ಸೋಮವಾರ, ಏಪ್ರಿಲ್ 28, 2025
HomeCinemaDarshan Thoogudeepa Birthday : ಈ ವರ್ಷವೂ ಹುಟ್ಟುಹಬ್ಬ ಆಚರಿಸಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್...

Darshan Thoogudeepa Birthday : ಈ ವರ್ಷವೂ ಹುಟ್ಟುಹಬ್ಬ ಆಚರಿಸಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ : ಈ ನಿರ್ಧಾರಕ್ಕೆ ಕಾರಣವೇನು ಗೊತ್ತಾ?

- Advertisement -

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಡಿ ಬಾಸ್ ಬರ್ತಡೇ ಹವಾ ಜೋರಾಗಿದೆ. ಕಳೆದ 50 ದಿನಗಳಿಂದಲೂ ಅಭಿಮಾನಿಗಳು ದಚ್ಚು ಬರ್ತಡೇಗೆ ಸ್ಪೆಶಲ್ ಡಿಪಿ ಸಿದ್ಧಪಡಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಹಬ್ಬ ಆಚರಿಸುತ್ತಿದ್ದಾರೆ. ಆದರೆ ಅಭಿಮಾನಿಗಳ ಸಂಭ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan Thoogudeepa Birthday ) ಶಾಕ್ ನೀಡಿದ್ದು, ಈವರ್ಷವೂ ಅದ್ದೂರಿ ಹುಟ್ಟುಹಬ್ಬ ಅಚರಣೆಯಿಲ್ಲ ಎಂದು ದರ್ಶನ್ ಘೋಷಿಸಿದ್ದಾರೆ.

ಕನ್ನಡದ ಸಾರಥಿ, ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇನ್ನೂ ಮೂರು ದಿನ ಮಾತ್ರ ಬಾಕಿ‌ ಇದೆ. ಹೀಗಾಗಿ ಅಭಿಮಾನಿಗಳು ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸೋ ಸಿದ್ಧತೆಯಲ್ಲಿದ್ದರು. ಆದರೆ ಕೊರೋನಾ ಕಾರಣಕ್ಕೆ ಈ ವರ್ಷವೂ ನಟ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿರೋ ನಟ ದರ್ಶನ್, ಮನೆಯಲ್ಲೇ ಇರಿ. ಅಲ್ಲಿಂದಲೇ ಹಾರೈಸಿ ಎಂದು ಮನವಿ ಮಾಡಿದ್ದಾರೆ.

ಪ್ರೀತಿಯ ಅಭಿಮಾನಿಗಳಲ್ಲಿ ನಿಮ್ಮ ದಾಸ ದರ್ಶನ್ ತೂಗುದೀಪ ಮಾಡುವ ವಿನಂತಿ ಎಂದಿರುವ ದರ್ಶನ್, 2021ರ ಕರಾಳ ದಿನಗಳು ಮತ್ತೆ ಮರುಕಳಿಸದಿರಲಿ, ಕೋವಿಡ್ ಇಂದ ಸಂಪೂರ್ಣವಾಗಿ ನಮ್ಮ ಜನತೆ ಚೇತರಿಸಿಕೊಳ್ಳಲಿ ಎಂಬ ಕಾರಣದಿಂದ ನನ್ನ ಹುಟ್ಟುಹಬ್ಬವನ್ನು ಈ ಬಾರಿಯೂ ಸಹ ಸರಳವಾಗಿರಲೆಂದು ನಿರ್ಧರಿಸಿದ್ದೇನೆ. ಈ ಬಾರಿಯೂ ಬೆಂಗಳೂರಿನಲ್ಲಿ ನಾನು ಈ ಸಮಯದಲ್ಲಿರುವುದಿಲ್ಲ. ಬಹಳಷ್ಟು ದೂರದಿಂದ ಮನೆಯ ಹತ್ತಿರ ಬಂದು ನಿರಾಶರಾಗದಿರಿ. ನಿಮ್ಮೆಲ್ಲರನ್ನು ನೋಡಿ ಮುಖಾಮುಖಿಯಾಗುವ ಹಂಬಲವೂ ನನಗೂ ಸಾಕಷ್ಟಿದೆ. ಇವೆಲ್ಲದಕ್ಕೂ ಸದ್ಯದ ಪರಿಸ್ಥಿತಿ ಸೂಕ್ತವಲ್ಲವೆಂಬುದು ನನ್ನ ಭಾವನೆ. ಆದಷ್ಟು ಬೇಗ ನಿಮ್ಮೆಲ್ಲರನ್ನು ಭೇಟಿ ಮಾಡುವೆ ಎಂದು ನಂಬಿದ್ದೇನೆ. ನನ್ನ ಬಗ್ಗೆ ಇಷ್ಟೆಲ್ಲಾ ಪ್ರೀತಿ ಅಭಿಮಾನ ಇಟ್ಟಿರುವ ನೀವು ನನ್ನ ಈ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ‌. ಇಂತಿ ನಿಮ್ಮ ಪ್ರೀತಿಯ ದಾಸ ದರ್ಶನ್ ಎಂದು ದಚ್ಚು ಹೇಳಿದ್ದಾರೆ.

ಇನ್ ಸ್ಟಾಗ್ರಾಂ, ಫೇಸ್ ಬುಕ್, ಟ್ವೀಟ್ ಸೇರಿದಂತೆ ಎಲ್ಲೆಡೆ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಈ ವರ್ಷವೂ ದರ್ಶನ್ ಭೇಟಿ ಅವಕಾಶವಿಲ್ಲ ಎಂಬ ಕಾರಣಕ್ಕೆ ನೊಂದುಕೊಳ್ಳುತ್ತಿದ್ದಾರೆ. ಪ್ರತಿವರ್ಷ ಅದ್ದೂರಿಯಾಗಿ ದಚ್ಚು ಹುಟ್ಟುಹಬ್ಬ ಆಚರಿಸಿ ಅನ್ನದಾನ ಸೇರಿದಂತೆ ಬೇರೆ ಬೇರೆ ರೀತಿಯ ಕಾರ್ಯಕ್ರಮದ ಮೂಲಕ ಸೆಲಿಬ್ರೇಟ್ ಮಾಡಲಾಗ್ತಿತ್ತು. ಕಳೆದ ಮೂರು ವರ್ಷಗಳಿಂದ ಕರೋನಾದಿಂದ ಈ ಅದ್ದೂರಿ ಸೆಲಿಬ್ರೇಶನ್ ಬ್ರೇಕ್ ಬಿದ್ದಿದೆ. ಸದ್ಯ ದರ್ಶನ್ ಕ್ರಾಂತಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು ಹುಟ್ಟುಹಬ್ಬದ ವೇಳೆ ಬೆಂಗಳೂರಿನಿಂದ ಹೊರಗಡೆ ಇರೋದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : Ek Love Ya Trailer: ಏಕ್ ಲವ್ ಯಾ ಟ್ರೇಲರ್ ಜೋಗಿ ಪ್ರೇಮ್ ದೃಶ್ಯ ಕಾವ್ಯ; ಸಿನಿಮಾ ಬಿಡುಗಡೆ ಯಾವಾಗ?

ಇದನ್ನೂ ಓದಿ : A2 MUSICನಲ್ಲಿ ಬಿಡುಗಡೆಯಾಗಲಿದೆ ನಟಿ ಅನಿತಾ ಭಟ್‌ ನಿರ್ಮಾಣದ ಇಂದಿರಾ ಸಿನಿಮಾದ ಹಾಡು

( sandalwood actor darshan Thoogudeepa this year not celebrating Birthday)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular