ಸೋಮವಾರ, ಏಪ್ರಿಲ್ 28, 2025
HomeCinemaSamantha comeback Bollywood : ಮತ್ತೆ ಸದ್ದು ಮಾಡಿದ ಸಮಂತಾ : ಬಾಲಿವುಡ್ ನಿಂದ ಬಂತು...

Samantha comeback Bollywood : ಮತ್ತೆ ಸದ್ದು ಮಾಡಿದ ಸಮಂತಾ : ಬಾಲಿವುಡ್ ನಿಂದ ಬಂತು ಮೂರು ಸಿನಿಮಾ ಆಫರ್

- Advertisement -

ಸದ್ಯ ಸಿನಿಮಾ ಇಂಡಸ್ಟ್ರಿಯಲ್ಲೇ ಸದ್ದು ಮಾಡ್ತಿರೋ ಹೆಸರು ಸಮಂತಾ. ವಿವಾಹ ವಿಚ್ಛೇಧನ ಪಡೆದ ಕಾರಣಕ್ಕೆ ಕಳೆದ ಎರಡು ಮೂರು ತಿಂಗಳಿನಿಂದ ಸಮಂತಾ ಮಾಡಿದ್ದೆಲ್ಲ ಸುದ್ದಿಯಾಗುತ್ತಲೇ ಇದೆ. ತೆಲುಗು ತಮಿಳಿನಲ್ಲಿ ಕೈತುಂಬ ಆಫರ್ ಇಟ್ಕೊಂಡು ಬ್ಯುಸಿಯಾಗಿರೋ ಸಮಂತಾಗೆ (Samantha comeback Bollywood) ಈಗ ಬಾಲಿವುಡ್ ನಿಂದಲೂ ಭರ್ಜರಿ ಆಫರ್ ಬಂದಿದೆಯಂತೆ.

ಈ ಮೊದಲು ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ನಲ್ಲಿ ನಟಿಸಿದ್ದ ಸಮಂತಾ ಆಗಲೇ ಬಾಲಿವುಡ್ ಗಮನ ಸೆಳೆದಿದ್ದರು. ಸಾಕಷ್ಟು ಅವಕಾಶಗಳು ಬಂದಿತ್ತು. ಆದರೆ ಸಮಂತಾ ನಟಿಸುವ ಮನಸ್ಸು ಮಾಡಿರಲಿಲ್ಲ. ಈಗ ಸಮಂತಾ ವಿವಾಹ ವಿಚ್ಛೇಧನ ಪಡೆದಿದ್ದು, ಮುಕ್ತವಾಗಿ ಬದುಕ ತೊಡಗಿದ್ದಾರೆ. ಮಾತ್ರವಲ್ಲ ಸಿನಿಮಾಕ್ಕೆ ಬರ್ತಿರೋ ಅವಕಾಶಗಳನ್ನು ಅಷ್ಟೇ ನಾಜೂಕಾಗಿ ಅಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಪುಷ್ಪ ಸಿನಿಮಾದಲ್ಲಿ ಮೈಚಳಿ ಬಿಟ್ಟು ಐಟಂ ಸಾಂಗ್ ಗೆ ಡ್ಯಾನ್ಸ್ ಮಾಡಿದ್ದು ಮತ್ತೆ ಬಾಲಿವುಡ್ ಮಂದಿಯ ಗಮನ ಸೆಳೆದಿದೆ.

ಹೀಗಾಗಿ ಬಾಲಿವುಡ್ ನ ಫೇಮಸ್ ಸಿನಿಮಾ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ಸಮಂತಾಗೆ ತಮ್ಮ ಮುಂದಿನ ಮೂರು ಚಿತ್ರಗಳ ನಾಯಕಿ ರೋಲ್ ಗೆ ಆಹ್ವಾನಿಸಿದ್ದಾರಂತೆ. ಈ ಬಿಗ್ ಆಫರ್ ಗೆ ಸಮಂತಾ ಸಹಿ ಕೂಡ ಹಾಕಿದ್ದಾರಂತೆ. ನಾನು ಬಾಲಿವುಡ್ ನಲ್ಲಿ ನಟಿಸಲು ಉತ್ಸುಕನಾಗಿದ್ದೇನೆ ಎಂದಿರುವ ಸಮಂತಾ ಈ ಮೂರು ಸಿನಿಮಾಗಳನ್ನು ಒಪ್ಪಿಕೊಂಡು ಬಾಲಿವುಡ್ ಗೆ ಎಂಟ್ರಿಕೊಡೋದನ್ನು ಖಚಿತ ಪಡಿಸಿದ್ದಾರೆ.

ಹಾಗಂತ ಬಾಲಿವುಡ್ ನಲ್ಲಿ ಮಾತ್ರ ಸಮಂತಾಗೆ ಆಫರ್ ಇದೆ ಅಂದ್ಕೋಬೇಡಿ. ಸದ್ಯ ಸಮಂತಾ ಕೈತುಂಬ ಸಿನಿಮಾಗಳಿವೆ. ತಮಿಳಿನ ಕಾತು ವಾಕುಲ ರೆಂಡು ಕಾದಲ್, ಯಶೋಧ, ಶಾಕುಂತಲಂ ನಲ್ಲಿ ಬ್ಯಸಿಯಾಗಿದ್ದರು. ಇನ್ನೊಂದು ಕಡೆ ಬಾಲಿವುಡ್ ನ ಸಿನಿಮಾ ಆಫರ್ ಗೂ ಮುನ್ನವೇ ಸಮಂತಾ ಕೈಯಲ್ಲಿ ಮೂರು ಬಾಲಿವುಡ್ ಪ್ರೊಜೆಕ್ಟ್ ಗಳಿದ್ದು, ಸಮಂತಾ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ತಂಡ ತೆರೆಗೆ ತರುತ್ತಿರುವ ಸಿಟಾಡೆಲ್ ವೆಬ್ ಸೀರಿಸ್ ನಲ್ಲೂ ನಟಿಸಿದ್ದಾರೆ.

ಇನ್ನು ಕೇವಲ ಸಿನಿಮಾ ವಿಚಾರ ಮಾತ್ರವಲ್ಲ ಸಂಭಾವನೆ ವಿಚಾರದಲ್ಲೂ ಸಮಂತಾ ಸಖತ್ ಸದ್ದು ಮಾಡಿದ್ದು ಪುಷ್ಪ ಸಿನಿಮಾದ ಐಟಂ ಸಾಂಗ್ ಗೆ ಬರೋಬ್ಬರಿ 5 ಕೋಟಿ ಪಡೆದಿದ್ದು ಸಂಭಾವನೆ ವಿಚಾರದಲ್ಲಿ ರಶ್ಮಿಕಾರನ್ನು ಮೀರಿಸಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ : ಕನಸು‌ ನನಸಾದ ಖುಷಿಯಲ್ಲಿ ಕಿರಿಕ್ ಹುಡುಗಿ : ಪ್ರಭುದೇವಾ ಜೊತೆ ಹೆಜ್ಜೆ ಹಾಕಿದ ಸಂಯುಕ್ತಾ ಹೆಗ್ಡೆ

ಇದನ್ನೂ ಓದಿ : Radhika Kumaraswamy : ಸೋಷಿಯಲ್ ಮೀಡಿಯಾಕ್ಕೆ ಮತ್ತೇರಿಸಿದ ಸ್ವೀಟಿ : ರಾಧಿಕಾ ಕುಮಾರಸ್ವಾಮಿ ವಿಡಿಯೋ ವೈರಲ್

(Samantha, who made her comeback Bollywood, is a three-film offer)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular