ಸೋಮವಾರ, ಏಪ್ರಿಲ್ 28, 2025
HomeCinemaಫೋಟೋಶೂಟ್‌ನಲ್ಲಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡ ಬಿಗ್‌ ಬಾಸ್‌ ಖ್ಯಾತಿಯ ಸಾನ್ಯಾ ಅಯ್ಯರ್‌

ಫೋಟೋಶೂಟ್‌ನಲ್ಲಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡ ಬಿಗ್‌ ಬಾಸ್‌ ಖ್ಯಾತಿಯ ಸಾನ್ಯಾ ಅಯ್ಯರ್‌

- Advertisement -

ಕನ್ನಡ ಬಿಗ್‌ಬಾಸ್‌ ಸೀಸನ್‌ 9ರ ಸ್ಪರ್ಧಿ ಸಾನ್ಯಾ ಅಯ್ಯರ್‌ ಸದಾ ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್‌, ವಿಡಿಯೋ, ರೀಲ್ಸ್‌ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಸಾನ್ಯಾ ಅಯ್ಯರ್‌ ಚಿಕ್ಕ ವಯಸ್ಸಿನಲ್ಲೇ ಬಣ್ಣದಲೋಕಕ್ಕೆ ಕಾಲಿಟ್ಟಿದ್ದಾರೆ. ಮೊದಲು ಈ ಟಿವಿಯಲ್ಲಿ (ಈಗೀನ ಕಲರ್ಸ್‌ ಕನ್ನಡ) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟಗೌರಿ ಮದುವೆ ಸೀರಿಯಲ್‌ನಲ್ಲಿ ಬಾಲನಟಿ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಬಾಲನಟಿಯಾಗಿ ತಮ್ಮ ಅದ್ಬುತ ನಟನೆಯ ಮೂಲಕ ಕರುನಾಡ ಜನತೆಯ ಮನ ಗೆದ್ದಿದ್ದಾರೆ. ಇದೀಗ ಸ್ಟಾರ್ ನಟಿಯರು ಹಿಂದಿಕ್ಕುವಂತೆ ಫೋಟೋಶೂಟ್‌ (Saanya Iyer New Photo Shoot) ಮಾಡಿಸಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಸಾನ್ಯಾ ಅಯ್ಯರ್‌ ಹಂಚಿಕೊಂಡ ಫೋಟೋಸ್‌ಗಳು ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಮಾಡಿದೆ. ಸಾನ್ಯಾ ಐಯ್ಯರ್ ಬ್ಲ್ಯಾಕ್ ಕಲರ್ ಡ್ರೆಸ್ ಹಾಕಿದ್ದು, ಮಾದಕ ನೋಟ ಬೀರಿದ್ದಾರೆ. ನೋಡೋಕೆ ಸಖತ್ ಕ್ಯೂಟ್ ಅಂಡ್ ಹಾಟ್ ಆಗಿ ಕಾಣಿಸುತ್ತಾ ಇದ್ದಾರೆ. ಸಾನ್ಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಫೋಟೋಸ್‌ಗೆ ಸಾವಿರಾರು ಲೈಕ್ಸ್‌ ಹಾಗೂ ಕಾಮೆಂಟ್‌ಗಳು ಬಂದಿದೆ. ಪೋಟೋದಲ್ಲಿ ಒಔಟ್‌ ಫಿಟ್‌, ಹೇರ್‌ ಸ್ಟೈಲ್‌ ಮೇಕ್‌ಅಪ್‌ ಎಲ್ಲಾ ಹೊಂದಿಕೆ ಆಗಿದ್ದು, ಸೂಪರ್‌ ಆಗಿ ಕಾಣಿಸಿಕೊಂಡಿದ್ದಾರೆ.

ಸಾನ್ಯಾ ಫೋಟೋಗಳನ್ನು ನೋಡಿದ ಫ್ಯಾನ್ಸ್‌ ಮೆಚ್ಚಿಕೊಂಡಿದ್ದಾರೆ. ಫೈರ್, ಹಾಟ್ ಕ್ವೀನ್, ಸೂಪರ್, ನಮ್ಮ ಕನ್ನಡದ ತಮನ್ನಾ ಎಂದೆಲ್ಲಾ ವಿವಿಧ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಸದ್ಯ ಸಾನ್ಯಾ ಅಯ್ಯರ್‌ ಫೋಟೋ ಶೂಟ್‌ನ್ನು ಬಾಲಿವುಡ್‌ ಫೋಟೋಗ್ರಾಫರ್‌ ಡಬೂ ರತ್ನಾನಿ ಮಾಡಿದ್ದಾರೆ. ಇದನ್ನು ಸ್ವತಃ ಸಾನ್ಯಾ ಅಯ್ಯರ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಫೋಟೋಗಳಲ್ಲಿ ಕಾಣಬಹುದಾಗಿದೆ. ಡಬ್ಬೂ ರತ್ನಾನಿ ಬಾಲಿವುಡ್‌ ಸ್ಟಾರ್‌ ನಟ ನಟಿಯರ ಫೋಟೋಗಳನ್ನು ಮಾಡುವುದರಲ್ಲಿ ಫೇಮಸ್‌ ಆಗಿದ್ದಾರೆ.

ಇದನ್ನೂ ಓದಿ : ವಿಶ್ವ ಸುಂದರಿ ಸ್ಪರ್ಧಿ ಸಿಯೆನ್ನಾ ವೀರ್ ದುರಂತ ಸಾವು

ಇದನ್ನೂ ಓದಿ : ಮೌನವಾಗಿದ್ಯಾಕೇ ಮೋಹಕ ತಾರೆ ! ಕೊನೆಗೂ ಅಜ್ಞಾತವಾಸಕ್ಕೆ ಕಾರಣ ಕೊಟ್ಟ ರಮ್ಯ

ಅಷ್ಟೇ ಅಲ್ಲದೇ ಸಾನ್ಯಾ ಅಯ್ಯರ್‌ಗೆ ದೊಡ್ಡ ನಟಿಯಾಗುವ ಕನಸು ಇದೆ. ನಟನೆಯಲ್ಲೇ ಎನಾದ್ರೂ ಮಾಡಬೇಕು, ಸಾಧಿಸಬೇಕು ಎನ್ನುವ ಆಸೆ ಕೂಡ ಇಟ್ಟುಕೊಂಡಿದ್ದಾರೆ. ಹಾಗಾಗಿ ಸಾನ್ಯಾ ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅದಕ್ಕಾಗಿಯೇ ಪೋಟೋಶೂಟ್‌ ಮಾಡಿಸಿದ್ದಾರೆ ಎನ್ನಲಾಗಿದೆ.

Saanya Iyer New Photo Shoot : Bigg Boss fame Sanya Iyer looked really hot in the photo shoot.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular