ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ( Ravichandran mother) ಮಾತೃ ವಿಯೋಗವಾಗಿದೆ. ರವಿಚಂದ್ರನ್ ತಾಯಿ ಪಟ್ಟಮ್ಮಾಳ್ ವೀರ ಸ್ವಾಮಿ ( Pattammal Veeraswamy) ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ಮರೆವಿನ ಕಾಯಿಲೆ ಅಲ್ಜಿಮರ್ ನಿಂದ ಬಳಲುತ್ತಿದ್ದ ರವಿಚಂದ್ರನ್ ತಾಯಿ ಪಟ್ಟಮ್ಮಾಳ ರಾಜಾಜಿನಗರದ ತಮ್ಮ ನಿವಾಸದಲ್ಲೇ ಬೆಳಗ್ಗೆ 7 ಗಂಟೆಗೆ ನಿಧನರಾಗಿದ್ದಾರೆ. ಅವರು ಕಳೆದ ಕೆಲ ವರ್ಷದಿಂದ ಯಾರನ್ನೂ ಗುರುತಿಸುತ್ತಿರಲಿಲ್ಲ ಎನ್ನಲಾಗಿದೆ.
ನಗರದ ಸುಗುಣ ಆಸ್ಪತ್ರೆಯಲ್ಲಿ ಅವರಿಗೆ ಹಲವು ವರ್ಷದಿಂದ ಚಿಕಿತ್ಸೆ ಕೊಡಿಸಲಾಗುತ್ತಿತ್ತು.ಕಳೆದ ನಾಲ್ಕೈದು ವರ್ಷಗಳಿಂದ ಪಟ್ಟಮ್ಮಾಳ್ ಕೇವಲ ರವಿಚಂದ್ರನ್ ಅವರ ಧ್ವನಿಯನ್ನು ಮಾತ್ರ ಗುರುತಿಸುತ್ತಿದ್ದರು ಎನ್ನಲಾಗಿದೆ. ಸದಾ ತಮ್ಮ ಇಂಟರವ್ಯೂವ್ ಗಳಲ್ಲಿ ತಾಯಿ ಬಗ್ಗೆ ಮಾತನಾಡುತ್ತಿದ್ದ ರವಿಚಂದ್ರನ್ ತಾಯಿ ಮತ್ತೊಮ್ಮೆ ನನ್ನ ಗೆಲುವನ್ನು ನೋಡಲು ಕಾದಿದ್ದಾರೆ ಎಂದು ಹೇಳಿಕೊಳ್ಳುತ್ತಲೇ ಇದ್ದರು.
ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾದ ಸಮಯದಲ್ಲೂ ರವಿಚಂದ್ರನ್ ತಾಯಿಯ (Ravichandran mother) ಆರೋಗ್ಯ ತೀವ್ರವಾಗಿ ಕ್ಷೀಣಿಸಿತ್ತು. ಆದರೆ ಬಳಿಕ ಚೇತರಿಸಿಕೊಂಡಿದ್ದರು. ಕಳೆದ 10 ವರ್ಷಗಳ ಹಿಂದೆಯೇ ಪುಟ್ಟಮ್ಮಾಳ್ ಆರೋಗ್ಯ ಕೈಕೊಟ್ಟಿದ್ದು ಅವರಿಗೆ ಮೆದುಳಿನಸಮಸ್ಯೆ ಇದೆ ಎಂದು ವೈದ್ಯರು ರವಿಚಂದ್ರನ್ ಗೆ ಹೇಳಿದ್ದರಂತೆ. ಹೀಗಾಗಿ ಆಸ್ಪತ್ರೆ ಚಿಕಿತ್ಸೆ ಬಳಿಕ ರವಿಚಂದ್ರನ್ ಕುಟುಂಬ ಅವರನ್ನು ಮನೆಯಲ್ಲೇ ಇಟ್ಟುಕೊಂಡು ಆರೈಕೆಮಾಡುತ್ತ ಬಂದಿತ್ತು.
ವೈದ್ಯರು ಪಟ್ಟಮ್ಮಾಳ್ ಒಂದೇ ವರ್ಷ ಬದುಕುತ್ತಾರೆ ಎಂದಿದ್ದರಂತೆ. ಆದರೂ ರವಿಚಂದ್ರನ್ ಸುಮತಿಯವರ ಆರೈಕೆಯಿಂದ ಅವರು 10 ವರ್ಷ ಪೊರೈಸಿದ್ದಾರೆ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ರವಿಚಂದ್ರನ್ ಹೇಳಿಕೊಂಡಿದ್ದರು. ಪಟ್ಟಮ್ಮಾಳ್ ಅವರಿಗೆ ರವಿಚಂದ್ರನ್ ಸೇರಿ ಐವರು ಮಕ್ಕಳಿದ್ದು ಮೂವರು ಹೆಣ್ಣು ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ಸದ್ಯ ರವಿಚಂದ್ರನ್ ನಿವಾಸದಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಿನಿ ರಂಗದ ಗಣ್ಯರು, ರಾಜಕಾರಣಿಗಳು ರವಿಚಂದ್ರನ್ ಆಪ್ತರು ಪಟ್ಟಮ್ಮಾಳ್ ದರ್ಶನ ಪಡೆದು ಕ್ರೇಜಿಸ್ಟಾರ್ ಗೆ ಸಾಂತ್ವನಹೇಳಿದ್ದಾರೆ. ತಾಯಿಯನ್ನು ತುಂಬ ಪ್ರೀತಿಸುತ್ತಿದ್ದ ರವಿಚಂದ್ರನ್ ಅವರೊಂದಿಗಿನ ತಮ್ಮ ನೆನಪು ಹಾಗೂ ಬಾಂಧವ್ಯದ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹಲವು ವಿಚಾರ ಹಂಚಿಕೊಂಡಿದ್ದರು. ಈಗ ರವಿಚಂದ್ರನ್ ಹಲವು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗುತ್ತಿರುವ ವೇಳೆಯಲ್ಲೇ ರವಿಚಂದ್ರನ್ ತಮ್ಮ ಪ್ರೀತಿಯ ತಾಯಿಯನ್ನು ಕಳೆದುಕೊಂಡಿದ್ದು, ದುಃಖದಲ್ಲಿದ್ದಾರೆ.
ಇದನ್ನೂ ಓದಿ : ಪ್ರಥಮ್ ಮೂಲಕ ಹರ್ಷ ಕುಟುಂಬಕ್ಕೆ 5 ಲಕ್ಷ ನೆರವು ನೀಡಿದ ಧ್ರುವ ಸರ್ಜಾ
ಇದನ್ನೂ ಓದಿ : ನೀರ ನಡುವೆ ಹೂವು ಉಯ್ಯಾಲೆಯಲ್ಲಿ ಚಿತ್ತಾರದ ಬೆಡಗಿ : ಮನಸೆಳೆದ ಅಮೂಲ್ಯ ಬೇಬಿ ಬಂಪ್ ಪೋಟೋಶೂಟ್
( sandalwood Actor V. Ravichandran mother Pattammal Veeraswamy death )