ಬೆಂಗಳೂರು: kn mohan kumar passes away : ಕಿರುತೆರೆ ಹಾಗೂ ಚಲನಚಿತ್ರ ಹಿರಿಯ ನಿರ್ದೇಶಕ ಕೆ.ಎನ್ ಮೋಹನ್ಕುಮಾರ್ ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. 56 ವರ್ಷ ಪ್ರಾಯದವರಾಗಿದ್ದ ಮೋಹನ್ಕುಮಾರ್ ಬೆಂಗಳೂರಿನ ಎನ್.ಆರ್ ಕಾಲೋನಿಯ ರಾಮಲೀಲಾ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದರು. ನಿನ್ನೆ ಸ್ನಾನದ ಕೋಣೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ತಕ್ಷಣವೇ ಅಸ್ವಸ್ಥರಾಗಿದ್ದ ಮೋಹನ್ಕುಮಾರ್ರನ್ನು ಸಮೀಪದ ರಂಗ ದೊರೈ ಆಸ್ಪತ್ರೆಗೆ ದಾಖಲು ಮಾಡಬೇಕೆಂದು ಕುಟುಂಬಸ್ಥರು ಕರೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಮಾರ್ಗ ಮಧ್ಯದಲ್ಲಿಯೇ ಅವರು ನಿಧನರಾಗಿದ್ದಾರೆ.
ನಿರ್ದೇಶಕ ಮೋಹನ್ಕುಮಾರ್ರ ಅಂತಿಮ ದರ್ಶನಕ್ಕೆ ಜಯನಗರ ಮೂರನೇ ಬ್ಲಾಕ್ ಪೂರ್ವ 8ನೇ ಮುಖ್ಯರಸ್ತೆಯಲ್ಲಿರುವ ಅವರ ನಿವಾಸದಲ್ಲಿಯೇ ವ್ಯವಸ್ಥೆ ಮಾಡಲಾಗಿದೆ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಆನೇಕಲ್ ತಾಲೂಕಿನ ಸಮಂದೂರಿನಲ್ಲಿ ಮೋಹನ್ಕುಮಾರ್ರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ನಿರ್ದೇಶಕ ಮೋಹನ್ಕುಮಾರ್ ಖ್ಯಾತ ನಿರೂಪಕಿ ಹಾಗೂ ನಟಿ ವತ್ಸಲಾ ಮೋಹನ್ರ ಪತಿಯಾಗಿದ್ದಾರೆ. ಕೇವಲ ಸಿನಿಮಾ , ಕಿರುತೆರೆ ಮಾತ್ರವಲ್ಲದೇ ನಾಟಕಗಳಲ್ಲಿಯೂ ಮೋಹನ್ ಕುಮಾರ್ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ತಾವು ನಿರ್ದೇಶಿಸಿದ ಬೊಂಬೆಯಾಟ ಸಿನಿಮಾಗೆ ಮೋಹನ್ ಕುಮಾರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಮೃತ ಮೋಹನ್ ಕುಮಾರ್ ಕುಟುಂಬಸ್ಥರು, ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿರ್ದೇಶಕ ