ನಟ ಶರಣ್ ಆಸ್ಪತ್ರೆಯಿಂದ ಡಿಸ್ಚಾರ್ಜ್ : ಅನಾರೋಗ್ಯದ ಬಗ್ಗೆ ಹೇಳಿದ್ದೇನು ?

0

ಸ್ಯಾಂಡಲ್​ವುಡ್​ ನಟ ಶರಣ್ ಅವರು ಸಿನಿಮಾದ ಶೂಟಿಂಗ್ ವೇಳೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆದ್ರೀಗ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮಾತ್ರವಲ್ಲ ತಮ್ಮ ಅನಾರೋಗ್ಯದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿದ್ದ ಅವತಾರ ಪುರುಷ ಸಿನಿಮಾದ ಶೂಟಿಂಗ್ ನಲ್ಲಿ ನಟ ಶರಣ್ ತೊಡಗಿಕೊಂಡಿದ್ರು. ಈ ವೇಳೆಯಲ್ಲಿ ಶರಣ್ ಅವರಿಗೆ ಅನಾರೋಗ್ಯ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಚಿತ್ರತಂಡ ಅವರನ್ನು ಮಲ್ಲಿಗೆ ಆಸ್ಪತ್ರೆಗೆ ಕರೆತಂದಿದ್ದರು. ಹಠಾತ್ ಅನಾರೋಗ್ಯ ಅವರ ಕುಟುಂಬದವರಲ್ಲಿ ಮಾತ್ರವಲ್ಲ ಸ್ಯಾಂಡಲ್​ವುಡ್​ ಹಾಗೂ ಅಭಿಮಾನಿಗಳಲ್ಲೂ ಆತಂಕ್ಕೆ ಕಾರಣವಾಗಿತ್ತು.

ಶರಣ್ ಅವರನ್ನು ಚೆಕಪ್ ಮಾಡಿದ ಆಸ್ಪತ್ರೆ ವೈದ್ಯರು, ಎಕ್ಸ್​ರೇ ತೆಗೆಸಲು ತಿಳಿಸಿದ್ದರು. ಆಗ ಅವರಿಗೆ ಕಿಡ್ನಿ ಸ್ಟೋನ್ ಇರುವುದು ತಿಳಿಯಿತು. ಒಂದು ದಿನದ ಮಟ್ಟಿಗೆ ಅಡ್ಮಿಟ್ ಆಗಿದ್ದ ಅಧ್ಯಕ್ಷ ಶರಣ್, ಇವತ್ತು ಡಿಸ್ಚಾರ್ಜ್ ಆಗಿದ್ದಾರೆ.

ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆಯೇ ಶರಣ್ ಮಾತನಾಡಿದ್ದಾರೆ. ನಾನು ಆಸ್ಪತ್ರೆಯಲ್ಲಿದ್ದರೂ ಮನಸ್ಸಿರುವುದು ಸಿನಿಮಾ ಕಡೆ. ನಿನ್ನೆ ತಡೆಯೋಕೆ ಆಗದಷ್ಟು ನೋವು ಕಾಣಿಸಿಕೊಂಡಿತ್ತು. ನನ್ನ ಜೀವನದಲ್ಲಿ ಇಂತಹ ನೋವು ಅನುಭವಿಸಿರಲಿಲ್ಲ. ಶೂಟಿಂಗ್​ಗೆ ಹೋಗಿದ್ದ ಸಮಯದಲ್ಲಿ ನೋವು ಕಾಣಿಸಿಕೊಂಡಿತ್ತು. ಹಿಂದಿನ ಎರಡು ದಿನಗಳ ಕಾಲ ನೋವು ಕಾಣಿಸಿಕೊಂಡಿದ್ದರೂ, ನನಗೆ ಗೊತ್ತಾಗಿರಲಿಲ್ಲ. ಮಸಲ್ ಕ್ಯಾಚ್ ಆಗಿರಬೇಕು ಅಂದುಕೊಂಡಿದ್ದೆ.

ಆದರೆ ನಿನ್ನೆ ಸೆಟ್ನಲ್ಲಿಯೇ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಪರಿಣಾಮ ಅವತಾರ ಪುರುಷ ಚಿತ್ರತಂಡದವರೇ ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದ್ದರು. ವೈದ್ಯರು ಪರೀಕ್ಷೆ ನಡೆಸಿ ಮೂತ್ರಪಿಂಡದಲ್ಲಿ ಸಣ್ಣ ಪ್ರಮಾಣದ ಕಲ್ಲುಗಳಿದ್ದು, ಎರಡು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಹಾಗೇನಾದರೂ ಮೂರು ದಿನಗಳ ಬಳಿಕ ನೋವು ಕಡಿಮೆ ಆಗದಿದ್ದರೆ ಸರ್ಜರಿ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ನಟ ಶರಣ್ ಇದೀಗ ಮನೆಯಲ್ಲಿಯೇ ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ. ಇದರಿಂದಾಗಿ ಅವತಾರ ಪುರುಷ ಸಿನಿಮಾದ ಶೂಟಿಂಗ್ ವಿಳಂಭವಾಗುವ ಸಾಧ್ಯತೆಯಿದೆ.

Leave A Reply

Your email address will not be published.