ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ “ಕಾಂತಾರ” ಸಿನಿಮಾದಿಂದ ಕಳೆದ ವರ್ಷ ಇಡೀ ಭಾರತೀಯ ಸಿನಿರಂಗವೇ ಕನ್ನಡ ಸಿನಿರಂಗವನ್ನು ಹಾಡಿ ಹೊಗಳುವಂತೆ ಮಾಡಿದೆ. ಅಷ್ಟೇ ಅಲ್ಲದೇ ಈ ಸಿನಿಮಾ ಜಗತ್ತಿನಾದ್ಯಂತ ಜನಮನ್ನಣೆ ಗಳಿಸಿದೆ. ಹೀಗಾಗಿ ನಟ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಹಾಗೂ ಡಿವೈನ್ ಸ್ಟಾರ್ ಆಗಿ ಸಹ ಗುರುತಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಹೆಸರು ಗಳಿಸಿದ ನಟ ರಿಷಬ್ ಶೆಟ್ಟಿ ರಾಜಕೀಯ ಕ್ಷೇತ್ರಕ್ಕೆ (Rishabh Shetty – Viral Tweet) ಬರುತ್ತಾರೆ ಎನ್ನುವ ಗಾಳಿ ಸುದ್ದಿ ಹರಡಿತ್ತು. ಅದಕ್ಕೆ ತಕ್ಕಂತೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಸಖತ್ ವೈರಲ್ ಆಗುತ್ತಿದೆ.
ಹೌದು ಟ್ವಿಟರ್‌ನಲ್ಲಿ ಒಬ್ಬರು, ” ರಿಷಬ್ ರಾಜಕೀಯಕ್ಕೆ ಎಂಟ್ರಿ. ಇವತ್ತಿನ ಸುದ್ದಿ ಏಪ್ರಿಲ್ ಫಸ್ಟ್ ” ಎಂದು ರಿಷಬ್ ಶೆಟ್ಟಿಯವರ ಪೋಟೋ ಟ್ಯಾಗ್ ಮಾಡಿ ಪೋಸ್ಟರ್‌ನ್ನು ಹಂಚಿಕೊಂಡಿದ್ದಾರೆ. ಇದು ಜನರನ್ನು ಏಪ್ರಿಲ್ ಫೂಲ್ ಮಾಡುವುದಕ್ಕೋ ಅಥವಾ ಉದ್ದೇಶ ಪೂರಕವೋ ಗೊತ್ತಿಲ್ಲ. ಆದರೆ ಸ್ವತಃ ನಟ ರಿಷಬ್ ಶೆಟ್ಟಿಯವರು, “ಸುಮ್ನನೆ ಇರಿ ಮರ್ರೆ. ಸುಳ್ಳು ಸುದ್ದಿ, ಏಪ್ರಿಲ್ ಫಸ್ಟ್ ಹೀಗೆ ಹೇಳಿ… ಮೊದಲೇ ಕೆಲವರು ನನ್ನ ಒಂದು ಪಕ್ಷಕ್ಕೆ ಸೇರಿಸಿದ್ದಾರೆ. ನಾನು ರಾಜಕೀಯಕ್ಕೆ ಎಂದು ಹೋಗುವುದಿಲ್ಲ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ರಿಷಬ್ ರಾಜಕೀಯಕ್ಕೆ ಎಂಟ್ರಿ
— Saraswathi Jagirdar 🇮🇳 (@saraswathi1717) April 1, 2023
ಇವತ್ತಿನ ಸುದ್ದಿ..@shetty_rishab #April1st pic.twitter.com/GgyAbK6kf1
ಆದರೆ ಅಭಿಮಾನಿಗಳು, “ಬನ್ನಿ ಶೆಟ್ರೆ, ನಮ್ಮ ಫುಲ್ ಸಪೋರ್ಟ್ ನಿಮಗೇ” ಎಂದು ಹೇಳಿದ್ದಾರೆ. ಅದರಕ್ಕೆ ರಿಷಬ್ ಶೆಟ್ಟಿ “ಬೇಡ ದೇವ್ರು, ನನ್ನ ಸಿನಿಮಾಗೆ ನಿಮ್ಮ ಸಪೋರ್ಟ್ ಇದ್ರೆ ಸಾಕು” ಎಂದು ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಕರಾವಳಿ ಸಂಸ್ಕೃತಿಗೆ ಸಂಪರ್ಕವಿರುವ ಅರ್ಥಪೂರ್ಣ ಸಿನಿಮಾಗಳನ್ನು ಮಾಡುವುದರ ಜೊತೆಗೆ, ನಮ್ಮ ನಾಡಿನ ಅರಣ್ಯ ಸಂಪತ್ತು ಉಳಿಸಿ, ಬೆಳೆಸುವ ಕಡೆಗೆ ಒಬ್ಬ ನಟ ಕೆಲಸವನ್ನು ಎಲ್ಲರೂ ಮೆಚ್ಚುಗೆ ಪಾತ್ರರಾಗಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾ ಕಥೆಯನ್ನು ರಚಿಸುವಲ್ಲಿ ಬ್ಯುಸಿಯಾಗಿದ್ದಾರೆ. ಈ ಮೂಲಕ ಕಾಂತಾರ 2 ಮುಂದಿನ ವರ್ಷದ ಬೇಸಿಗೆಯಲ್ಲಿ ಬೆಳ್ಳಿತೆರೆಗೆ ಅಪ್ಪಳಿಸಲಿದೆ.
ಇದನ್ನೂ ಓದಿ : ನಟ ಪುನೀತ್ ರಾಜ್‌ಕುಮಾರ್ ಅಭಿನಯದ “ಯುವರತ್ನ” ಸಿನಿಮಾಕ್ಕೆ 2 ವರ್ಷದ ಸಂಭ್ರಮ
ಇದನ್ನೂ ಓದಿ : ಆತ್ಮೀಯ ಗೆಳತಿ ರಕ್ಷಿತಾಗೆ ಬರ್ತಡೆ ವಿಶ್ ಮಾಡಿದ ಚಾಲೆಂಚಿಂಗ್ ಸ್ಟಾರ್ : ಪೋಸ್ಟ್ ಆಯ್ತು ಸಖತ್ ವೈರಲ್
ಇಷ್ಟೇ ಅಲ್ಲದೇ “ಕಾಂತಾರ 2” “ಕಾಂತಾರ” ಸಿನಿಮಾದ ಮುಂದುವರಿದ ಭಾಗವಲ್ಲ ಎಂಬುದೂ ಸಹ ಖಚಿತವಾಗಿದೆ. ಈ ಬಾರಿ ಕಾಂತಾರ ಸಿನಿಮಾದಲ್ಲಿ ತೋರಿಸಲಾಗಿದ್ದ ಕಥೆಗೂ ಹಿಂದೆ ನಡೆದಿದ್ದೇನು ಎಂಬುದನ್ನು ತೆರೆಮೇಲೆ ತರಲಿದ್ದು, ಇದು ಸೀಕ್ವೆಲ್ ಆಗಿರದೇ ಪ್ರೀಕ್ವೆಲ್ ಆಗಿರಲಿದೆ. ಕಾಂತಾರ ಸಿನಿಮಾದಲ್ಲಿ ತೋರಿಸಲಾಗಿದ್ದ ಭೂತಕೋಲದ ಹಿನ್ನೆಲೆಯನ್ನು ಈ ಬಾರಿ ಇನ್ನೂ ಆಳವಾಗಿ ತೋರಿಸಲಾಗುತ್ತದೆ. ಈ ಮೂಲಕ ಕಾಡುಬೆಟ್ಟು ಶಿವನ ತಂದೆಯ ಕಾಲಘಟ್ಟದ ಕಥೆಯನ್ನು ಸಿನಿ ರಸಿಕರು ನಿರೀಕ್ಷಿಸಬಹುದು ಎಂದು ಸಿನಿತಂಡ ತಿಳಿಸಿದ್ದಾರೆ.
Rishabh Shetty – Viral Tweet : Actor Rishabh Shetty enters politics! The tweet went viral