ಭಾನುವಾರ, ಏಪ್ರಿಲ್ 27, 2025
HomeCinemaDhruvasarja: ಮಾರ್ಟಿನ್ ಅವತಾರದಲ್ಲಿ ಆಕ್ಷ್ಯನ್ ಪ್ರಿನ್ಸ್….! ಮನಗೆಲ್ಲುವ ಮಾಸ್ ಟೈಟಲ್ ಜೊತೆ ಬಂದ ಧ್ರುವ್ ಸರ್ಜಾ….!!

Dhruvasarja: ಮಾರ್ಟಿನ್ ಅವತಾರದಲ್ಲಿ ಆಕ್ಷ್ಯನ್ ಪ್ರಿನ್ಸ್….! ಮನಗೆಲ್ಲುವ ಮಾಸ್ ಟೈಟಲ್ ಜೊತೆ ಬಂದ ಧ್ರುವ್ ಸರ್ಜಾ….!!

- Advertisement -

ಚೊಚ್ಚಲ ಸಿನಿಮಾದಲ್ಲೇ ಬ್ರೇಕ್ ಕೊಟ್ಟ ನಿರ್ದೇಶಕ ಎ.ಪಿ.ಅರ್ಜುನ್ ಜೊತೆ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ ಧ್ರುವ್ ಸರ್ಜಾ. ಪಕ್ಕಾ ಎಂಟರಟೈನ್ಮೆಂಟ್ ಮಾಸ್ ಸಿನಿಮಾದ ಟೈಟಲ್ ಈಗ ಅನಾವರಣಗೊಂಡಿದ್ದು, ಧ್ರುವ್ ಸರ್ಜಾರನ್ನು ಮಾರ್ಟಿನ್ ಅವತಾರದಲ್ಲಿ ನೋಡೋಕೆ ಅಭಿಮಾನಿಗಳು ಕಾಯ್ತಿದ್ದಾರೆ.

ದುಬಾರಿ ಸಿನಿಮಾ ಪಕ್ಕಕ್ಕಿಟ್ಟು ಎ.ಪಿ.ಅರ್ಜುನ್ ಜೊತೆ ಈಗಾಗಲೇ ಹೆಸರಿಡದ ಚಿತ್ರದ ಶೂಟಿಂಗ್ ನಲ್ಲಿ ತೊಡಗಿದ್ದಾರೆ ಧ್ರುವ್ ಸರ್ಜಾ. ಈ ಸಿನಿಮಾಗೆ ಅಂತಾರಾಷ್ಟ್ರೀಯ ಖ್ಯಾತಿಯ ಫೈಟ್ ಮಾಸ್ಟರ್ಸ್ ರಾಮಲಕ್ಷ್ಮಣ ಫೈಟ್ ಪಾಠ ಹೇಳ್ತಿರೋದು ಸಹಜವಾಗಿಯೇ ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ ಸಿನಿಮಾದ ನೀರಿಕ್ಷೆ ಹೆಚ್ಚಿಸಿತ್ತು.

ಇದೀಗ ಸಿನಿಮಾಗೊಂದು ಮಾಸ್ ಟೈಟಲ್ ಜೊತೆ ಚಿತ್ರತಂಡ ಅಭಿಮಾನಿಗಳ ಮನಗೆಲ್ಲಲು ಸಜ್ಜಾಗಿದೆ. ಧ್ರುವ್ ಹಾಗೂ ಎ.ಪಿ.ಅರ್ಜುನ್ ಕಾಮಿನೇಶನ್ ಸಿನಿಮಾಗೆ ಮಾರ್ಟಿನ್ ಎಂದು ಹೆಸರಿಡಲಾಗಿದೆ. ಚಿತ್ರತಂಡದಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ಧ್ರುವ್ ಸರ್ಜಾ ಅಭಿಯನದ ನಂದಕಿಶೋರ್ ನಿರ್ದೇಶನದ ದುಬಾರಿಗೆ ಸಿನಿಮಾಗೆ ಬಂಡವಾಳ ಹೂಡಬೇಕಿದ್ದ ಉದಯ್ ಮೆಹ್ತಾ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಇನ್ನು ಚಿತ್ರದ ನಾಯಕಿಯಾರು ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

RELATED ARTICLES

Most Popular