Actor Darshan Shift : ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ್‌ಗೆ ಜೈಲಿನಲ್ಲಿ ರಾಜಾತಿಥ್ಯ ದೊರೆತಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ರಾಜ್ಯ ಸರಕಾರ ಎಚ್ಚೆತ್ತುಕೊಂಡಿದೆ. ಇದೀಗ ಕೊಲೆ ಪ್ರಕರಣದ ಆರೋಪಿ ದರ್ಶನ್ ಸೇರಿದಂತೆ ಹಲವು ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ ಇತರರ ಜೊತೆಗೆ ಜೈಲಿನಲ್ಲಿ ರಾಜಾತಿಥ್ಯ ಪಡೆಯತ್ತಿರುವ ಪೋಟೋ ರಾಜ್ಯದಾದ್ಯಂತ ಬಾರೀ ಸದ್ದು ಮಾಡಿದೆ. ಪ್ರಕರಣ ಬೆಳಕಿಗೆ ಬರುತ್ತಲೇ ಏಳು ಮಂದಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದು, ಕಾರಾಗೃಹ ನೂತನ ಡಿಜಿಯನ್ನು ನೇಮಕ ಮಾಡಿದೆ.
ಇದನ್ನೂ ಓದಿ : ಕನಸೊಂದು ನನಸಾಯಿತು ಎಂದ ಶಿವಣ್ಣಪುತ್ರಿ: ನಿವೇದಿತಾ ಪೋಸ್ಟ್ ವೈರಲ್
ಚೀಫ್ ಸೂರ್ಪಡೆಂಟ್ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ 24ನೇ ಎಸಿಎಂಎಂ ನ್ಯಾಯಾಲಯ ನಟ ದರ್ಶನ್ ಸೇರಿದಂತೆ ಇತರ ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇತರ ಆರೋಪಿಗಳಾದ ಪವನ್, ರಾಘವೇಂದ್ರ, ನಂದೀಶ್ ಮೈಸೂರು ಜೈಲಿಗೆ, ಜಗದೀಶ್‌ನನ್ನು ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಧನರಾಜ್‌ನನ್ನು ಧಾರವಾಡ ಜೈಲಿಗೆ, ವಿನಯ್‌ನನ್ನು ವಿಜಯಪುರ ಜೈಲು, ನಾಗರಾಜ್ ಗುಲ್ಬರ್ಗಾ ಜೈಲು, ಲಕ್ಷ್ಮಣ್ ಶಿವಮೊಗ್ಗ, ಪ್ರದೂಷ್ ಬೆಳಗಾವಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ, ಅನುಕುಮಾರ್ ಹಾಗೂ ದೀಪಕ್‌ನನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಉಳಿಸಿಕೊಳ್ಳಲಾಗಿದೆ.
ಇದನ್ನೂ ಓದಿ : ರಾಯನ್ ಜೊತೆ ಮೇಘನಾ ರಾಜ್ ಸರ್ಜಾ : ಮಗನ ತುಂಟಾಟದ ವಿಡಿಯೋ ಶೇರ್ ಮಾಡಿದ ನಟಿ
ಉಳಿದಂತೆ ಕಾರ್ತಿಕ್, ನಿಖಿಲ್, ರವಿ ಹಾಗೂ ಕೇಶವ ಮೂರ್ತಿ ಈಗಾಗಲೇ ತುಮಕೂರು ಜೈಲಿನಲ್ಲಿದ್ದಾರೆ. ಜೈಲು ಸೇರಿದ ಮೇಲೂ ಕಿಂಚಿತ್ತು ಪಶ್ಚಾತಾಪ ಪಡದ ಡಿಬಾಸ್ ದರ್ಶನ್ ಆಂಡ್ ಗ್ಯಾಂಗ್ ಅನ್ನು ರಾಜ್ಯ ಹಲವು ಜೈಲುಗಳಿಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ : ದರ್ಶನ್‌ಗೆ ಜೈಲಲ್ಲಿ ರಾಜಾತಿಥ್ಯ : ದಾಸ ಜೊತೆ ಅಧಿಕಾರಿಗಳಿಗೂ ಸಂಕಷ್ಟ
Renukaswamy murder case Actor Darshan Shift Parappana Agrahara To Bellary Jail