಶ್ಮಿಕಾ ಬರೋಬ್ಬರಿ 3 ಕೋಟಿ ಸಂಭಾವನೆ ಪಡೆದು ಸೆಟ್ ಗೆ ಮರಳಿದ್ದಾರಂತೆ. ಕನ್ನಡದ ಸ್ಟಾರ್ ನಟರ ಜೊತೆ ನಟಿಸಿ‌ ಗೆದ್ದ ರಶ್ಮಿಕಾ ಅತಿ ಕಡಿಮೆ ಸಮಯದಲ್ಲಿ ಸಿಕ್ಕ ಯಶಸ್ಸಿನಿಂದ ಬಹುಭಾಷಾ ನಟಿಯಾಗಿ ಮಿಂಚಲಾರಂಭಿಸಿದ್ದು ಈಗಾಗಲೇ ಬಾಲಿವುಡ್ ನ ಎರಡು ಸಿನಿಮಾಗಳಲ್ಲಿ ರಶ್ಮಿಕಾ ನಟಿಸಿದ್ದಾರೆ. ಇನ್ನು ಟಾಲಿವುಡ್ ನಲ್ಲಿ ಇಷ್ಟು ವರ್ಷಗಳಿಂದಲೂ ಸಕ್ರಿಯವಾಗಿರೋ ಸಮಂತಾ,ಅನುಷ್ಕಾ ಹಾಗೂ ಕೀರ್ತಿ ಸುರೇಶ್ ಸದ್ಯ ಸಿನಿಮಾವೊಂದಕ್ಕೆ 2 ಕೋಟಿ ಸಂಭಾವನೆ ಪಡೆಯುತ್ತಿದ್ದು, ನಟಿ ರಶ್ಮಿಕಾ ಇವರನ್ನೆಲ್ಲ ಮೀರಿಸಿ ತಮ್ಮ ಸಿನಿ ಪಯಣ ಮುಂದುವರೆಸಿದ್ದಾರೆ.

ಇದನ್ನೂ ಓದಿ : ಡಿ ಬಾಸ್ ಬರ್ತಡೆಗೇ ದಿನಗಣನೆ : ಅಭಿಮಾನಿಗಳಿಗೆ ಬಂತು ವಿಶೇಷ ಪತ್ರ

ಇದನ್ನೂ ಓದಿ : ಕ್ಯಾಮರಾ ಎದುರೇ ಟವೆಲ್ ಕಿತ್ತೆಸೆದ ನಿವೇದಿತಾ ಗೌಡ: ಚಂದನ್ ಪರದಾಟ ಹೇಗಿತ್ತು ನೋಡಿ

( Rashmika Mandanna Second place on the top remuneration list is Anushka, followed by Samantha)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular