ಟಾಲಿವುಡ್ ನಟಿಯಾಗಿದ್ದರೂ ದೇಶದಾದ್ಯಂತದ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿರೋ ಚೆಲುವೆ ಸಮಂತಾ (Samantha Ruth Prabhu)). ಟಾಲಿವುಡ್ ನಿಂದ ಕೆರಿಯರ್ ಆರಂಭಿಸಿ ಸದ್ಯ ಸೌತ್ ಸ್ಟಾರ್ ಎನ್ನಿಸಿರೋ ಸಮಂತಾ (Samantha Ruth Prabhu ) ಈಗ ಸೋಷಿಯಲ್ ಮೀಡಿಯಾ ಹಾಟ್ ಫೆವರಿಟ್. ವೈಯಕ್ತಿಕ ಬದುಕಿನಲ್ಲಿ ನೋವುಂಡ ಬಳಿಕ ಮುಕ್ತ ಮುಕ್ತವಾಗಿ ಬದುಕಲು ಆರಂಭಿಸಿರೋ ಈ ಚೆಲುವೆ ಆಭಿಮಾನಿಗಳಿಗೆ ಈಗ ಮತ್ತಷ್ಟು ಹತ್ತಿರವಾಗಿದ್ದಾರೆ. ಇನ್ ಸ್ಟಾಗ್ರಾಂ ಮೂಲಕವೇ ತಮ್ಮೆಲ್ಲ ಸಂಗತಿಗಳನ್ನು ಅಪ್ಡೇಟ್ ಮಾಡೋ ಸಮಂತಾ ಈಗ ತಮ್ಮ ಸ್ಪೆಶಲ್ ಸಿಹಿಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

ಫೆ.26 ಸಮಂತಾ ಪಾಲಿಗೆ ಸ್ಪೆಶಲ್ ದಿನವಂತೆ. ಅದಕ್ಕೆ ಕಾರಣ ಮತ್ತೇನೂ ಅಲ್ಲ ಫೆ.26 2010 ರಲ್ಲಿ ಇದೇ ದಿನದಂದು ಯೇ ಮಾಯಾ ಚೇಸಾವೇ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದರು. ಈ ದಿನಕ್ಕೆ 12 ವರ್ಷ ಸಂದ ಹಿನ್ನೆಲೆಯಲ್ಲಿ ತಮ್ಮ ಇನ್ ಸ್ಟಾಗ್ರಾಂನಲ್ಲಿ ನಟಿ ಸಮಂತಾ (Samantha Ruth Prabhu ) ಸ್ಪೆಶಲ್ ಪೋಟೋ ಹಾಗೂ ಸಂದೇಶವೊಂದನ್ನು ಹಂಚಿ ಕೊಂಡಿದ್ದಾರೆ. ಇಂದು ನಾನು ಎದ್ದ ಕೂಡಲೇ ನಾನು ಚಿತ್ರರಂಗದಲ್ಲಿ ೧೨ ವರ್ಷ ಪೊರೈಸಿರುವ ವಿಚಾರ ನೆನಪಾಯಿತು. ಲೈಟ್ಸ್ ,ಕ್ಯಾಮರಾ ಆಕ್ಷ್ಯನ್ ಮತ್ತು ಮರೆಯಲಾರದ 12 ವರ್ಷಗಳು ನನ್ನನ್ನು ಕಾಡಿತು. ಈ ಜರ್ನಿಯಲ್ಲಿ ನನ್ನನ್ನು ಮೆಚ್ಚಿದ ಅಭಿಮಾನಿಗಳಿಗೆ ಧನ್ಯವಾದ ಎಂದಿದ್ದಾರೆ.

ಅಲ್ಲದೇ ತಮ್ಮ ಸಿನಿಜರ್ನಿಯ ಬಗ್ಗೆಯೂ ಮಾತನಾಡಿದ ಸಮಂತಾ (Samantha Ruth Prabhu ), ಸಿನಿಮಾದ ಬಗೆಗಿನ ನನ್ನ ಪ್ರೀತಿ ಎಂದಿಗೂ ಕೊನೆಯಾಗುವುದಿಲ್ಲ ಮತ್ತು ದಿನದಿಂದ ದಿನಕ್ಕೆ ಪ್ರೀತಿ ಹೆಚ್ಚಾಗುತ್ತ ದೆಯೇ ವಿನಃ ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ಕ್ಯಾಪ್ಸನ್ ಬರೆದಿದ್ದಾರೆ. ಸದ್ಯ ಸೌತ್ ಬೆಡಗಿ ಸಮಂತಾ ಕೈಯಲ್ಲಿ ಸಮಂತಾ ಗುಣಶೇಖರ್ ನಿರ್ದೇಶನದ ಶಾಕುಂತಲಂ ಸಿನಿಮಾ ಇದೆ. ಮೊನ್ನೆ ಮೊನ್ನೆಯಷ್ಟೇ ಶಾಕುಂತಲಂ ಸಿನಿಮಾದ ಫರ್ಸ್ಟ್ ಲುಕ್ ರಿಲೀಸ್ ಆಗಿದ್ದು ಗಮನ ಸೆಳೆದಿತ್ತು.

ಇದಲ್ಲದೇ ವಿಘ್ನೇಶ್ ಶಿವನ್ ನಟನೆಯ ಕಾತುವಾಕುಲ್ ರೆಂಡು ಕಾದಲ್ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಪುಷ್ಪ ಸಿನಿಮಾದ ಊ ಅಂಟಾವಾ ಉಹೂಂ ಅಂಟಾವಾ ಸಾಂಗ್ ಮೂಲಕ ಸಮಂತಾ (Samantha Ruth Prabhu ) ಸಖತ್ ಪಬ್ಲಿಸಿಟಿ ಪಡೆದುಕೊಂಡಿದ್ದು ಈ ಹಾಡು ಹಲವು ದಾಖಲೆ ಬರೆದಿದೆ. ಕೆಲ ತಿಂಗಳ ಹಿಂದೆಯಷ್ಟೇ ಸಮಂತಾ ಅಕ್ಕಿನೇನಿ ಹೆಸರಿನಿಂದ ಹೊರಬಂದು ಸಮಂತಾ ವಿಚ್ಚೇಧನ ಪಡೆದಿದ್ದು ದೊಡ್ಡ ಸುದ್ದಿಯಾಗಿತ್ತು.
ಇದನ್ನೂ ಓದಿ : ಮಾಲ್ಡೀವ್ಸ್ ಅಮೈರಾ ಮಾದಕಲೋಕ : ಬಿಕನಿಯಲ್ಲಿ ಮತ್ತೇರಿಸಿದ ಪ್ರಸ್ತಾನಂ ಚೆಲುವೆ
ಇದನ್ನೂ ಓದಿ : ಕಂಗನಾ ರಣಾವತ್‌ಗೆ ಮುಗಿಯದ ಸಂಕಷ್ಟ: ಲಾಕ್ ಅಪ್ ಶೋ ವಿರುದ್ಧ ತಡೆಯಾಜ್ಞೆ
(Samantha Ruth Prabhu emotional note to express her gratitude to the fans on her journey – Viral post)