ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಹೆಸರು ಕೇಳಿದ್ರೆ ಸಾಕು ಎಂತವರೂ ಕಣ್ಣೀರು ಹಾಕ್ತಾರೆ. ಅದ್ರಲ್ಲೂ ಚಿತ್ರರಂಗ ಪುನೀತ್ ರಾಜ್ ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡ ನೋವಿನಿಂದ ಇನ್ನೂ ಹೊರಬಂದಿಲ್ಲ. ಇದೀಗ ಚಂದನವನದ ನಟಿ ಆಶಿಕಾ ರಂಗನಾಥ್ (Ashika Ranganth) ಕೂಡ ಅಪ್ಪು ನೆನೆದು ಕಣ್ಣೀರಿಟ್ಟಿದ್ದಾರೆ. ಪುನೀತ್ ಸರ್ ಜೊತೆಗೆ ನಟಿಸೋ ಕನಸು ನನಸಾಗಲೇ ಇಲ್ಲ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.

ಮದಗಜ ಸಿನಿಮಾದ ಟೈಟಲ್ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆಶಿಕಾ ರಂಗನಾಥ್ ಮಾಧ್ಯಮದವರೊಂದಿಗೆ ಮಾತನಾಡಿದ್ರು, ಪುನೀತ್ ಸರ್ ಅಂದ್ರೆ ನನಗೆ ಮೊದಲಿನಿಂದಲೂ ತುಂಬಾ ಇಷ್ಟ. ಅವರ ಡ್ಯಾನ್ಸ್ ಅಂದ್ರೆ ನನಗೆ ಪ್ರಿಯವಾಗಿತ್ತು. ಅವರೂ ನನ್ನ ಡ್ಯಾನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರೊಂದಿಗೆ ನಟಿಸಬೇಕು ಅನ್ನೋದು ನನ್ನ ಕನಸಾಗಿತ್ತು.

ಹೊಂಬಾಳೆ ಫೀಲ್ಮ್ಸ್ ಬ್ಯಾನರ್ ನಡಿಯಲ್ಲಿ ಮೂಡಿ ಬರುತ್ತಿದ್ದ ದ್ವಿತ್ವ ಸಿನಿಮಾಕ್ಕೆ ಈಗಷ್ಟೇ ಸಹಿ ಮಾಡಿದ್ದೆ. ಅಪ್ಪು ಸರ್ ಜೊತೆ ನಟಿಸೋ ಕನಸು ಕಂಡಿದ್ದೆ. ಅವರನ್ನು ನೆನಪಿಸಿ ಕೊಂಡ್ರೆ ಬೇಸರವಾಗುತ್ತೆ ಎನ್ನುತ್ತಾ ಬಾವುಕರಾದ್ರು. ಖಂಡಿತವಾಗಿಯೂ ನಾವು ಪುನೀತ್ ಸರ್ ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಧೂಮಪಾನಿಯಾದ್ರಾ ಮಿಲ್ಕಿ ಬ್ಯೂಟಿ….! ವೈರಲ್ ಆಗ್ತಿದೆ ಆಶಿಕಾ ಸ್ಮೋಕಿಂಗ್ ಪೋಟೋ…!!
ಇದನ್ನೂ ಓದಿ : ಮದಗಜ ಮೂಲಕ ಅಬ್ಬರಿಸಿದ ಶ್ರೀಮುರುಳಿ : ಮೋಡಿ ಮಾಡಿದೆ ಬಸ್ರೂರು ಮ್ಯೂಸಿಕ್
( Actress Ashika Ranganath emotional talking about Puneeth Raj kumar)