ಕಿಚ್ಚ ಸುದೀಪ್ ಅಭಿನಯದ ಬಹುನೀರಿಕ್ಷಿತ ಸಿನಿಮಾ ವಿಕ್ರಾಂತ್ ರೋಣ ಬಿಡುಗಡೆಗೆ ಸಿದ್ಧವಾಗಿದೆ. ಈಗಾಹಲೇ ಹಲವು ಭಾಷೆಯಲ್ಲಿ ಸುದೀಪ್ ಪ್ರಮೋಶನ್ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಸುದೀಪ್ (sudeep next project) ವಿಕ್ರಾಂತ್ ರೋಣ ಬಳಿಕ ಯಾವ ಸಿನಿಮಾ ಒಪ್ಪಿಕೊಳ್ಳಬಹುದು ಎಂಬ ಅಭಿಮಾನಿಗಳ ವರ್ಷಗಳ ಕುತೂಹಲಕ್ಕೆ ಬ್ರೇಕ್ ಬಿದ್ದಿದ್ದು, ಪರಭಾಷಾ ನಿರ್ದೇಶಕರ ಆಕ್ಷ್ಯನ್ ಕಟ್ ಗೆ ಸುದೀಪ್ ಬಣ್ಣ ಹಚ್ಚಲಿದ್ದಾರೆ.
ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ತಲುಪುತ್ತಿದ್ದಂತೆ ಅಭಿಮಾನಿಗಳನ್ನು ಕಾಡಲಾರಂಭಿಸಿದ ಪ್ರಶ್ನೆ ಸುದೀಪ್ ಮುಂದಿನ ಸಿನಿಮಾ ಯಾವುದು ಅನ್ನೋದು. ಕೊನೆಗೂ ಈ ಪ್ರಶ್ನೆ ಗೆ ಉತ್ತರ ಸಿಕ್ಕಿದ್ದು, ಸುದೀಪ್ ಮುಂದಿನ ಸಿನಿಮಾಗೆ ತಮಿಳು ನಿರ್ದೇಶಕ ವೆಂಕಟ್ ಪ್ರಭು ಆಕ್ಷ್ಯನ್ ಕಟ್ ಹೇಳೋದು ಖಚಿತವಾಗಿದೆ. ಸ್ವತಃ ನಟ ಸುದೀಪ್ ಈ ವಿಚಾರವನ್ನು ಮಾಧ್ಯಮ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸುದೀಪ್, ಮಾನಾಡು ಸಿನಿಮಾದ ನಿರ್ದೇಶಕ ವೆಂಕಟ್ ಪ್ರಭು ಅವರ ಡೈರೈಕ್ಷನ್ ನಲ್ಲಿ ಮುಂದಿನ ಸಿನಿಮಾ ಬರಲಿದೆ ಎಂಬ ಮಾಹಿತಿ ನೀಡಿದ್ದಾರೆ.
2007 ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಿರ್ದೇಶಕ ವೆಂಕಟಪ್ರಭು, ಮಂಗಾತ, ಮಾನಾಡು ಅಂತಹ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ .ಬರವಣಿಗೆಯಲ್ಲೂ ಗುರುತಿಸಿ ಕೊಂಡಿರೋ ವೆಂಕಟ್ ಪ್ರಭು,ಲೈವ್ ಟೆಲಿಕಾಸ್ಟ್ ವೆಬ್ ಸರಣಿಯನ್ನು ಬರೆದು ನಿರ್ದೇಶಿಸಿ ಹೆಸರು ಗಳಿಸಿದ್ದರು. ಈ ಸರಣಿಯಲ್ಲಿ ನಟಿ ಕಾಜಲ್ ಅರ್ಗವಾಲ್ ಕೂಡಾ ನಟಿಸಿದ್ದರು. ಆದರೆ ಸುದೀಪ್ ವೆಂಕಟಪ್ರಭು ಯಾವ ಸಿನಿಮಾಗೆ ಆಕ್ಷ್ಯನ್ ಕಟ್ ಹೇಳಲಿದ್ದಾರೆ ಅನ್ನೋ ಸಂಗತಿ ಬಯಲಾಗಿಲ್ಲ.
ಮೂಲಗಳ ಮಾಹಿತಿ ಪ್ರಕಾರ ಸುದೀಪ್ ಈ ಸಿನಿಮಾ ಸ್ವಲ್ಪ ನಿಧಾನವಾಗಿಯೇ ಸಿದ್ಧವಾಗಲಿದ್ದು, ಹೈ ಬಜೆಟ್ ಸಿನಿಮಾವಾಗಲಿದೆ. ಆದರೆ ಸಿನಿಮಾಕ್ಕೆ ಯಾರು ಬಂಡವಾಳ ಹೂಡುತ್ತಿ ದ್ದಾರೆ ಅನ್ನೋ ಮಾಹಿತಿ ಇಲ್ಲ. ಹೊಸ ಸಿನಿಮಾ ಕೂಡಾ ಕನ್ನಡ ಹಿಂದಿ ತಮಿಳು ಹಾಗೂ ಮಲೆಯಾಳಂನಲ್ಲಿ ತೆರೆಗೆ ಬರಲಿದೆಯಂತೆ. ಈ ಹಿಂದೆ ಒಮ್ಮೇ ನಿರ್ದೇಶಕ ವೆಂಕಟ್ ಪ್ರಭು ಸುದೀಪ್‌ಮನೆಗೆ ಭೇಟಿ ನೀಡಿದ್ದರು.
Finally Finally Answer Is Here
— Ruler Kiccha …🤫 (@RulerKiccha) January 2, 2022
Boss Next Project With #VenkatPrabhu
Official Confirm 📣#VikrantRona | #KicchaSudeep | @KicchaSudeep pic.twitter.com/nxehJkc0U5
ಈ ವೇಳೆ ಸುದೀಪ್ ಸ್ವತಃ ಅಡುಗೆ ಮಾಡಿ ವೆಂಕಟ್ ಪ್ರಭು ಅವರಿಗೆ ಔತಣ ನೀಡಿದ್ದರು. ಆ ವೇಳೆಯಲ್ಲಿಯೇ ಸುದೀಪ್ ಮುಂದಿನ ಸಿನಿಮಾಗೆ ವೆಂಕಟ್ ಪ್ರಭು ಆಕ್ಷನ್ ಕಟ್ ಹೇಳ್ತಾರೆ ಎಂದು ನೀರಿಕ್ಷಿಸಲಾಗಿತ್ತು. ಈಗ ವಿಕ್ರಾಂತ್ ರೋಣ ಬಿಡುಗಡೆಗೆ ಫೆ.24 ರಂದು ಮುಹೂರ್ತ ಫಿಕ್ಸ್ ಆಗಿರೋ ಹೊತ್ತಿನಲ್ಲಿ ಸುದೀಪ್ ಮುಂದಿನ ಸಿನಿಮಾದ ಗುಟ್ಟು ಬಿಟ್ಟುಕೊಟ್ಟಿದ್ದಾರೆ.
ಇದನ್ನೂ ಓದಿ : ಪತಿ ಜೊತೆ ನಟಿ ಶ್ರದ್ಧಾ ಆರ್ಯಾ ಟ್ರಿಪ್ : ಅಭಿಮಾನಿಗಳಿಗೆ ಹಾಟ್ ಪೋಟೋಸ್ ಗಿಫ್ಟ್
ಇದನ್ನೂ ಓದಿ : ಕೊನೆಗೂ ತೆರೆಗೆ ಬರ್ತಿದೆ ಚಿರು ಕೊನೆಯ ಚಿತ್ರ, ರಾಜಾಮಾರ್ತಾಂಡ ರಿಲೀಸ್ ಗೆ ಸಿದ್ಧತೆ
( After Vikrant Rona, Sudeep next project give Update)