Dunia Vijay : ಖ್ಯಾತ ನಟ ದುನಿಯಾ ವಿಜಯ್‌ ತಾಯಿ ವಿಧಿವಶ

ಬೆಂಗಳೂರು : ಸ್ಯಾಂಡಲ್‌ವುಡ್‌ ಖ್ಯಾತ ನಟ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.

ನಟ ದುನಿಯಾ ವಿಜಯ್‌ ಅವರು ಸಾಮಾಜಿಕ ಜಾಲತಾಣದಲ್ಲಿ ತನ್ನ ತಾಯಿಯ ಪೋಟೋವನ್ನು ಹಾಖಿ ಮತ್ತೆ ಹುಟ್ಟಿ ಬಾ ಅಮ್ಮಾ ಎಂದು ಬರೆದುಕೊಂಡಿದ್ದಾರೆ. ದುನಿಯಾ ವಿಜಯ್‌ ಅವರ ತಾಯಿ ಕೊರೊನಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿದ್ದರು. ಆದ್ರೆ ಬ್ರೈನ್‌ ಸ್ಟ್ರೋಕ್‌ ಆಗಿತ್ತು.

ನಾರಾಯಣಮ್ಮ ಅಮ್ಮ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಇಷ್ಟವಿಲ್ಲದ ಕಾರಣ ಕಳೆದ ಕೆಲವು ದಿನಗಳಿಂದಲೂ ವೈದ್ಯರು ಮನೆಗೆ ಬಂದು ಚಿಕಿತ್ಸೆ ನೀಡುತ್ತಿದ್ದರು. ಆದ್ರಿಂದು ಚಿಕಿತ್ಸೆ ಫಲಕಾರಿಯಾಗದೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಆನೇಕಲ್‌ ನ ಕುಂಬಾರಹಳ್ಳಿಯಲ್ಲಿ ನಾರಾಯಣಮ್ಮ ಅವರ ಅಂತ್ಯಕ್ರೀಯೆ ನಾಳೆ ಮಧ್ಯಾಹ್ನ ನಡೆಯಲಿದೆ.

https://www.facebook.com/DuniyaVijayOfficial/posts/376931723796462

Comments are closed.