ಸದ್ಯ ಸೌತ್ ಇಂಡಸ್ಟ್ರಿ ಯಿಂದ ಆರಂಭಿಸಿ ಬಾಲಿವುಡ್ ತನಕ ಕೇಳಿ ಬರ್ತಿರೋ ಒಂದೇ ಒಂದು ಹೆಸರು ರಶ್ಮಿಕಾಮಂದಣ್ಣ ( Rashmika Mandanna). ಸದ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ರಶ್ಮಿಕಾ ಮಂದಣ್ಣ ಇರೋ ಸಿನಿಮಾಗಳ ಜೊತೆ ಮತ್ತಷ್ಟು ಸಿನಿಮಾಗಳಿಗೆ ಸಹಿ ಹಾಕಿದ್ದು , ಆಫ್ರಿನ್ ಪಾತ್ರದಲ್ಲೂ ಮಿಂಚಲು ಸಿದ್ಧವಾಗಿದ್ದಾರೆ.

ಬಹುಭಾಷಾ ನಟಿ, ಪುಷ್ಪ ಬೆಡಗಿ, ಸೌತ್ ಸುಂದರಿ ನಟಿ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದ ಯಶಸ್ಸಿನ ಖುಷಿಯಲ್ಲಿ ಪುಷ್ಪ ಸಿಕ್ವೆನ್ಸ್ ಟೂಗೆ ಸಜ್ಜಾಗಿದ್ದಾರೆ. ಇದರ ಮಧ್ಯೆಯೇ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಇದೇ ಖುಷಿಯಲ್ಲಿ ರಶ್ಮಿಕಾ ಎರಡೆರಡು ಹೊಸ ಸಿನಿಮಾಗೆ ಸಿದ್ಧವಾಗಿದ್ದು, ಎರಡು ಚಿತ್ರಗಳ ಪೋಸ್ಟರ್ ಹಾಗೂ ಟೀಸರ್ ಬರ್ತಡೇ ಗಿಫ್ಟ್ ರೂಪದಲ್ಲಿ ರಶ್ಮಿಕಾಗೆ ಸಿಕ್ಕಿದೆ.

ಹನು ರಾಘವಪುಡಿ ಸಿನಿಮಾದಲ್ಲಿ ಆಫ್ರೀನ್ ಎಂಬ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಫರ್ಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಇದರಲ್ಲಿ ರಶ್ಮಿಕಾ ಹಿಂದೆಂದಿಗಿಂತ ವಿಭಿನ್ನವಾಗಿ ಹಿಜಾಬ್ ಧರಿಸಿಕೊಂಡು ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲ ಬಿಡುಗೆಯಾಗಿರುವ ಮೋಶನ್ ಪೋಸ್ಟರ್ ನಲ್ಲಿ ರಶ್ಮಿಕಾ ಸುಡುತ್ತಿರುವ ಕಾರುಗಳ ಮಧ್ಯೆ ಸಖತ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ಇದಲ್ಲದೇ ತಮಿಳು ಖ್ಯಾತ ನಟ ದಳಪತಿ ವಿಜಯ್ ಗೂ ಜೋಡಿಯಾಗಿ ರಶ್ಮಿಕಾ ನಟಿಸುತ್ತಿದ್ದು, ಇದು ತಮಿಳಿನ ಖ್ಯಾತ ನಟ ವಿಜಯ್ ಅವರ 66 ನೇ ಸಿನಿಮಾವಾಗಿದೆ. ಈ ಸಿನಿಮಾವನ್ನು ವಂಶಿ ನಿರ್ದೇಶಿಸುತ್ತಿದ್ದಾರೆ. ಮಹರ್ಷಿ, ಯೆವಡು,ಊಪಿರಿ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ ವಂಶಿ ಈಗ ರಶ್ಮಿಕಾ ಹಾಗೂ ವಿಜಯ್ ಗೆ ಆಕ್ಷ್ಯನ್ ಕಟ್ ಹೇಳಲಿದ್ದಾರೆ. ಇನ್ನು ಇದುವರೆಗೂ ಬಬ್ಲಿ ಪಾತ್ರದಲ್ಲಿ ನಟಿಸುತ್ತಿದ್ದ ರಶ್ಮಿಕಾ, ಆಫ್ರಿನ್ ಸಿನಿಮಾದ ಮೂಲಕ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಸಿನಿಮಾದ ಲೆಫ್ಟಿನೆಂಟ್ ರಾಮ್ ನ ಪಾತ್ರದಲ್ಲಿ ಮಲೆಯಾಳಂನ ನಟ ದುಲ್ಕರ್ ಸಲ್ಮಾನ್ ನಟಿಸಿದ್ದಾರೆ.

2016 ರಲ್ಲಿ ಕನ್ನಡದ ಕಿರಿಕ್ ಪಾರ್ಟಿ ಮೂಲಕ ಕೆರಿಯರ್ ಆರಂಭಿಸಿದ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ನಟಿಯಾಗಿ ಬೆಳೆದು ನಿಂತಿದ್ದು, ಟಾಲಿವುಡ್ ನ ಗೀತಾ ಗೋವಿಂದಂ, ದೇವದಾಸ್, ಸರಿಲೇರು ನೀಕ್ವೆವರು, ಡಿಯರ್ ಕಾಮ್ರೆಡ್ ಸೇರಿದಂತೆ ಹಲವು ಸಿನಿಮಾಗಳಿಂದ ಹೆಸರು ಗಳಿಸಿದ್ದಾರೆ. ಸದ್ಯ ಬಾಲಿವುಡ್ ನ ಮಿಶನ್ ಮಜ್ನು ಹಾಗೂ ಗುಡ್ ಬೈ ಸಿನಿಮಾಗಳು ರಿಲೀಸ್ ಗೆ ಸಿದ್ಧವಾಗಿದೆ.
What can possibly be a better birthday gift? 🌸@directorvamshi @svc_official @actorvijay#thalapathy66 pic.twitter.com/FvNUkUcgOl
— Rashmika Mandanna (@iamRashmika) April 5, 2022
ಇದನ್ನೂ ಓದಿ : ನಟ ಕಿಚ್ಚ ಸುದೀಪ್ ಕಬ್ಜ ತೊರೆದಿಲ್ಲ! ಗಾಳಿ ಸುದ್ದಿಗೆ ಕಿವಿಗೊಡಬೇಡಿ : ನಿರ್ದೇಶಕ ಆರ್ ಚಂದ್ರು
ಇದನ್ನೂ ಓದಿ : ಶುರುವಾಗ್ತಿದೆ ಬಿಗ್ ಬಿ ಅಭಿಮಾನಿಗಳಿಗೆ ದರ್ಶನ ಭಾಗ್ಯ!
Rashmika Mandanna wearing a hijab, Birthday Released new photos