ಭಾನುವಾರ, ಏಪ್ರಿಲ್ 27, 2025
HomeCinemaKantara Movie sequence : ರಿಷಬ್ ಶೆಟ್ರ ಜೊತೆ ನಿಂತವರು ಪ್ರಗತಿ ಶೆಟ್ಟ್ರು: ಕಾಂತಾರ ಸಿಕ್ವೆನ್ಸ್...

Kantara Movie sequence : ರಿಷಬ್ ಶೆಟ್ರ ಜೊತೆ ನಿಂತವರು ಪ್ರಗತಿ ಶೆಟ್ಟ್ರು: ಕಾಂತಾರ ಸಿಕ್ವೆನ್ಸ್ ಬಗ್ಗೆ ರಿಶಬ್ ಪತ್ನಿ ಪ್ರಗತಿ ಶೆಟ್ಟಿ ಹೇಳಿದ್ದೇನು ಗೊತ್ತಾ?

- Advertisement -

Kantara Movie sequence : ಅಪ್ಪಟ ಕರಾವಳಿ ಮಣ್ಣಿನ ಸೊಗಡನ್ನು ಬಿಚ್ಚಿಟ್ಟ ಸಿನಿಮಾ ಕಾಂತಾರ ಜನ ಮೆಚ್ಚುಗೆಗೆ ಪಾತ್ರವಾಗಿದೆ. ನಮ್ಮೊಳಗಿನ ಸಂಸ್ಕೃತಿಯನ್ನೇ ನಮ್ಮ ಮುಂದಿಟ್ಟು ಮೆಚ್ಚಿಕೊಳ್ಳುವಂತೆ‌ ಮಾಡಿದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಗೆದ್ದಿದ್ದಾರೆ. ಆದರೆ ತುಳುನಾಡಿನ ಸಂಸ್ಕೃತಿಯೊಂದನ್ನು ಎಲ್ಲರ ಮನಗೆಲ್ಲುವಂತೆ ಚಿತ್ರರೂಪದಲ್ಲಿ ತೆರೆಗೆ ತಂದು ಗೆಲ್ಲಿಸೋದು ಸುಲಭವಲ್ಲ. ಇಂತಹ ಸಿನಿಮಾ ಮತ್ತೆ ಮತ್ತೆ ಬರಬೇಕೆಂಬ ಆಗ್ರಹ ಪ್ರೇಕ್ಷಕ ವಲಯದಿಂದ ವ್ಯಕ್ತವಾಗುತ್ತಿರುವಾಗಲೇ ಜನರು ಕಾಂತಾರ ಸಿಕ್ವೆನ್ಸ್ ಟೂ ಬರುತ್ತಾ ಎಂಬ ಕುತೂಹಲದಲ್ಲಿದ್ದಾರೆ. ಇದಕ್ಕೆ ನಿರ್ದೇಶಕ ರಿಶಬ್ ಪತ್ನಿ ಪ್ರಗತಿ ಶೆಟ್ಟಿ (Pragathi Shetty) Exclusive ವಿವರಣೆ ನೀಡಿದ್ದಾರೆ.

ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ವರ್ಷಗಳ ಕಾಲ ತಪಸ್ಸಿನಂತೆ ದುಡಿದು, ಶ್ರಮವಹಿಸಿ ಕಾಂತಾರ ಸಿನಿಮಾವನ್ನು ನಿರ್ಮಿಸಿ ಗೆದ್ದಿದ್ದಾರೆ. ಅವರ ಈ ಶ್ರಮದ ಹಿಂದೆ ಅವರ ಪತ್ನಿ ಪ್ರಗತಿ ಶೆಟ್ಟಿಯವರ ಪಾಲು ಇದೆ. ಎರಡನೇ ಮಗುವಿನ ತಾಯಿಯಾಗೋ ಸಂಭ್ರಮದಲ್ಲಿದ್ದ ಪ್ರಗತಿ ಶೆಟ್ಟಿ ತಾಯ್ತನದ ಜರ್ನಿಯ ಜೊತೆ ಜೊತೆಗೆ ರಿಷಬ್ ಶೆಟ್ಟಿ ಕಾಂತಾರ ಸಿನಿಮಾದ ಕಾಸ್ಟ್ಯೂಮ್ ಹೊಣೆ ಹೊತ್ತಿದ್ದರು. 1970 ದಶಕವೂ ಸೇರಿದಂತೆ ಹಲವು ಕಾಲಘಟ್ಟದ ದೃಶ್ಯಗಳನ್ನು ಚಿತ್ರೀಕರಿಸೋ ಅಗತ್ಯ ಇದ್ದಿದ್ದರಿಂದ 200-300 ರಷ್ಟು ಸಹ ಕಲಾವಿದರನ್ನು ಸೇರಿದಂತೆ ಎಲ್ಲರಿಗೂ ಕಾಸ್ಟ್ಯೂಮ್ ಒದಗಿಸೋ ಹೊಣೆಗಾರಿಕೆ ಇತ್ತು. ಅದೆಲ್ಲವನ್ನು ನಿಭಾಯಿಸಿದ ಪ್ರಗತಿ ಶೆಟ್ಟಿ ರಿಷಬ್ ಶೆಟ್ಟಿಯವರು ಈ ಸಿನಿಮಾಕ್ಕಾಗಿ ಕೊಡ್ತಿರೋ ಶ್ರಮ ನೋಡಿ ಒಮ್ಮೊಮ್ಮೆ ಅಚ್ಚರಿಪಡುತ್ತಿದ್ದರಂತೆ.

ಮಾಧ್ಯಮದ ಜೊತೆ ಮಾತನಾಡಿದ ಪ್ರಗತಿ ಶೆಟ್ಟಿ, ಸಿನಿಮಾಕ್ಕಾಗಿ ಬೆವರು ಹರಿಸೋದು ಅನ್ನೋದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಈ ಸಿನಿಮಾಕ್ಕಾಗಿ ರಿಷಬ್ ಶೆಟ್ಟಿ ರಕ್ತ ಹರಿಸಿದ್ದಾರೆ ಎಂದರೇ ತಪ್ಪಿಲ್ಲ. ಡ್ಯೂಪ್ ಬಳಸದೇ ಫೈಟಿಂಗ್ ದೃಶ್ಯಗಳಲ್ಲಿ ಭಾಗಿಯಾದ ರಿಷಬ್ ಶೆಟ್ಟಿ ದಿನಾ ಒಂದೊಂದು ಕಡೆ ಗಾಯ ಮಾಡಿಕೊಂಡು ಬರುತ್ತಿದ್ದರು. ಅವರು ಮಾತ್ರವಲ್ಲ ಸೆಟ್ ಹಲವರು ಗಾಯಮಾಡಿಕೊಳ್ಳುತ್ತಿದ್ದರು. ಪ್ರತಿನಿತ್ಯ ನಾನು ಶೂಟಿಂಗ್ ಏನು ತೊಂದರೆ ಆಗದಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೇ ಎಂದಿದ್ದಾರೆ.

ಇನ್ನು ಭೂತಕೋಲದಂತಹ ವಿಚಾರವನ್ನು ಸಿನಿಮಾದಲ್ಲಿ ತೋರಿಸುವ ಅಗತ್ಯವಿದ್ದಿದ್ದರಿಂದ ರಿಷಬ್ ಶೆಟ್ಟಿ ಒಂದು ತಿಂಗಳ ಕಾಲ ಮಾಂಸಾಹಾರವನ್ನು ತ್ಯಜಿಸಿ ವ್ರತ ಕೈಗೊಂಡಿದ್ದರಂತೆ. ಅಲ್ಲದೇ ಪಟ್ಟ ಶ್ರಮಕ್ಕೆ ಸಿನಿಮಾ‌‌ ಸಕ್ಸಸ್ ಫಲ ತಂದಿದೆ. ಖುಷಿಯಾಗಿದೆ ಎಂದಿದ್ದಾರೆ. ಆದರೆ ಕಾಂತಾರ ಪಾರ್ಟ್ 2 ಬರುತ್ತಾ ಅನ್ನೋದನ್ನು ವಿವರಿಸಿರೋ ಪ್ರಗತಿ ಶೆಟ್ಟಿ , ಇದುವರೆಗೂ ಅಂತಹ ಯೋಚನೆ ನಮ್ಮ ಮುಂದಿಲ್ಲ.ಆದರೆ ರಿಷಬ್ ಶೆಟ್ರು, ಹೊಂಬಾಳೆ ಫಿಲ್ಸ್ಮ್ ಹಾಗೂ ತಂಡ ಮನಸ್ಸು ಮಾಡಿದ್ರೇ ಆಗಬಹುದು ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ : Shivrajkumar : ಶಿವರಾಜ್‌ ಕುಮಾರ್‌ ಜೊತೆಗೆ ತೆರೆಗೆ ಬರಲು ಸಜ್ಜಾದ ಉಪ್ಪಿ

ಇದನ್ನೂ ಓದಿ : Dhruva Sarja : ಮಗಳು ಹುಟ್ಟಿದ ಬೆನ್ನಲ್ಲೇ ಅಣ್ಣ ಚಿರು ಸರ್ಜಾ, ಅಜ್ಜಿಯನ್ನು ನೆನೆದ ಧ್ರುವ ಸರ್ಜಾ

Rishabh Shetty wife Pragathi Shetty said about the Kantara Movie sequence

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular