ಭಾನುವಾರ, ಏಪ್ರಿಲ್ 27, 2025
HomeCinemaನಟ ದರ್ಶನ್‌ ತೂಗುದೀಪ್‌ ಪ್ರಕರಣ : ನಟ ಚಿಕ್ಕಣ್ಣಗೆ ಎದುರಾಯ್ತು ಸಂಕಷ್ಟ

ನಟ ದರ್ಶನ್‌ ತೂಗುದೀಪ್‌ ಪ್ರಕರಣ : ನಟ ಚಿಕ್ಕಣ್ಣಗೆ ಎದುರಾಯ್ತು ಸಂಕಷ್ಟ

- Advertisement -

Renukaswamy Case : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌ ನಟ ದರ್ಶನ್‌ ತೂಗುದೀಪ್‌ (Darshan Thoogudeepa) ಈಗಾಗಲೇ ಜೈಲು ಸೇರಿದ್ರೆ, ಇತ್ತ ಹಾಸ್ಯ ನಟ ಚಿಕ್ಕಣ್ಣ (Chikkanna) ಗೆ ಸಂಕಷ್ಟ ಎದುರಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಚಿಕ್ಕಣ್ಣ ಪ್ರಮುಖ ಸಾಕ್ಷಿಯಾಗಿದ್ದು, ಈಗಾಗಲೇ ಜಡ್ಜ್‌ ಮುಂದೆ ಪೊಲೀಸರು ಹೇಳಿಕೆ ಪಡೆದಿದ್ದಾರೆ. ಆದ್ರೀಗ ಮತ್ತೊಮ್ಮೆ ವಿಚಾರಣೆ ಎದುರಿಸುವ ಸಾಧ್ಯತೆಯಿದೆ.

Renukaswamy Case Actor Darshan meent Chikkanna is now in trouble
Image Credit to Original Source

ನಟ ದರ್ಶನ್‌ ಜೊತೆಗೆ ಆತನ ಸಹಚರರು ಈಗಾಗಲೇ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಸದ್ಯಕ್ಕೆ ಜಾಮೀನು ಸಿಗುವುದು ಡೌಟು ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವುದು ಹಾಸ್ಯನಟ ಚಿಕ್ಕಣ್ಣ. ಹೀಗಾಗಿ ಪೊಲೀಸರು ಚಿಕ್ಕಣ್ಣ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದಾರೆ.

ಪ್ರಕರಣದ ಪ್ರಮುಖ ಸಾಕ್ಷಿಯಾದವರು ಆರೋಪಿಯನ್ನು ಭೇಟಿ ಮಾಡುವಂತಿಲ್ಲ. ಆದರೆ ಹಾಸ್ಯನಟ ಚಿಕ್ಕಣ್ಣ ಜೈಲಿಗೆ ತೆರಳಿ ನಟ ದರ್ಶನ್‌ ಭೇಟಿ ಮಾಡಿದ್ದಾರೆ. ಯಾವ ಕಾರಣಕ್ಕೆ ದರ್ಶನ್‌ ಅವರನ್ನು ಭೇಟಿಯಾಗಿದ್ದೀರಿ ಅನ್ನೋದು ರಿವೀಲ್‌ ಆಗಿಲ್ಲ. ಇದೇ ಕಾರಣದಿಂದಲೇ ಎಸ್‌ಐಟಿ ಅಧಿಕಾರಿಗಳು ಮತ್ತೊಮ್ಮೆ ಹಾಸ್ಯನಟ ಚಿಕ್ಕಣ್ಣ ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ.

Renukaswamy Case Actor Darshan meent Chikkanna is now in trouble
Image Credit to Original Source

ಇದನ್ನೂ ಓದಿ : ವಿನಯ್ ರಾಜ್ ಕುಮಾರ್ ಪೆಪೆಗೆ ಸಾಥ್‌ ಕೊಟ್ಟ ಕಿಚ್ಚ ಸುದೀಪ್

ರೇಣುಕಾಸ್ವಾಮಿ ಕೊಲೆಯಾಗುವ ಸ್ವಲ್ಪ ಸಮಯದ ಮೊದಲು (ಜೂನ್‌೮) ನಟ ದರ್ಶನ್‌ ಹಾಗೂ ನಟಿ ಚಿಕ್ಕಣ್ಣ ಇಬ್ಬರೂ ಕೂಡ ಸ್ಟೋನಿ ಬ್ರೂಕ್‌ ಪಬ್‌ನಲ್ಲಿ ಪಾರ್ಟಿ ಮಾಡಿದ್ದರು. ಪಾರ್ಟಿ ನಡೆಸಿದ ಬಳಿಕ ನಟ ದರ್ಶನ ಪಟ್ಟಣಗೆರೆ ಶೆಡ್‌ಗೆ ತೆರಳಿದ್ದರೆ, ಚಿಕ್ಕಣ್ಣ ಪಾರ್ಟಿ ಮುಗಿಸಿಕೊಂಡು ಮನೆಗೆ ತೆರಳಿದ್ದರು. ಇದಾದ ನಂತರದಲ್ಲಿ ರೇಣುಕಾಸ್ವಾಮಿ ಕೊಲೆ ನಡೆದಿದ್ದು, ನಟ ದರ್ಶನ್‌ ಕೊಲೆಯ ಪ್ರಕರಣ ಆರೋಪಿ ಅನ್ನೋದು ಬಯಲಾಗಿತ್ತು.

ಇದನ್ನೂ ಓದಿ : Vijayalakshmi Darshan Thoogudeepa: ದರ್ಶನ್‌ ತೂಗುದೀಪ್‌ ಬಿಡುಗಡೆಗಾಗಿ ಕೊಲ್ಲೂರಿನಲ್ಲಿ ನವಚಂಡಿಕಾ ಹೋಮ ನಡೆಸಿದ ಪತ್ನಿ ವಿಜಯಲಕ್ಷ್ಮೀ ದರ್ಶನ್‌

ನಟ ದರ್ಶನ್‌ ಜೈಲು ಸೇರಿದ ಬೆನ್ನಲ್ಲೇ ಸ್ಯಾಂಡಲ್‌ವುಡ್‌ ನಟ, ನಟಿಯರು ಜೈಲಿಗೆ ತೆರಳಿ ದರ್ಶನ್‌ ಭೇಟಿ ಮಾಡುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಪೊಲೀಸರು ಚಾರ್ಜ್‌ಶೀಟ್‌ಸಲ್ಲಿಕೆ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಮನೆಯೂಟಕ್ಕೆ ದರ್ಶನ್‌ ಅರ್ಜಿ ಸಲ್ಲಿಸುತ್ತಿದ್ದರೂ ಕೂಡ ಜಾಮೀನಿಗೆ ನಟ ಇನ್ನೂ ಅರ್ಜಿ ಸಲ್ಲಿಸಿಲ್ಲ.

ಇದನ್ನೂ ಓದಿ : ನಟ ದರ್ಶನ್‌ ಕೇಸ್‌ಗೆ ಬಿಗ್‌ ಟ್ವಿಸ್ಟ್‌ : ಜೈಲಲ್ಲಿರುವ ಚಾಲೆಂಜಿಂಗ್‌ ಸ್ಟಾರ್‌ಗೆ ಹೊಸ ಕಂಡಿಷನ್‌

Renukaswamy Case Actor Darshan meent Chikkanna is now in trouble

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular