ಸೋಮವಾರ, ಏಪ್ರಿಲ್ 28, 2025
HomeCinemaAvatara Purusha : ಅವತಾರ ಪುರುಷ ಆಗಮಿಸಲು ಶರಣ್ ಸಿದ್ಧತೆ: ಸಾಥ್‌ ಕೊಡ್ತಿದ್ದಾರೆ ಚುಟು ಚುಟು...

Avatara Purusha : ಅವತಾರ ಪುರುಷ ಆಗಮಿಸಲು ಶರಣ್ ಸಿದ್ಧತೆ: ಸಾಥ್‌ ಕೊಡ್ತಿದ್ದಾರೆ ಚುಟು ಚುಟು ಬೆಡಗಿ

- Advertisement -

ಎರಡು ವರ್ಷಗಳ ಕೊರೋನಾರ್ಭಟದ ಬಳಿಕ ಕನ್ನಡ ಚಲನಚಿತ್ರ ರಂಗ ನಿಧಾನಕ್ಕೆ ಸಹಜಸ್ಥಿತಿಗೆ ‌‌ಮರಳುತ್ತಿದೆ.‌ ಒಂದೊಂದೆ ಸಿನಿಮಾಗಳು ತೆರೆ ಕಾಣುತ್ತಿದ್ದು ಎರಡು ವರ್ಷಗಳ ಅಜ್ಞಾತವಾಸದ ಬಳಿಕ ಕಾಮಿಡಿಕಿಂಗ್ ಹಾಗೂ ಅಲ್ ರೌಂಡರ್ ನಟ ಶರಣ್ ಅವತಾರ ಪುರುಷನಾಗಿ (Avatara Purusha) ಚುಟು ಚುಟು ಬೆಡಗಿ ಜೊತೆ ಮೋಡಿ ಮಾಡಲು ಸಿದ್ಧವಾಗಿದ್ದಾರೆ.

ನಗರದಲ್ಲಿ ಸಿನಿಮಾ ಬಿಡುಗಡೆ ಕುರಿತು ಮಾಹಿತಿ ನೀಡಲು ಚಿತ್ರ ತಂಡ ಸುದ್ದಿಗೋಷ್ಟಿ ನಡೆಸಿದ್ದು ಈ ವೇಳೆ ನಟ ಶರಣ್ ಪುನೀತ್ ರಾಜ್ ಕುಮಾರ್ ರನ್ನು ತುಸು ಭಾವುಕರಾದ್ರು. ನಟಿ ಆಶಿಕಾರಂಗನಾಥ್ ಕೂಡ ಅಪ್ಪು ಸರ್ ನಾ ನಾವು ತುಂಬ ಮಿಸ್ ಮಾಡ್ಕೋತಿವಿ ಎಂದಿದ್ದಾರೆ.

ಶರಣ್ ಕಾಮಿಡಿ ರೋಲ್ ಗಳ ಬಳಿಕ ನಾಯಕನಟರಾಗಿ ಮಿಂಚಲಾರಂಭಸಿದ್ದು ಅವತಾರ ಪುರುಷ ಸಿನಿಮಾದ ಮೂಲಕ ಅವರ ಎಲ್ಲ ಆಸೆಗಳನ್ನು ಈಡೇರಿಸಿಕೊಂಡಿದ್ದಾರಂತೆ. ಯಾವೆಲ್ಲ ರೋಲ್ ಗಳನ್ನು ಮಾಡಬೇಕೆಂಬ ಕನಸಿತ್ತೋ ಅದೆಲ್ಲವನ್ನು ಈಡೇರಿಸಿಕೊಂಡಿದ್ದಿನಿ ಎಂದ ಶರಣ್ ಮನೆಯಲ್ಲಿ ಚಿಕ್ಕವನಿದ್ದಾಗಿನಿಂದಲೂ ನಾನು ಅವತಾರಕ್ಕೆ ಫೇಮಸ್. ಮನೆಯಲ್ಲೂ ನಾನಾ ಅವತಾರಗಳನ್ನು ಮಾಡುತ್ತಿದ್ದೆ. ಈ ಚಿತ್ರದಲ್ಲೂ ಅಷ್ಟೇ ಸಾಕಷ್ಟು ಅವತಾರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ರೋಲ್ ಬಗ್ಗೆ ಮಾಹಿತಿ ನೀಡಿದ್ದಾರೆ.

ಇನ್ನು ಶರಣ್ ನ್ನು ಮತ್ತಷ್ಟು ಜನಪ್ರಿಯಗೊಳಿಸಿದ ಚುಟು ಚುಟು ಸಾಂಗ್ ನ ಸುಂದರಿ ಆಶಿಕಾ ಕೂಡ ಈ ಚಿತ್ರದಲ್ಲಿ ನಾಯಕಿಯಾಗಿ‌ ನಟಿಸಿದ್ದಾರೆ. ಮಾತ್ರವಲ್ಲ ಚುಟು ಚುಟು ಮಾದರಿ ಯಲ್ಲೇ ಉತ್ತರ ಕರ್ನಾಟಕ ಆಕ್ಸೆಂಟ್ ನ ಸಾಂಗ್ ಈ ಚಿತ್ರದಲ್ಲೂ ಪ್ರೇಕ್ಷಕರಿಗೆ ಭರ್ಜರಿ ಎಂಟರಟೇನ್ಮೆಂಟ್ ಒದಗಿಸಲಿದೆಯಂತೆ.

ಶರಣ್ ನ ಅವತಾರ ಪುರುಷ ವಿಶ್ವದಾದ್ಯಂತ ರಿಲೀಸ್ ಆಗಲಿರೋದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಅವನೇ ಶ್ರೀಮನ್ನಾರಾಯಣ ಖ್ಯಾತಿಯ ಪುಷ್ಕರ್ಮ ಲ್ಲಿಕಾರ್ಜುನಯ್ಯ ನಿರ್ಮಿಸಿರುವ ಈ ಚಿತ್ರದಲ್ಲಿ ಸಿಂಪಲ್ ಸುನಿ ಶರಣ್ ಗೆ ಅಕ್ಷ್ಯನ್ ಕಟ್ ಹೇಳಿದ್ದಾರೆ. ಕಲಾವಿದರ ದಂಡೇ ಸಿನಿಮಾದಲ್ಲಿದ್ದು ಸುಧಾರಾಣಿ, ಭವ್ಯ, ಥ್ರಿಲ್ಲರ್‌ಮಂಜು, ಶ್ರೀನಗರ ಕಿಟ್ಟಿ ಸೇರಿದಂತೆ ಹಲವು ಹಿರಿಯ ಕಲಾವಿದರು ಕೂಡ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ.

Aashika Ranganath paired with actor Sharan via avatara Purusha cinema

ಡಿಸೆಂಬರ್ 10 ರಂದು ರಾಜ್ಯದಾದ್ಯಂತ ಸಿನಿಮಾ ರಿಲೀಸ್ ಆಗಲಿದ್ದು ಅಂದೇ ವಿಶ್ವದಾದ್ಯಂತ ಕೂಡ ಸಿನಿಮಾ ‌ಇಂಗ್ಲೀಷ್ ಸಬ್ ಟೈಟಲ್ ಜೊತೆ ತೆರೆ ಕಾಣಲಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಅವತಾರ ಪುರುಷ 2 ಕೂಡಾ ತೆರೆಗೆ ಬರಲಿದ್ದು ಅದಕ್ಕೂ ಕೂಡ ಸಿದ್ಧತೆ ನಡೆದಿದೆ ಎಂದು ನಿರ್ಮಾಪಕ ಪುಷ್ಕರ್‌ಮಲ್ಲಿ‌ಕಾರ್ಜುನಯ್ಯ ಮಾಹಿತಿ‌ನೀಡಿದ್ದಾರೆ. ಆಪ್ತಮಿತ್ರ ಬಳಿಕ‌ ವಿಭಿನ್ನ ಕಥಾನಕದ ಚಿತ್ರಕತೆ ಹೊಂದಿರುವ ಸಿನಿಮಾ ‌ಇದಾಗಿದೆ ನೋಡಿ‌ಪ್ರೋತ್ಸಾಹಿಸಿ ಎಂದು ಪುಷ್ಕರ್‌ ಮನವಿ ಮಾಡಿದ್ದಾರೆ.

https://www.youtube.com/watch?v=pGbiUbulbng

https://www.youtube.com/watch?v=REwB2jzMOKM

ಇದನ್ನೂ ಓದಿ : ಚುಟು ಚುಟು ಬೆಡಗಿಗೆ ಜೊತೆಯಾದ ಶರಣ್ : ಸದ್ಯದಲ್ಲೇ ಅವತಾರ ಪುರುಷನ ಆಟ

ಇದನ್ನೂ ಓದಿ : ಪೆಟ್ರೋಮ್ಯಾಕ್ಸ್ ಗೆ ಸುಮನ್ ರಂಗನಾಥ್ : ಡಿಗ್ಲ್ಯಾಮರ್ ಪಾತ್ರದಲ್ಲಿ ಗ್ಲಾಮರ್ ಬೊಂಬೆ

(Aashika Ranganath, who paired up with Avatara Purusha, Sharan, is set to open in December)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular