ಜೇಮ್ಸ್ ಅದ್ದೂರಿ ಜಾತ್ರೆ ಬಳಿಕ ಮತ್ತೊಂದು ಸಿನಿಜಾತ್ರೆಗೆ ಕರುನಾಡು ಸಾಕ್ಷಿಯಾಗಲಿದೆ. ಸಿನಿಮಾ ಬ್ರಹ್ಮ ಖ್ಯಾತಿಯ ರಾಜಮೌಳಿ ನಿರ್ದೇಶನದ ತ್ರಿಬಲ್ ಆರ್ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದ್ದು, ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ RRR ಚಿತ್ರದ ಪ್ರೀ ರಿಲೀಸ್ (RRR Free Release) ಇವೆಂಟ್ ಚಿಕ್ಕಬಳ್ಳಾಪುರದ ಚೊಕ್ಕನಹಳ್ಳಿ ಯಲ್ಲಿ ನಡೆಯಲಿದೆ. ಕರ್ನಾಟಕ ಹಾಗೂ ಅಂಧ್ರಗಡಿ ಜಿಲ್ಲೆಯಾಗಿರುವ ಚಿಕ್ಕಬಳ್ಳಾಪುದದಲ್ಲಿ ಎರಡು ಭಾಷೆಯ ಪ್ರೇಕ಼ಕರನ್ನು ಗುರಿಯಾಗಿಟ್ಟುಕೊಂಡು ಈ ಇವೆಂಟ್ ಆಯೋಜಿಸಲಾಗಿದ್ದು ಸಮಾರಂಭಕ್ಕೆ ಬಹುತೇಕ ಮೂರು ಲಕ್ಷ ಜನ ಪಾಲ್ಗೊಳ್ಳುವ ನೀರಿಕ್ಷೆ ಇದೆ.

ಮೊದಲೇ ನಿರ್ಧರಿಸಿದ್ದ ಈ ಕಾರ್ಯಕ್ರಮಕ್ಕೆ ಹಿಜಾಬ್ ತೀರ್ಪಿನ ಕಾರಣಕ್ಕೆ ವಿಧಿಸಲಾದ ನಿಷೇಧಾಜ್ಞೆ ಅಡ್ಡಿ ಯಾಗುವ ಆತಂಕ ಎದುರಾಗಿತ್ತು. ಆದರೆ ಜಿಲ್ಲಾಡಳಿತ ಮಾರ್ಚ್ 17 ಕ್ಕೆ ನಿಷೇಧಾಜ್ಞೆ ಕೊನೆಗೊಳಿಸಿದ್ದರಿಂದ ಅದ್ದೂರಿ ಕಾರ್ಯಕ್ರಮ ಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಆರ್ ಆರ್ ಆರ್ ಕಾ ಕ್ರಮಕ್ಕಾಗಿ19 ಎಕರೆ ಜಾಗದಲ್ಲಿ ಬೃಹತ ವೇದಿಕೆ ಸಿದ್ಧಪಡಿಸಲಾಗಿದ್ದು, ಶನಿವಾರ ಸಂಜೆ ಆರು ಗಂಟೆಗೆ RRR ಚಿತ್ರದ ಪ್ರೀ ರಿಲೀಸ್ ಇವೆಂಟ್ ಆರಂಭವಾಗಲಿದೆ. ಈ ಫ್ರೀ ರಿಲೀಸ್ ಇವೆಂಟ್ ನಲ್ಲಿ ಚಿತ್ರತಂಡ ಭಾಗಿಯಾಗಲಿದ್ದು ಇದಕ್ಕೂ ಮುನ್ನ ಮಧ್ಯಾಹ್ನ ಖಾಸಗಿ ರೆಸಾರ್ಟ್ ನಲ್ಲಿ ಆರ್ ಆರ್ ಆರ್ ಚಿತ್ರತಂಡ ಮಾಧ್ಯಮದ ಜೊತೆ ಸಂವಾದ ನಡೆಸಲಿದೆ

ಈ ಸಂವಾದದಲ್ಲಿ ನಿರ್ದೇಶಕ ರಾಜ್ ಮೌಳಿ, ಜೂ.ಎನ್ ಟಿ ಅರ್, ರಾಮ್ ಚರಣ್ ತೇಜ, ಹಾಗೂ ನಾಯಕಿ ಆಲಿಯಾ ಭಟ್ ಭಾಗಿಯಾಗಲಿದ್ದಾರೆ. ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಮೊದಲಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಚಿತ್ರತಂಡ ಗೌರವ ನಮನ ಸಲ್ಲಿಸಲಿದೆ. ಅಲ್ಲದೇ ಇದೇ ಸ್ಟೇಜ್ ಪ್ರೋಗ್ರಾಂ ನಲ್ಲಿ ಪುನೀತ್ ಅಭಿನಯದ ಚಿತ್ರಗಳ ಹತ್ತು ಹಾಡುಗಳ ರೀಮಿಕ್ಸ್ ಗೆ ಡ್ಯಾನ್ಸರ್ಸ್ ಗಳು ಡ್ಯಾನ್ಸ್ ಮಾಡಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

RRR ಈವೆಂಟ್‌ನಲ್ಲಿ ಭಾಗಿಯಾಗ್ತಾರೆ ಶಿವರಾಜ್ ಕುಮಾರ್
ಇನ್ನೂ ಈ ಅದ್ದೂರಿ ಕಾರ್ಯಕ್ರಮದಲ್ಲಿ ಎಮ್ ಎಮ್ ಕೀರವಾಣಿ ಮ್ಯೂಸಿಕಲ್ ನೈಟ್ಸ್ ಇರಲಿದ್ದು, ಚಿತ್ರದ ಹಾಡುಗಳಿಗೆ ನೃತ್ಯ ಕಲಾವಿದರು ಹೆಜ್ಜೆ ಹಾಕಲಿದ್ದಾರೆ. ಇನ್ನೂ RRR ಪ್ರೀ ರಿಲೀಸ್ ಇವೆಂಟ್ ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಸಿನಿಮಾ ತಂಡ ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿಯವರನ್ನು ಆಹ್ವಾನಿಸಿದೆಯಾದರೂ ಸಿಎಂ ನಾಳೆ ಯಾದಗಿರಿ ಜಿಲ್ಲಾ ಪ್ರವಾಸದಲ್ಲಿ ಇರೋದರಿಂದ ಈ ಕಾರ್ಯಕ್ರಮ ಕ್ಕೆ ಗೈರಾಗಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಆರ್ ಆರ್ ಆರ್ ಸಿನಿಮಾ ದಂತಹ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಗೆ ಕಾದಿರೋ ಅಭಿಮಾನಿಗಳು ಫ್ರೀ ರಿಲೀಸ್ ಇವೆಂಟ್ ಕಣ್ತುಂಬಿ ಕೊಳ್ಳೋಕೆ ಉತ್ಸುಕರಾಗಿದ್ದಾರೆ.
ಇದನ್ನೂ ಓದಿ : ಶಾಲೆಯಲ್ಲಿ ಪಾಠವಾಗಲಿದೆ ಅಪ್ಪು ಬದುಕು: ಪಠ್ಯಕ್ರಮಕ್ಕೆ ಸೇರ್ಪಡೆಗೊಳಿಸಲು ಅಭಿಮಾನಿಗಳ ಒತ್ತಡ
ಇದನ್ನೂ ಓದಿ : ಓಟಿಟಿ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನಕ್ಕೇರಿದ ಲವ್ ಮಾಕ್ಟೆಲ್ -2
(RRR Free Release Event in Karnataka, Puneeth honoured by film team)