Meghana Raj Sarja : ಜೂನ್ ತಿಂಗಳು ಸಮೀಪಿಸುತ್ತಿದ್ದಂತೆ ಎಲ್ಲರ ಚಿತ್ತ ಶಾಲೆಗಳತ್ತ ನೆಟ್ಟಿರುತ್ತೆ. ಸೆಲೆಬ್ರೆಟಿಗಳಮನೆಯಿಂದ ಆರಂಭಿಸಿ ಜನ ಸಾಮಾನ್ಯರ ಮನೆಯವರೆಗೂ ಎಲ್ಲೆಡೆ ಮಕ್ಕಳ ಶಾಲಾರಂಭ ಒಂದು ಅಪ್ಯಾಯಮಾನವಾದ ಸಂಗತಿ. ಇಂತಹುದೇ ನವಿರಾದ ಖುಷಿಯೊಂದನ್ನು ನಟ ಚಿರಂಜೀವಿ ಸರ್ಜಾ ಪತ್ನಿ ನಟಿ ಮೇಘನಾ ರಾಜ್ ಹಂಚಿಕೊಂಡಿದ್ದಾರೆ. ಜೊತೆಗೆ ಮಗ ರಾಯನ್ ರಾಜ್ ಸರ್ಜಾ (Rayan Raj Sarja) ಶಾಲೆಗೆ ಹೋಗುವ ಮೊದಲ ದಿನದ ಪೋಟೋ ಕೂಡ ಶೇರ್ ಮಾಡಿದ್ದಾರೆ.
ಬದುಕಿನಲ್ಲಿ ಯಾವುದು ಶಾಶ್ವತವಲ್ಲ. ಖುಷಿಯಾಗಲಿ, ದುಃಖವಾಗಲಿ. ಅದನ್ನು ದಾಟಿ ಮುನ್ನಡೆಯಲೇ ಬೇಕು. ಈ ಮಾತಿಗೆ ಸಾಕ್ಷಿ ಎಂಬಂತೆ ನಟಿ ಮೇಘನಾ ರಾಜ್ ಕೂಡ ತಮ್ಮ ಬದುಕಿನ ಕಹಿ ದಿನಗಳನ್ನು ಕಳೆದು ಈಗ ತಮ್ಮ ಮುದ್ದಾದ ಮಗುವಿಗೆ ತಂದೆ ಹಾಗೂ ತಾಯಿ ಎರಡೂ ಸ್ಥಾನದಲ್ಲಿ ನಿಂತು ಪೊರೆಯುತ್ತಿದ್ದಾರೆ. ಮೊನ್ನೆ ಮೊನ್ನೆ ತಮ್ಮ ಪ್ರೆಂಡ್ಸ್ ಗ್ಯಾಂಗ್ ಜೊತೆ ಮಕ್ಕಳ ಸೈನ್ಯ ಒಗ್ಗೂಡಿಸಿಕೊಂಡು ಟ್ರಿಪ್ ಮಾಡಿ ಬಂದ ಮೇಘನಾ ರಾಜ್ ಈಗ ಮಗನ ಸ್ಕೂಲ್ ಮೊದಲ ದಿನದ ಪೋಟೋ ಹಂಚಿಕೊಂಡು ಪೋಷಕರ ಖುಷಿ ಹಾಗೂ ದುಗುಡದ ಕ್ಷಣ ಎಂಬ ಪೋಸ್ಟ್ ಶೇರ್ ಮಾಡಿದ್ದಾರೆ.
