Darshan Thugudeep bail application : : ಬೆಂಗಳೂರು: ಕೊಲೆ ಆರೋಪಿ ಚಲನಚಿತ್ರ ನಟ ದರ್ಶನ್ ತೂಗುದೀಪ ಜಾಮೀನು ಅರ್ಜಿಯ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದೆ. ಅಕ್ಟೋಬರ್ 14 ರಂದು ತೀರ್ಪು ಪ್ರಕಟವಾಗಲಿದೆ. ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ಇಂದು ಸುದೀರ್ಘ ವಿಚಾರಣೆ ನಡೆಸಿದ್ದು, ಇದೀಗ ಜಾಮೀನು ಅರ್ಜಿಯ ವಿಚಾರಣೆ ಅಂತ್ಯವಾಗಿದ್ದು ನ್ಯಾಯಾಧೀಶರಾದ ಜೈಶಂಕರ್ ಅಂತಿಮ ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಿದ್ದಾರೆ.
ಇಂದಿನ ಜಾಮೀನು ಅರ್ಜಿಯ ವಿಚಾರಣೆ ವೇಳೆ ಆರೋಪಿ ದರ್ಶನ್ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್ ಮತ್ತು ರಾಜ್ಯ ಸರ್ಕಾರದ ಪರವಾಗಿ ಎಸ್ ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಿದ್ದರು. ಈ ಮಧ್ಯೆ ಇಂದು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಭೇಟಿ ನೀಡಿದ ದರ್ಶನ್ ತೂಗುದೀಪ ಜೊತೆ ಮಾತುಕತೆ ನಡೆಸಿದ್ದಾರೆ.
ಎರಡು ಬ್ಯಾಗ್ ಗಳೊಂದಿಗೆ ಭೇಟಿಗೆ ಬಂದಿದ್ದ ಹರಿಕೃಷ್ಣ ಜೊತೆ ದರ್ಶನ್ ಜೈಲಿನ ಸಂದರ್ಶಕರ ಕೊಠಡಿಯಲ್ಲಿ ಇಪ್ಪತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಡ್ರೈ ಪ್ರೂಟ್ಸ್, ಬಿಸ್ಕೇಟ್ ಮತ್ತು ಬೇಕರಿ ತಿನಿಸುಗಳನ್ನು ಒಳಗೊಂಡಿದ್ದ ಹರಿಕೃಷ್ಣ ತಂದಿದ್ದ ಬ್ಯಾಗ್ ಗಳನ್ನು ತೆಗೆದುಕೊಂಡು ಜೈಲಿನ ಹೈ ಸೆಕ್ಯುರಿಟಿ ಸೆಲ್ ಗೆ ವಾಪಾಸಾಗುವ ವೇಳೆ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು.
ಈ ವೇಳೆ ತಮ್ಮನ್ನು ನೋಡಲು ಜೈಲಿನ ಹೊರಭಾಗದಲ್ಲಿ ನೆರೆದಿದ್ದ ಅಭಿಮಾನಿಗಳನ್ನು ನೋಡಿ ದರ್ಶನ್ ನಗು ಬೀರಿದರು. ದರ್ಶನ್ ನೋಡಲು ಜೈಲಿನ ಮುಂಭಾಗದಲ್ಲಿ ಬ್ಯಾರಿಕೇಡ್ ಎದುರು ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದರಲ್ಲದೇ ಡಿ ಬಾಸ್ ಎಂದೂ ಕೂಗಿದರು. ಇದೇ ವೇಳೆ, ಇಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ14ನೇ ಆರೋಪಿಯಾಗಿರುವ ಪ್ರದೋಶ್ ನನ್ನು ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ.
ಇದನ್ನೂ ಓದಿ : ದರ್ಶನ್‌ಗೆ ಜೈಲಿನಲ್ಲಿ ರಾಜಾತಿ್ಥ್ಯ : ಬಳ್ಳಾರಿಗೆ ಡಿಬಾಸ್, ಯಾರು ಯಾವ ಜೈಲಿಗೆ ಶಿಫ್ಟ್ ? ಇಲ್ಲಿದೆ ಕಂಪ್ಲೀ್ಟ್ ಡಿಟೇಲ್ಸ್
ಬಿಗಿ ಭದ್ರತೆಯಲ್ಲಿ ಪೊಲೀಸರು ಹಿಂಡಲಗಾ ಜೈಲಿನಿಂದ ಪರಪ್ಪನ ಅಗ್ರಹಾರ ಜೈಲಿಗೆ ಪ್ರದೋಶ್ ನನ್ನು ಶಿಫ್ಟ್ ಮಾಡಿದ್ದಾರೆ. ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಸ್ಥಳಾಂತರ ಮಾಡಿದ್ದಾರೆ. ಈ ಮೊದಲು ದರ್ಶನ್ ಜೊತೆಯಲ್ಲೇ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದ ಪ್ರದೋಶ್ ನನ್ನು ಅಗಸ್ಟ್ 28 ರಂದು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರ ಮಾಡಿದ್ದು, ನಲ್ವತ್ತನಾಲ್ಕು ದಿನಗಳ ಬಳಿಕ ಮತ್ತೆ ಪರಪ್ಪನ ಅಗ್ರಹಾರಕ್ಕೆ ವಾಪಸ್ ಕರೆತರಲಾಗಿದೆ.
ಇದನ್ನೂ ಓದಿ : ಪವಿತ್ರಾ ಗೌಡ ಮೈಮೇಲೆ ದರ್ಶನ್ ಹಚ್ಚೆ : ಟ್ಯಾಟೂ ನೋಡಿ ಅಭಿಮಾನಿಗಳು ಏನಂದ್ರು ?
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್ ಗೆ ರಾಜ್ಯಾತಿಥ್ಯ ನೀಡಲ್ಪಟ್ಟಿದ್ದ ಕುರಿತಂತೆ ಆರೋಪ ವ್ಯಕ್ತವಾಗಿ ಫೋಟೋಗಳು ಬಹಿರಂಗವಾದ ಬಳಿಕ ದರ್ಶನ್ ಸೇರಿದಂತೆ ಹಲವರನ್ನು ರಾಜ್ಯದ ವಿವಿಧ ಕಾರಾಗೃಹಗಳಿಗೆ ಕೋರ್ಟ್ ಅನುಮತಿ ಪಡೆದು ಸ್ಥಳಾಂತರ ಮಾಡಲಾಗಿತ್ತು.
ಇದನ್ನೂ ಓದಿ : ನಟ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿಗೆ ಶಿಫ್ಟ್ : ಹೈ ಅಲರ್ಟ್
Renukaswamy murder case Darshan Thugudeep bail application hearing ends Monday verdict in Karnataka Highcourt