Rashmika Mandanna : ಬಾಲಿವುಡ್ ನಟ ಟೈಗರ್ ಶ್ರಾಫ್ ಧರ್ಮ ಪ್ರಾಡಕ್ಷನ್ನ ಮತ್ತೊಂದು ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಹೀಗಾಗಿ ಈಗಾಗಲೇ ಅವರು ತಮ್ಮ ಸಿನಿಮಾಗಾಗಿ ತಯಾರಿಯನ್ನು ಆರಂಭಿಸಿದ್ದಾರೆ. ವಿಶೇಷ ಅಂದರೆ ಇದೀಗ ಈ ಸಿನಿಮಾದ ನಾಯಕಿ ಯಾರು ಎಂಬ ವಿಚಾರವಾಗಿ ಬಿ ಟೌನ್ನಲ್ಲಿ ಗುಸು ಗುಸು ಆರಂಭವಾಗಿದ್ದು ಮೂಲಗಳ ಪ್ರಕಾರ ಈ ಬಾರಿ ಟೈಗರ್ ಶ್ರಾಫ್ಗೆ ಜೋಡಿಯಾಗಿ ನಟಿ ರಶ್ಮಿಕಾ ಮಂದಣ್ಣಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸಿನಿಮಾಗೆ ಶಶಾಂಕ್ ಖೈತಾನ್ ಆ್ಯಕ್ಷನ್ ಕಟ್ ಹೇಳುತ್ತಿದ್ದು ಟೈಗರ್ ಶ್ರಾಫ್ಗೆ ಈ ಬಾರಿ ಹೊಸ ನಾಯಕಿಯನ್ನು ಹುಡುಕಬೇಕು ಎಂದು ಯೋಚಿಸಿದ್ದರಂತೆ ಅದೇ ರೀತಿ ಈ ಸಿನಿಮಾಗೆ ಈ ಬಾರಿ ಟೈಗರ್ ಹಾಗೂ ರಶ್ಮಿಕಾ ಮಂದಣ್ಣರನ್ನು ಆಯ್ಕೆ ಮಾಡೋಣ ಎಂದು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಟೈಗರ್ ಶ್ರಾಫ್ ಹಾಗೂ ರಶ್ಮಿಕಾ ಮಂದಣ್ಣ ಶೀಘ್ರದಲ್ಲಿಯೇ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತ ಹಾಗೂ ವಿದೇಶಗಳಲ್ಲಿ ಸಿನಿಮಾ ಶೂಟಿಂಗ್ ಮಾಡಲು ಚಿತ್ರತಂಡ ಉದ್ದೇಶಿಸಿದೆ. ಚಿತ್ರದಲ್ಲಿ ಟೈಗರ್ ಯಂಗ್ ಹಾಗೂ ಸ್ಪೋರ್ಟಿ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಟೈಗರ್ ಸಾಕಷ್ಟು ಸಾಹಸ ದೃಶ್ಯಗಳನ್ನು ಪ್ರದರ್ಶಿಸಲಿದ್ದಾರೆ. ಟೈಗರ್ ಇಲ್ಲಿಯವರೆಗೆ ನಿಭಾಯಿಸಿದ ಎಲ್ಲಾ ಸಿನಿಮಾ ಪಾತ್ರಗಳಿಗಿಂತ ಇದು ವಿಭಿನ್ನವಾಗಿದೆ ಎಂದು ಹೇಳಲಾಗ್ತಿದೆ.

ಇನ್ನೂ ಹೆಸರಿಡದ ಈ ಸಿನಿಮಾದ ಪಾತ್ರಗಳು ಹಾಗೂ ಕತೆಯ ಬಗ್ಗೆ ಚಿತ್ರತಂಡ ಇನ್ನು ಯಾವುದೇ ಹೆಚ್ಚಿನ ವಿವರಗಳನ್ನು ಬಾಯ್ಬಿಟ್ಟಿಲ್ಲ. ಕಳೆದ ಕೆಲವು ತಿಂಗಳಿನಿಂದ ಕರಣ್ ಜೋಹರ್ ಕಚೇರಿಯ ಆವರಣಗಳಲ್ಲಿ ಕಾಣಿಸಿಕೊಳ್ತಿದ್ದ ರಶ್ಮಿಕಾ ಮಂದಣ್ಣಗೆ ಇದು ಧರ್ಮ ಪ್ರಾಡಕ್ಷನ್ನಡಿಯಲ್ಲಿ ಮೊದಲ ಸಿನಿಮಾವಾಗಿದೆ. ನಟಿ ರಶ್ಮಿಕಾ ಪುಷ್ಪಾ : ದಿ ರೂಲ್ ಹಾಗೂ ಇನ್ನೂ ಹೆಸರಿಡದ ಈ ಬಾಲಿವುಡ್ನ ಸಿನಿಮಾದ ಶೂಟಿಂಗ್ನಲ್ಲಿ ಸಧ್ಯದಲ್ಲೇ ಬ್ಯುಸಿಯಾಗಲಿದ್ದಾರೆ . ಇತ್ತ ಟೈಗರ್ ಶ್ರಾಫ್ ವಿಕಾಸ್ ಬಹ್ಲ್ ನಿರ್ದೇಶನದ ಗಣಪತ್ ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಇದು ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ.
ಇದನ್ನು ಓದಿ : Petrol will be banned : ದೇಶದಲ್ಲಿ ಶೀಘ್ರದಲ್ಲೇ ಪೆಟ್ರೋಲ್ಗೆ ನಿಷೇಧ : ಕೇಂದ್ರ ಸಚಿವ ನಿತಿನ್ ಗಡ್ಕರಿ ಅಚ್ಚರಿಯ ಹೇಳಿಕೆ
ಇದನ್ನೂ ಓದಿ : ಬ್ಯಾಟಿಂಗ್ ದಿಗ್ಗಜನ ಮಹಾಪತನ, 6 ವರ್ಷಗಳಲ್ಲಿ ಮೊದಲ ಬಾರಿ ಟಾಪ್-10ನಿಂದ ವಿರಾಟ್ ಕೊಹ್ಲಿ ಔಟ್ !
Rashmika Mandanna teams up with Tiger Shroff on Shashank Khaitan’s next – Karan Johar to produce