ಸದ್ಯ ಮೂರರ ಹೊಸ್ತಿಲಿನಲ್ಲಿರೋ ರಾಯನ್ ರಾಜ್ ಸರ್ಜಾ ತಮ್ಮ ಸ್ಕೂಲಿಂಗ್ ಆರಂಭಿಸಿದ್ದು, ಮೊದಲ ದಿನ ಶಾಲೆಯಲ್ಲಿ ನಿರ್ಮಿಸಲಾದ ವೆಲ್ಕಮಿಂಗ್ ಬೂತ್ ನಲ್ಲಿ ನಿಂತು ಮುದ್ದಾಗಿ ಪೋಸ್ ನೀಡಿದ್ದಾರೆ. ಈ ಪೋಟೋ ಶೇರ್ ಮಾಡಿರೋ ಮೇಘನಾ, ಒಂದು ಸಲ ಪೋಷಕರಾದ ಮೇಲೆ ನಮ್ಮ ಮಕ್ಕಳು ಮಾತ್ರವಲ್ಲ ತಂದೆ ತಾಯಿಗಳಾಗಿ ನಾವು ಕೂಡ ಒಂದೊಂದೆ ಮೈಲ್ ಸ್ಟೋನ್ ದಾಟುತ್ತೇವೆ. ಇಂದು ಅಂತಹುದೇ ದಿನದಲ್ಲಿ ಒಂದು. ಮಗನನ್ನು ಸ್ಕೂಲ್ ಗೆ ಕಳುಹಿಸುವಾಗ ನಾನು ಅನುಭವಿಸಿದ ಭಾವನೆಯನ್ನು ಅಕ್ಷರದಲ್ಲಿ ಬಣ್ಣಿಸಲು ಸಾಧ್ಯವಿಲ್ಲ.
ಇದು ಶಿಕ್ಷಣ, ಜ್ಞಾನ ಹಾಗೂ ಬದುಕಿನ ಪಾಠಗಳನ್ನು ಕಲಿಯುವ ನಿಟ್ಟಿನಲ್ಲಿ ರಾಯನ್ ಮೊದಲ ಹೆಜ್ಜೆ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ. ಅಷ್ಟೇ ಅಲ್ಲ ನನ್ನ ಮಗನ
ಈ ಹೆಜ್ಜೆಗೆ ನಿಮ್ಮೆಲ್ಲರ ಹರಕೆ ಹಾಗೂ ಆಶೀರ್ವಾದವಿರಲಿ ಎಂದು ಮನವಿ ಮಾಡಿದ್ದಾರೆ. ಮೇಘನಾ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ಪೋಸ್ಟ್ ಗೆ ಒಂದು ಗಂಟೆಯಲ್ಲೇ ಸಾವಿರಾರು ಲೈಕ್ಸ್ ಹರಿದು ಬಂದಿದ್ದು, ಚಿತ್ರರಂಗದ ಮೇಘನಾ ಸ್ನೇಹಿತರು, ಬಂಧುಗಳು ಹಾಗೂ ಅಭಿಮಾನಿಗಳು ಶುಭಹಾರೈಸಿದ್ದಾರೆ. ಇನ್ನು ಮೇಘನಾ ತಮ್ಮ ಮಗನನ್ನು ಸ್ಕೂಲ್ ಗೆ ಕರೆದೊಯ್ಯುವ ಮುನ್ನ ಚಿರು ಪೋಟೋದ ಎದುರು ನಿಂತು ಪೋಸ್ ಕೊಟ್ಟಿದ್ದು, ಈ ಪೋಟೋ ನೋಡಿದ ಅಭಿಮಾನಿಗಳು ಕಣ್ಣೀರಾಗಿದ್ದಾರೆ.
ಇದನ್ನೂ ಓದಿ : Rebel star Ambareesh’s birthday : ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬ : ವಿಶೇಷವಾಗಿ ಸ್ಮರಿಸಿದ ಪತ್ನಿ ಸುಮಲತಾ ಅಂಬರೀಶ್
ಇದನ್ನೂ ಓದಿ : IIFA 2023 winners list : ಐಫಾ ಅವಾರ್ಡ್ಸ್‌ನಲ್ಲಿ ದೃಶ್ಯಂ 2 ಅತ್ಯುತ್ತಮ ಸಿನಿಮಾ, ಅತೀ ಹೆಚ್ಚು ಪ್ರಶಸ್ತಿ ಬಾರಿಕೊಂಡ ಬ್ರಹ್ಮಾಸ್ತ್ರ
Rayan Raj Sarja Entry to school Meghana Raj sarja Shared Special photos