ಭಾನುವಾರ, ಏಪ್ರಿಲ್ 27, 2025
HomeCinemaReal Star Upendra : 'ಯುಐ' ಸಿನಿಮಾದ ತೆರೆ ಹಿಂದಿನ ವಿಡಿಯೋ ಹಂಚಿಕೊಂಡ ರಿಯಲ್‌ ಸ್ಟಾರ್‌...

Real Star Upendra : ‘ಯುಐ’ ಸಿನಿಮಾದ ತೆರೆ ಹಿಂದಿನ ವಿಡಿಯೋ ಹಂಚಿಕೊಂಡ ರಿಯಲ್‌ ಸ್ಟಾರ್‌ ಉಪೇಂದ್ರ

- Advertisement -

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹೊಸ ವಿಭಿನ್ನ ಕಥೆಗಳನ್ನು ತೆರೆಗೆ ತರುವುದರಲ್ಲಿ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಸದಾ ಮುಂಚೂಣಿಯಲ್ಲಿ ಇರುತ್ತಾರೆ. ನಟ ಉಪೇಂದ್ರ ಆಕ್ಷನ್ ಕಟ್ ಹೇಳಿದರೆ, ಆ ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡೋದು ಗ್ಯಾರಂಟಿ. ಸದ್ಯ ಉಪೇಂದ್ರ ಆಕ್ಷನ್‌ ಕಟ್‌ ಹೇಳುತ್ತಿರುವ ‘ಯುಐ’ ಸಿನಿಮಾದ ತೆರೆ ಹಿಂದಿನ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆ ವಿಡಿಯೋ ಸಖತ್‌ ವೈರಲ್‌ ಆಗಿದೆ.

ಇದೀಗ ಬಹಳ ದಿನಗಳ ಬಳಿಕ ಉಪ್ಪಿ ಮತ್ತೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೀಗಾಗಿ ಸಿನಿಪ್ರಿಯರು ಈ ಸಿನಿಮಾವನ್ನು ನೋಡುವುದಕ್ಕೆ ಕಾದಿದ್ದಾರೆ. ಸ್ಯಾಂಡಲ್‌ವುಡ್‌ನ ಪ್ಯಾನ್ ಇಂಡಿಯಾ ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ಬೆನ್ನಲ್ಲೇ ಉಪ್ಪಿ ಕೂಡ ಅಖಾಡಕ್ಕೆ ಇಳಿಸಿದ್ದಾರೆ. ಆಧುನಿಕ ತಂತ್ರಜ್ಞಾನಗಳನ್ನು ಬಳಿಸಿ ‘ಯುಐ’ ಸಿನಿಮಾವನ್ನು ಉಪೇಂದ್ರ ನಿರ್ದೇಶನ ಮಾಡುತ್ತಿದ್ದಾರೆ.

ಉಪೇಂದ್ರ ಅವರ ಸಿನಿಮಾಗಳ ಕಥೆ ಹೆಚ್ಚಾಗಿ ವಿಭಿನ್ನವಾಗಿರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತೆ ಇದೆ. ಸಾಮಾನ್ಯವಾಗಿ ಮರ ಸುತ್ತೋ ಕಥೆಗಳ ಕಡೆಗೆ ಉಪೇಂದ್ರ ತಿರುಗಿ ಕೂಡ ನೋಡುವುದಿಲ್ಲ. ಈ ಬಾರಿ ಅಂತದ್ದೇ ವಿಶಿಷ್ಟ ಕಥೆಯೊಂದಿಗೆ ಉಪೇಂದ್ರ ಬರುತ್ತಾರೆ ಅನ್ನೋದು ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತು. ಆದರೆ ಯುಐ ಎಲ್ಲರ ಕಣ್ಣು ಅರಳಿಸಿರೋದು ಅದರ ತಂತ್ರಜ್ಞಾನದ ಮೇಲೆ ಆಗಿದೆ.

ಇದನ್ನೂ ಓದಿ : Actor Kishore : “ಕಾಂತಾರ”ದ ದೈವ ಅವಮಾನಿಸಿದ ಯುವಕ ರಕ್ತಕಾರಿ ಸಾವು : ನಟ ಕಿಶೋರ್ ಹೇಳಿದ್ದೇನು ?

ಇದನ್ನೂ ಓದಿ : KD Movie : ಆ್ಯಕ್ಷನ್ ಪ್ರಿನ್ಸ್ “ಕೆಡಿ” ಸಿನಿಮಾದ ಕ್ರೇಜ್ ಹೆಚ್ಚಿಸಿದ ಪ್ರೇಮ್

ಇದನ್ನೂ ಓದಿ : Kranti Movie Trailer Release : ಬಹುನಿರೀಕ್ಷಿತ “ಕ್ರಾಂತಿ” ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕ ಘೋಷಣೆ ಮಾಡಿದ ಸಿನಿತಂಡ

ಇದನ್ನೂ ಓದಿ : ಮನೆಯ ಬಾಲ್ಕನಿಯಲ್ಲಿ ಸ್ನೇಹಿತರೊಂದಿಗೆ ಹೊಸ ವರ್ಷ ಆಚರಿಸಿದ ಆಲಿಯಾ ಭಟ್ – ರಣಬೀರ್ ಕಪೂರ್

ಉಪ್ಪಿ ಹೊಸ ಹೊಸ ತಂತ್ರಜ್ಞಾನದ ಮೂಲಕ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗ ತಾನೇ ರಿಲೀಸ್ ಮಾಡಿರೋ ವಿಡಿಯೋದಲ್ಲಿ ಅದು ಎದ್ದು ಕಾಣುತ್ತಿದೆ. ಸದ್ಯ ವಿಡಿಯೋದಲ್ಲಿ ಉಪ್ಪಿ ಹೊಸ ವರ್ಷ 2023 ಸಂಭ್ರಮದಲ್ಲಿ ‘ಯುಐ’ ಸಿನಿಮಾ ತೆರೆ ಹಿಂದಿನ ವಿಡಿಯೋ ರಿಲೀಸ್ ಆಗಿದೆ. ಅದರಲ್ಲಿ ಉಪ್ಪಿ ಬಳಸಿರೋ ತಂತ್ರಜ್ಞಾನದ ಮಾಹಿತಿಯನ್ನು ನೀಡಲಾಗಿದೆ. ‘ಮಾನಿಟರ್ ಪ್ಲೀಸ್.. ಜಿಎಫ್ಎಂ.. ಪ್ರೋಬ್.. 360.. ಲೈಟ್ಸ್.. ಸ್ಮೋಕ್.. ರೋಲ್ ಕ್ಯಾಮರಾ, ಸ್ಟಡಿ ಕ್ಯಾಮ್ ಮೂವ್, ಆಕ್ಷನ್..’ ಅಂತ ಉಪೇಂದ್ರ ಹೇಳಿರುವ ಮೇಕಿಂಗ್ ಝಲಕ್ ಅನ್ನು ರಿಲೀಸ್ ಮಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

Real star Upendra shared a video behind the scenes of the movie ‘UI’

RELATED ARTICLES

Most Popular