ಸೋಮವಾರ, ಏಪ್ರಿಲ್ 28, 2025
HomeCinemaಆರ್‌ಸಿಬಿ ಟ್ವಿಟರ್‌ನ ಹ್ಯಾಕ್ ಆಗಿದ್ದರೂ ಕಪ್‌ ನಮ್ದೆ ಎಂದ ಸಿಂಪಲ್‌ ಸುನಿ

ಆರ್‌ಸಿಬಿ ಟ್ವಿಟರ್‌ನ ಹ್ಯಾಕ್ ಆಗಿದ್ದರೂ ಕಪ್‌ ನಮ್ದೆ ಎಂದ ಸಿಂಪಲ್‌ ಸುನಿ

- Advertisement -

ಸ್ಯಾಂಡಲ್‌ವುಡ್‌ನ ನಿರ್ದೇಶಕ ಸಿಂಪಲ್‌ ಸುನಿ ಒಳ್ಳೆಯ ಸಿನಿಮಾ ನೀಡುವ ಮೂಲಕ ಸಿನಿಪ್ರಿಯರ ಮನರಂಜಿಸಿದ್ದಾರೆ. ಸಿಂಪಲ್‌ ಸುನಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB Twitter hack) ಇದರ ಅಪ್ಪಟ ಅಭಿಮಾನಿಯೂ ಹೌದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ತಂಡವೆಂದರೆ ಕರ್ನಾಟಕದವರಿಗೆ ತುಂಬಾ ಇಷ್ಟ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಿನಿಮಾ ಸೆಲೆಬ್ರಿಟಿ ಅಭಿಮಾನಿಗಳೂ ಸಹ ಇದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕನ್ನಡ ಸಿನರಂಗದಲ್ಲಿರುವ ಸೆಲೆಬ್ರಿಟಿ ಅಭಿಮಾನಿಗಳು ಎಂದಾಕ್ಷಣ ಬಹುತೇಕರ ತಲೆಗೆ ಮೊದಲು ಬರುವ ಹೆಸರೇ ನಿರ್ದೇಶಕ ಸಿಂಪಲ್ ಸುನಿ.

ತಮ್ಮ ಸಿನಿಮಾದಲ್ಲಿ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಸಹ ಒಳ್ಳೆಯ ಬರಹವನ್ನು ಬರೆದುಕೊಂಡು ತನ್ನ ಫಾಲೋವರ್ಸ್‌ಗೆ ಮನರಂಜನೆ ನೀಡುವ ಸಿಂಪಲ್ ಸುನಿ ಇಂಡಿಯನ್ ಪ್ರೀಮಿಯರ್ ಲೀಗ್ ಸಮಯದಲ್ಲಿ ಅತಿಹೆಚ್ಚಾಗಿ ಟೂರ್ನಿ ಕುರಿತು ಪೋಸ್ಟ್ ಹಂಚಿಕೊಳ್ಳುತ್ತಾರೆ.ಅದರಲ್ಲಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಗಳ ಕುರಿತಾಗಿ ಓರ್ವ ಅಭಿಮಾನಿಯಾಗಿ ಸಿಂಪಲ್ ಸುನಿ ಹಂಚಿಕೊಳ್ಳುವ ಪೋಸ್ಟ್‌ಗಳು ಜನಪ್ರಿಯವಾಗಿದೆ.

ಇನ್ನು ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ವಿಟರ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಮ್ಮ ಖಾತೆಯನ್ನು ತಮಗೆ ಮರಳಿ ಸಿಗುವಂತೆ ಮಾಡಿ ಎಂದು ಟ್ವಿಟರ್ ಬಳಿ ಮನವಿ ಮಾಡಿದೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಒಳಗಾಗಿದ್ದು ಸಿಂಪಲ್ ಸುನಿ ಸಹ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ನಟ ದರ್ಶನ್‌ ಜೊತೆ ಹೀರೊಯಿನ್‌ ಆಗಲು ಈ ನಟಿಗೆ ಸಾಧ್ಯವೇ ಇಲ್ಲ : ಅಷ್ಟಕ್ಕೂ ಆ ನಟಿ ಯಾರು ಗೊತ್ತಾ ?

ಇದನ್ನೂ ಓದಿ : “ಕಾಂತಾರ 2” ಕಥೆಯಲ್ಲಿ ಟ್ವಿಸ್ಟ್ ! ಸಿನಿಮಾದ ಸಿಕ್ರೆಟ್‌ ಬಿಚ್ಚಿಟ್ಟ ವಿಜಯ್ ಕಿರಗಂದೂರು

ಇದನ್ನೂ ಓದಿ : KD movie : ಪ್ರೇಮ್‌ ನಿರ್ದೇಶನದ “ಕೆಡಿ” ಸಿನಿಮಾಕ್ಕಾಗಿ : ಆಕ್ಷನ್‌ ಫ್ರಿನ್ಸ್‌ ಧ್ರುವ ಸರ್ಜಾ ಭರ್ಜರಿ ತಯಾರಿ

“ಆರ್‌ಸಿಬಿ ಟ್ವಿಟರ್ ಪೇಜ್ ಹ್ಯಾಕ್ ಮಾಡಿದ್ದಾರೆ, ಟೂರ್ನಿ ಮುಂಚೇನೆ ನಮ್ ಮೇಲೆ ಕಣ್ ಹಾಕ್ತಿದ್ದಾರೆ ಅಂದ್ರೆ…ಈ ಸಲ” ಎಂದು ಬರೆದುಕೊಂಡಿರುವ ಸಿಂಪಲ್ ಸುನಿ ಈ ಸಲನೂ ಕಪ್ ನಮ್ದೆ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ಹೀಗೆ ಹ್ಯಾಕ್ ಬಗ್ಗೆ ಟ್ವೀಟ್ ಮಾಡಿಯೂ ಮನರಂಜನೆ ನೀಡಿದ್ದಾರೆ ಸಿಂಪಲ್ ಸುನಿ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದ್ದ ಕಿಡಿಗೇಡಿಗಳು ಬೋರ್ಡ್ ಆಪ್ ಯಾಚ್ ಕ್ಲಬ್ ಎಂಬ ಹೆಸರಿಗೆ ಬದಲಿಸಿದ್ದರು. ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ಖಾತೆಯನ್ನು ಮರಳಿ ಪಡೆಯಯವಲ್ಲಿ ಯಶಸ್ವಿಯಾಗಿದ್ದಾರೆ.

RCB Twitter hack: Simple Suni said that despite the hack of RCB Twitter, the cup was lost

RELATED ARTICLES

Most Popular