ಸೋಮವಾರ, ಏಪ್ರಿಲ್ 28, 2025
HomeCinemaVikrant Rona movie :ಸುದೀಪ್ ಅಭಿಮಾನಿಗಳಿಗೆ‌ ಮತ್ತೊಮ್ಮೆ ನಿರಾಸೆ : ವಿಕ್ರಾಂತ್ ರೋಣ ರಿಲೀಸ್ ಮುಂದೂಡಿಕೆ

Vikrant Rona movie :ಸುದೀಪ್ ಅಭಿಮಾನಿಗಳಿಗೆ‌ ಮತ್ತೊಮ್ಮೆ ನಿರಾಸೆ : ವಿಕ್ರಾಂತ್ ರೋಣ ರಿಲೀಸ್ ಮುಂದೂಡಿಕೆ

- Advertisement -

ಕೊರೋನಾ ಎಲ್ಲ ರಂಗಗಳ ಜೀವಂತಿಕೆಯನ್ನೇ ಕಸಿದುಕೊಂಡಿದೆ. ಇದಕ್ಕೆ ಸಿನಿಮಾ ರಂಗವೂ ಹೊರತಲ್ಲ. ಕಳೆದ ಎರಡು ವರ್ಷಗಳಿಂದ ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಬಂದಿಲ್ಲ. ಹೊಸ ಹೊಸ ಸಿನಿಮಾಗಳ ಘೋಷಣೆಗಷ್ಟೇ ಸೀಮಿತವಾಗಿದೆ. ಥಿಯೇಟರ್ ಮೇಲಿನ ನಿರ್ಬಂಧ ನಿರ್ಮಾಪಕರು ಹಾಗೂ ನಿರ್ದೇಶಕರ ಧೈರ್ಯವನ್ನೇ ಕಸಿದುಕೊಂಡಿದೆ. ಹೀಗಾಗಿ ಸಿನಿಪ್ರೇಮಿಗಳು ನಿರಾಸೆಗೊಂಡಿದ್ದಾರೆ. ಈಗ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ದೊಡ್ಡ ನಿರಾಸೆಯ ಸುದ್ದಿಯೊಂದು ಎದುರಾಗಿದ್ದು ಫೆ. 24 ರಂದು ತೆರೆಗೆ ಬರಬೇಕಿದ್ದ ವಿಕ್ರಾಂತ್ ರೋಣ (Vikrant Rona movie) ಸಿನಿಮಾ ರಿಲೀಸ್ ಮುಂದೂಡಿಕೆಯಾಗಿದೆ.

ಚಿತ್ರತಂಡ ಈ ವಿಚಾರವನ್ನು ಸ್ವತಃ ಟ್ವೀಟ್ ಮೂಲಕ ಖಚಿತಪಡಿಸಿದೆ.ಸಿನಿಮಾದ ನಿರ್ಮಾಪಕ ಜಾಕ್ ಮಂಜು ಸ್ವತಃ ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ‌ಕನಸನ್ನು ನಿಮ್ಮ ಮುಂದೇ ಫೆಬ್ರವರಿ 24 ರಂದು ತರಲು ನಾವು ಉತ್ಸುಕರಾಗಿದ್ದೇವು. ಆದರೆ ಪ್ರಸ್ತುತ ಕೋವಿಡ್ ನಿಯಮಗಳು ಹಾಗೂ ಪರಿಸ್ಥಿತಿ ಪ್ರಪಂಚಾದ್ಯಂತ ನಮ್ಮ ಸಿನಿಮಾವನ್ನು ತಲುಪಿಸಲು ಅನುಕೂಲಕರವಾಗಿಲ್ಲ.

ನಿಮ್ಮ‌ಪ್ರೀತಿ ಹಾಗೂ ತಾಳ್ಮೆಗೆ ನಮ್ಮ ನಮನ. ಅದಕ್ಕೆ ಪ್ರತಿಯಾಗಿ ನೀವು ಮನಸ್ಸಾರೆ ಸ್ವೀಕರಿಸುವ ಸಿನಿಮಾವನ್ನು ನಿಮ್ಮ ಮುಂದೇ ತರುತ್ತೇವೆ ಎಂಬ ನಂಬಿಕೆ ನಮಗಿದೆ. ಭಾರತದ ಮೊದಲ ಅಡ್ವೆಂಚರ್ಸ್ ಹೀರೋವನ್ನು ನಿಮಗೆ ಪರಿಚಯಿಸುವ ಹೊಸ ದಿನಾಂಕವನ್ನು ನಾವು ಶೀಘ್ರದಲ್ಲೇ ತಿಳಿಸುತ್ತೇವೆ ಎಂದು ಜಾಕ್ ಮಂಜು ಪ್ರಕಟಿಸಿದ್ದಾರೆ. ಬುರ್ಜಾ ಖಲಿಫಾದ ಮೇಲೆ ವಿಕ್ರಾಂತ್ ರೋಣ ಲೋಗೋ ರಿಲೀಸ್ ಮಾಡಿದ್ದ ಸಿನಿಮಾ ತಂಡ ಭರ್ಜರಿ ಸೆಟ್ ಹಾಕಿ ಶೂಟಿಂಗ್ ಮುಗಿಸಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಮುಗಿಸಿ ಸಿನಿಮಾ ರಿಲೀಸ್ ಸಜ್ಜಾಗಿದ್ದರೂ ಕೊರೋನಾ ಅಡ್ಡಿ ಉಂಟುಮಾಡುತ್ತಲೇ ಇದೆ.

ಈ ಸಿನಿಮಾದಲ್ಲಿ ಪ್ರಮುಖ ಆಕರ್ಷಣೆ ಶ್ರೀಲಂಕಾ ಬೆಡಗಿ ಜಾಕ್ವಲಿನ್ ಫರ್ನಾಂಡಿಸ್ ಐಟಂ ಸಾಂಗ್. ಹೀಗೆ ಸಾಕಷ್ಟು ಕಾರಣಕ್ಕೆ ಕುತೂಹಲ‌ ಮೂಡಿಸಿರುವ ಸಿನಿಮಾ ರಿಲೀಸ್ ಮತ್ತಷ್ಟು ವಿಳಂಬವಾಗಲಿದೆ. ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ಸಿನಿಮಾ ನಿರ್ದೇಶಿಸಿದ್ದು ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದಲ್ಲದೇ ನಿರೂಪ ಭಂಡಾರಿ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ.

ಈ ಸಿನಿಮಾವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲು ಸಿನಿಮಾತಂಡಕ್ಕೆ ಆಫರ್ ನೀಡಲಾಗಿತ್ತು. ಆದರೆ 100 ಕೋಟಿ ಆಫರ್ ನ್ನು ನಿರಾಕರಿಸಿದ ಚಿತ್ರತಂಡ ಥಿಯೇಟರ್ ನಲ್ಲೇ ಸಿನಿಮಾ ರಿಲೀಸ್ ಮಾಡಲು ನಿರ್ಧರಿಸಿದೆ. ಆದರೆ ಈಗ ಕೊರೋನಾ ಮತ್ತೊಮ್ಮೆ ಸಿನಿಮಾ ರಿಲೀಸ್ ಮೇಲೆ ಕರಿನೆರಳು ಬೀರಿದ್ದು, ಸಿನಿಪ್ರಿಯರ ಸುದೀಪ್ ಸಿನಿಮಾ ನೋಡೋ ಕನಸು ಸದ್ಯಕ್ಕೆ ಕನಸಾಗಿಯೇ ಉಳಿಯುವಂತಾಗಿದೆ.

ಇದನ್ನೂ ಓದಿ : ಬರ್ತಡೇಗೆ ಬರ್ತಾರೆ ಪುನೀತ್ ರಾಜ್ ಕುಮಾರ್ : ಜೇಮ್ಸ್ ರಿಲೀಸ್ ಗೆ ಕೊನೆಗೂ ಫಿಕ್ಸ್ ಅಯ್ತು ಮುಹೂರ್ತ

ಇದನ್ನೂ ಓದಿ : ಪುಷ್ಪಾ ಸಿನಿಮಾ ಸಕ್ಸಸ್‌ ಬೆನ್ನಲ್ಲೇ ಜಾಹೀರಾತಲ್ಲಿ ಬ್ಯುಸಿಯಾದ ಸಮಂತಾ

( Bad news for Sudeep fans, Vikrant Rona movie release date postpone)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular