ಸೋಮವಾರ, ಏಪ್ರಿಲ್ 28, 2025
HomeCinemaಹಿಂದಿ ಸಿನಿಮಾಕ್ಕೆ ಮನಸೋತ ನ್ಯಾಶನಲ್ ಕ್ರಶ್: ಹಿಂದಿನಟನಿಗೆ ಸೂಪರ್ ಸ್ಟಾರ್ ಪಟ್ಟ ಕೊಟ್ಟ ರಶ್ಮಿಕಾ

ಹಿಂದಿ ಸಿನಿಮಾಕ್ಕೆ ಮನಸೋತ ನ್ಯಾಶನಲ್ ಕ್ರಶ್: ಹಿಂದಿನಟನಿಗೆ ಸೂಪರ್ ಸ್ಟಾರ್ ಪಟ್ಟ ಕೊಟ್ಟ ರಶ್ಮಿಕಾ

- Advertisement -

ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇದ್ದರೂ ಬೇರೆ ಚಿತ್ರಗಳ ಬಗ್ಗೆ ಅಪ್ಪಿ ತಪ್ಪಿಯೂ ಕಮೆಂಟ್ ಮಾಡದಷ್ಟು ರೀಸರ್ವ್ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ. ಆದರೆ ಅಪರೂಪಕ್ಕೊಮ್ಮೆ ಹಿಂದಿ ಸಿನಿಮಾವೊಂದರ ಬಗ್ಗೆ ಮನಬಿಚ್ಚಿ ಹೊಗಳಿರೋ ರಶ್ಮಿಕಾ ನಟನಿಗೆ ಸೂಪರ್ ಸ್ಟಾರ್ ಎಂಬ ಬಿರುದನ್ನು ನೀಡಿದ್ದಾರೆ.

ಸದ್ಯ ಹಿಂದಿ,ತಮಿಳು ಹಾಗೂ ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿರು ರಶ್ಮಿಕಾ, ಸಿಕ್ಕಿರೋ ಫ್ರೀ ಟೈಂನಲ್ಲಿ ಶೇರ್ಷಾ ಸಿನಿಮಾವನ್ನು ನೋಡಿದ್ದಾರೆ. ಅಮೇಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿರೋ ಸಿನಿಮಾ ನೋಡಿದ ರಶ್ಮಿಕಾ ಸಿನಿಮಾದ ಬಗ್ಗೆ ಹೃದಯತುಂಬಿದ ಕಮೆಂಟ್ ಬರೆದಿದ್ದು, ಚಿತ್ರ ವೀಕ್ಷಿಸಿ ಅಂತ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ.

https://instagram.com/rashmika_mandanna?utm_medium=copy_link

ಶೇರ್ಷಾ ಸಿನಿಮಾ ನೋಡಿದೆ. ತ್ಯಾಗ ಬಲಿದಾನದಿಂದ ನಮ್ಮನ್ನೆಲ್ಲ ಭದ್ರತೆಯಿಂದ ನೋಡಿಕೊಳ್ಳುವ ಕುಟುಂಬಗಳಿಗೆ ವಂದನೆ. ಸಿದ್ಧಾರ್ಥ ಮಲ್ಹೋತ್ರಾ ನೀನೊಬ್ಬ ಸೂಪರ್ ಸ್ಟಾರ್. ಪಾತ್ರದಲ್ಲಿ ತುಂಬಾ ಅದ್ಭುತವಾಗಿ ನಟಿಸಿದ್ದೀರಾ. ಕಿಯಾರಾ ಅಡ್ವಾಣಿ ನಿಮ್ಮ ಗುಳಿಬೀಳುವ ಕೆನ್ನೆಗೆ ನಾನು ಮರುಳಾದೆ. ನಿಮ್ಮಿಬ್ಬರ ಕೆಮೆಸ್ಟ್ರಿ ಅದ್ಭುತವಾಗಿದೆ. ಕರಣ ಜೋಹರ್ ಸರ್ ನಿಮಗೆ ಅಭಿನಂದನೆ ಎಂದು ರಶ್ಮಿಕಾ ಬರೆದಿದ್ದಾರೆ.

ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧ ಕ್ಯಾಪ್ಟನ್ ವಿಕ್ರಂ ಭಾತ್ರಾ ಜೀವನಾಧಾರಿತ ಶೇರ್ಷಾ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ವಿಕ್ರಂ ಪಾತ್ರದಲ್ಲಿ ನಟಿಸಿದ್ದಾರೆ. ಕಿಯಾರಾ ನಾಯಕಿ ಪಾತ್ರದಲ್ಲಿದ್ದು, ತಮಿಳಿನ ವಿಷ್ಣವರ್ಧನ್ ಸಿನಿಮಾ ನಿರ್ದೇಶಿಸಿದ್ದಾರೆ. ಸಿನಿಮಾ ಅಮೇಜಾನ್ ಪ್ರೈಂನಲ್ಲಿ ರಿಲೀಸ್ ಆಗಿದ್ದು, ಹಲವು ಸೆಲೆಬ್ರೆಟಿಗಳು ಸಿನಿಮಾನೋಡಿ ಮೆಚ್ಚಿಕೊಂಡಿದ್ದಾರೆ.

RELATED ARTICLES

Most Popular