ಹುಟ್ಟುತ್ತಲೇ ಸೆಲೆಬ್ರೆಟಿ ಇಮೇಜ್ ಪಡೆದು ಹುಟ್ಟಿದ ಹುಡುಗ ರಾಯನ್ ರಾಜ್ ಸರ್ಜಾ. ತಂದೆಯ ಅಗಲಿಕೆ ನಡುವೆ ನೊಂದಿದ್ದ ತಾಯಿಗೆ ಬೆಳಕಾಗಿ ಬಂದ ರಾಯನ್ ಸರ್ಜಾ (Rayan raj sarja), ಅಷ್ಟೇ ಚುರುಕಾಗಿ ಎಲ್ಲರನ್ನು ಸೆಳೆಯುತ್ತಲೇ ಇದ್ದಾನೆ. ಸ್ಟಾರ್ ನಟಿಯ ಮಗ ಎಂಬ ಹಮ್ಮಿಲ್ಲದೇ ಗಲ್ಲಿ ಹುಡುಗರ ಜೊತೆ ಕ್ರಿಕೆಟ್ ಆಡಿದ್ದ ರಾಯನ್ ಮೊನ್ನೆ ಮೊನ್ನೆಯಷ್ಟೇ ಅಮ್ಮ ಎಂದು ಹೇಳಿಕೊಟ್ಟರು ಅಪ್ಪ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದ, ಈಗ ರುಕ್ಕಮ್ಮಾ ಹಾಡಿಗೆ ಹೆಜ್ಜೆ ಹಾಕಿ ಭವಿಷ್ಯದ ಸ್ಟಾರ್ ಎಂಬ ಭರವಸೆ ಮೂಡಿಸಿದ್ದಾನೆ.
ಮೊನ್ನೆ ಮೊನ್ನೆಯಷ್ಟೇ ತಂದೆಯ ಎರಡನೇ ವರ್ಷದ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಯನ್ ರಾಜ್ ಸರ್ಜಾ, ಅಲ್ಲಿನ ತಂದೆಯ ಪೋಟೋ ಎದುರು ಅಪ್ಪಾ ಅಪ್ಪಾ ಎಂದು ತಡವರಿಸುವುದನ್ನು ನೋಡಿದ್ರೇ ಎಂಥಹವರಿಗೂ ಹೃದಯ ಕರಗಿ ಬರ್ತಿತ್ತು. ಆದರೆ ಈಗ ಅಷ್ಟೇ ಬೋಲ್ಡಾಗಿ ಸುದೀಪ್ ಹಾಡಿಗೆ ಡ್ಯಾನ್ಸ್ ಮಾಡೋ ಮೂಲಕ ಚಿರು ರಕ್ತವೇ ತನ್ನಲ್ಲಿ ಹರಿದಿದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಮೊನ್ನೆ ನಟಿ ಶ್ರುತಿ ಪುತ್ರಿ ಗೌರಿ ರಾಯನ್ ರಾಜ್ ಸರ್ಜಾರನ್ನು ನೋಡಲು ಮನೆಗೆ ಬಂದಿದ್ದಾರೆ. ಬಳಿಕ ಇವರೆಲ್ಲರೂ ಪಾರ್ಟಿಯೊಂದಕ್ಕೆ ತೆರಳಿದ್ದಾರೆ. ಆ ಪಾರ್ಟಿಯಲ್ಲಿ ಪುಟ್ಟ ರಾಯನ್ ರಾಜ್ ಸರ್ಜಾ, ಸುದೀಪ್ ಅಭಿನಯದ ಸಖತ್ ಹಿಟ್ ಹಾಡು ರಾ ರಾ ರಕ್ಕಮ್ಮಾ ಹಾಡಿಗೆ ಹೆಜ್ಜೆ ಹಾಕಿದ್ದಾನೆ. ಈ ಕ್ಯೂಟ್ ವಿಡಿಯೋವನ್ನು ನಟಿ ಮೇಘನಾ ಸರ್ಜಾ ಹಾಗೂ ಗೌರಿ ಕೂಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ರಾಯನ್ ಸರ್ಜಾರನ್ನು ಗೌರಿ ಎತ್ತಿ ಹಿಡಿದುಕೊಂಡಿದ್ದು, ಅವರೊಂದಿಗೂ ರಾಯನ್ ರಕ್ಕಮ್ಮಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಮಾತ್ರವಲ್ಲ ತಾವೇ ನೆಲದ ಮೇಲೂ ದೊಡ್ಡವರಂತೆ ಡ್ಯಾನ್ಸ್ ಮಾಡುವ ಮೂಲಕ ಎಲ್ಲರಿಗೂ ಸಪ್ರೈಸ್ ನೀಡಿದ್ದಾರೆ. ರಾಯನ್ ಸರ್ಜಾ ಯಾರಿಗೂ ಹೆದರದೇ ಧೈರ್ಯವಾಗಿ ಡ್ಯಾನ್ಸಿಂಗ್ ಪ್ಲೋರ್ ಮೇಲೆ ರಾ ರಾ ರಕ್ಕಮ್ಮಾ ಹಾಡಿಗೆ ಹೆಜ್ಜೆ ಹಾಕಿದ್ದನ್ನು ನೋಡಿದ ಅಭಿಮಾನಿಗಳು ಇದು ಪುಟ್ಟ ಚಿರುವೇ ಎಂದು ಕೊಂಡಾಡುತ್ತಿದ್ದಾರೆ. ನಟಿ ಶ್ರುತಿ ಪುತ್ರಿ ಕೂಡ ರಾಯನ್ ನೃತ್ಯವನ್ನು ಎಂಜಾಯ್ ಮಾಡಿದ್ದು, ಇದು ರಕ್ಕಮ್ಮನ ಕ್ಯೂಟೆಸ್ಟ್ ಆವೃತ್ತಿಯಾಗಿದೆ. ನಾನು ಮತ್ತು ಬೇಬಿ ರಾಯನ್ ಡಿಜೆ ರಾತ್ರಿಯಲ್ಲಿದ್ದೇವೆ ಎಂದು ವಿಡಿಯೋಗೆ ಕ್ಯಾಪ್ಸನ್ ನೀಡಿದ್ದಾರೆ.
ಇದನ್ನೂ ಓದಿ : ಏಳುಕೋಟಿ ಮೈಲಾರನ ಗಾನಲಹರಿ ಬಿಡುಗಡೆ ; ಭಕ್ತಿ ಭಾವದಿಂದ ಕುಣಿದಿದ್ದ ಸಂಚಾರಿ ವಿಜಯ್
ಇದನ್ನೂ ಓದಿ : Jailer Movie: ರಜನೀಕಾಂತ್ ಮುಂದಿನ ಚಿತ್ರ “ಜೈಲರ್” ಪೋಸ್ಟರ್ ಬಿಡುಗಡೆ; ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ
Rayan raj sarja as Ra Ra Rakkamma Song, Video Viral on Social Media