ಮಂಗಳವಾರ, ಏಪ್ರಿಲ್ 29, 2025
HomeCinemaRudra Movie : ಕ್ರೈಂ ಸಿರೀಸ್ ನಲ್ಲಿ ಮಿಂಚಿದ ಬಾಲಿವುಡ್ ನಟ ಅಜಯ್ ದೇವಗನ್

Rudra Movie : ಕ್ರೈಂ ಸಿರೀಸ್ ನಲ್ಲಿ ಮಿಂಚಿದ ಬಾಲಿವುಡ್ ನಟ ಅಜಯ್ ದೇವಗನ್

- Advertisement -

ಹಾಲಿವುಡ್, ಬಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಈಗ ಎಲ್ಲೆಡೆಯೂ ಓಟಿಟಿ ಯುಗ. ಸೀನಿಯರ್ ಸ್ಟಾರ್, ಜ್ಯೂನಿಯರ್ ಸ್ಟಾರ್ ಎಂಬ ಬೇಧವಿಲ್ಲದೇ ಎಲ್ಲರೂ ಓಟಿಟಿ ಎಂಟ್ರಿ ಕೊಡ್ತಿದ್ದಾರೆ. ಈಗ ಈ ಸಾಲಿಗೆ ಹೊಸ ಸೇರ್ಪಡೇ ಬಾಲಿವುಡ್ ನಟ ಅಜಯ್ ದೇವಗನ್ (Ajay Devgn ). ರುದ್ರ್ ದಿ ಎಡ್ಜ್ ಆಫ್ ಡಾರ್ಕನೆಸ್ (Rudra Movie) ವೆಬ್ ಸೀರಿಸ್ ಮೂಲಕ ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಓಟಿಟಿ ಗೆ ಎಂಟ್ರಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಅಜಯ್ ದೇವಗನ್ ಓಟಿಟಿಯಲ್ಲಿ ಕಾಣಿಸಿಕೊಳ್ಳುತ್ತಿ ದ್ದಾರೆ. ಸೋಷಿಯಲ್‌ ಮೀಡಿಯಾ ದಲ್ಲಿ ಸಖತ್ ಆಕ್ಟಿವ್ ಆಗಿರೋ ಅಜಯ್ ದೇವಗನ್ ಇತ್ತೀಚಿಗೆ ಸಿಹಿಸುದ್ದಿಯೊಂದನ್ನು ಹಂಚಿಕೊಳ್ಳುವುದಾಗಿ ಹೇಳಿಕೊಂಡಿದ್ದರು.

ಇದೀಗ ತಮ್ಮ ಪ್ರೀತಿಯ ಮಗಳು ನ್ಯಾಸಾಳ ಹುಟ್ಟುಹಬ್ಬದಂದು ತಮ್ಮ ಹೊಸ ಪ್ರಾಜೆಕ್ಟ್ ಘೋಷಿಸಿದ್ದು, ರುದ್ರ್ ತಮ್ಮ ಹೊಸ ವೆಬ್ ಸೀರಿಸ್ ಎಂಬುದನ್ನು ಅಜಯ್ ದೇವಗನ್ ಟ್ವೀಟ್ ಮೂಲಕ ಘೋಷಿಸಿದ್ದಾರೆ. ಆ‌ಮೂಲಕ ಓಟಿಟಿ ಬಂದ ಬಾಲಿವುಡ್ ಸ್ಟಾರ್ ಗಳ ಪಟ್ಟಿಗೆ ಅಜಯ್ ದೇವಗನ್ ಕೂಡಾ ಸೇರ್ಪಡೆಗೊಂಡಿದ್ದಾರೆ. ರುದ್ರ್ ದಿ ಎಡ್ಜ್ ಆಫ್ ದಿ ಡಾರ್ಕನೆಸ್ ಎಂಬ ವೆಬ್ ಸೀರಿಸ್ ನ ಫರ್ಸ್ಟ್ ಲುಕ್ ನ್ನು ಅಜಯ್ ದೇವಗನ್ ಶೇರ್ ಮಾಡಿದ್ದಾರೆ‌.

ಪ್ರತಿಭಾವಂತ ನಿರ್ದೇಶಕ ಸೇರಿದಂತೆ ಕಲಾವಿದರ ತಂಡದ ಜೊತೆಗೆ ವಿಭಿನ್ನವಾದ ಕತೆಯಲ್ಲಿ ನಟಿಸುವುದೆಂದರೇ ನನಗೆ ಮೊದಲಿನಿಂದಲೂ ಬಹಳ ಇಷ್ಟ. ಇದೇ ಮೊದಲ ಬಾರಿಗೆ ನಾನು ಡಿಜಿಟಲ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದೇನೆ. ಮೊದಲ ಪ್ರಯತ್ನವಾಗಿ ಕ್ರೈಂ ಥ್ರಿಲ್ಲರ್ ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದೇನೆ. ಇದು ಡಿಸ್ನಿ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾಗಲಿದೆ ನೋಡಿ ಎಂದು ಅಜಯ್ ದೇವಗನ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಈಗಾಗಲೇ ಶಾಹಿದ್ ಕಪೂರ್ ಕೂಡಾ ಓಟಿಟಿ ಗೆ ಎಂಟ್ರಿಕೊಟ್ಟಿದ್ದು, ಅಮೇಜಾನ್ ಪ್ರೈಂ ನ ಥ್ರಿಲ್ಲರ್ ನಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ ಆಕ್ಷ್ಯನ್ ಕಿಂಗ್ ಅಕ್ಷಯ್ ಕುಮಾರ್ ಕೂಡಾ ದಿ ಎಂಡ್ ಎನ್ನುವ ಆಕ್ಷ್ಯನ್ ಶೋ ಮೂಲಕ ಡಿಜಿಟಲ್ ಲೋಕಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಕೊರೋನಾ ಲಾಕ್ ಡೌನ್ ಬಳಿಕ ಅಭಿಷೇಕ್ ಬಚ್ಚನ್,ಇಮ್ರಾನ್ ಖಾನ್, ಮನೋಜಗ ಬಾಜಪೇಯಿ, ಸುಷ್ಮಿತಾ ಸೇನ್, ಸನ್ನಿ ಡಿಯೋಲ್, ಸೈಫ್ ಅಲಿಖಾನ್ ಸೇರಿದಂತೆ ಹಲವು ಬಾಲಿವುಡ್ ಸ್ಟಾರ್ ಗಳು ಓಟಿಟಿಯಲ್ಲಿ ಸಕ್ರಿಯವಾಗಿ ನಟಿಸುತ್ತಿದ್ದಾರೆ.

ಇದನ್ನೂ ಓದಿ : Vikrant Rona Kichcha Sudeep : ಇಂಗ್ಲೀಷ್ ನಲ್ಲೂ ಅಬ್ಬರಿಸಿದ ಕಿಚ್ಚ ಸುದೀಪ್ : ವಿಕ್ರಾಂತ್ ರೋಣ ಟೀಂನಿಂದ ಬಂತು ಅಪ್ಡೇಟ್

ಇದನ್ನೂ ಓದಿ : Sanjjanaa Galrani Adam Bidapa : ಮಾನಸಿಕ ಕಿರುಕುಳದ ಆರೋಪ‌ : ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ಸಂಜನಾ

(Rudra Movie Rudra The Edge of Darkness review, Ajay Devgn and Raashii Khanna crime series)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular