ಸದಾ ಒಂದಿಲ್ಲೊಂದು ಸಿನಿಮಾದ ಮೂಲಕ ಪ್ರೇಕ್ಷಕರ ಮನ ಗೆಲ್ಲುತ್ತಿದ್ದ ಸಾಯಿ ಪಲ್ಲವಿ ಇದೀಗ ಕಾಲೇಜಿಗೆ ವೈದ್ಯಕೀಯ ಪರೀಕ್ಷೆ ಬರೆಯಲು ಹಾಜರಾಗಿದ್ದಾರೆ. ಈ ವೇಳೆಯಲ್ಲಿ ಅಭಿಮಾನಿಗಳು ನೆಚ್ಚಿನ ನಟಿಯೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ರು. ಅಷ್ಟಕ್ಕೂ ಇದ್ಯಾವುದೋ ಸಿನಿಮಾದ ಶೂಟಿಂಗ್ ಅಲ್ಲ.

ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ನಟನೆಯ ಜೊತೆಗೆ ವೈದ್ಯಕೀಯ ಪದವಿ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಿರುಚ್ಚಿಯಲ್ಲಿರುವ ಎಂಎಎಂ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದರು.

ಮಾಸ್ಕ್ ತೊಟ್ಟು, ದುಪ್ಪಟ್ಟ ಹೊದ್ದುಕೊಂಡು ಪರೀಕ್ಷೆ ಹಾಜರಾಗಿದ್ದರು. ಆದರೆ ಕಾಲೇಜಿನಲ್ಲಿ ಕೆಲ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಾಯಿ ಪಲ್ಲವಿಯವರನ್ನು ಕಂಡು ಹಿಡಿದಿದ್ದಾರೆ. ಈ ವೇಳೆ ಅವರ ಜೊತೆ ಸೆಲ್ಫಿಗಳನ್ನು ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಈಗ ನಟಿ ಅಭಿಮಾನಿಗಳ ಜೊತೆ ತೆಗೆದುಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಲವ್ ಸ್ಟೋರಿ ಮತ್ತು ವಿರಾಟಾ ಪರ್ವಂ ಸಿನಿಮಾದಲ್ಲಿ ಬ್ಯುಸಿಯಾಗಿರುವ ಸಾಯಿ ಪಲ್ಲವಿ. ಶೇಖರ್ ಕಮ್ಮುಲಾ ನಿರ್ದೇಶನದ ನಾಗ ಚೈತನ್ಯ ನಾಯಕನಟನಾಗಿ ನಟಿಸುತ್ತಿರುವ ಲವ್ ಸ್ಟೋರಿ ಸಿನಿಮಾದ ಶೂಟಿಂಗ್ ಸೆಪ್ಟೆಂಬರ್ ಮೊದಲ ವಾರದಲ್ಲಿ ಆರಂಭವಾಗಲಿದೆ.

ರಾಣಾ ದಗ್ಗು ಬಾಟಿ ಮತ್ತು ಪ್ರಿಯಾ ಮಣಿ ಜೊತೆಯಲ್ಲಿ ವಿರಾಟ ಪರ್ವ ಸಿನಿಮಾದಲ್ಲಿಯೂ ಸಾಯಿ ಪಲ್ಲವಿ ಕಾಣಿಸಿಕೊಳ್ಳುತ್ತಿದ್ದಾರೆ. ಸದಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದರೂ ಸಾಯಿ ಪಲ್ಲವಿಗೆ ವೈದ್ಯ ಶಿಕ್ಷಣದ ಒಲವು ಮಾತ್ರ ಕಡಿಮೆಯಾಗಿಲ್ಲ.

ಸಾಯಿ ಪಲ್ಲವಿ ಜಾರ್ಜಿಯದಲ್ಲಿ ವೈದ್ಯಕೀಯ ಕಾಲೇಜಿನಲ್ಲಿ 2016ರಿಂದ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಾರೆ. ಭಾರತದಲ್ಲಿ ಔಷಧಿಯ ಬಗ್ಗೆ ಅಧ್ಯಯನ ಮಾಡಲು, ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆಯನ್ನು ಪಾಸ್ ಮಾಡಬೇಕಿದೆ. ಈ ಪರೀಕ್ಷೆಯನ್ನು ಬರೆಯಲು ಸಾಯಿ ತಿರುಚ್ಚಿಯ ಎಂಎಎಂ ಕಾಲೇಜಿನಲ್ಲಿ ನಡೆದ ಪರೀಕ್ಷೆಯಲ್ಲಿ ಹಾಜರಾಗಿದ್ದರು.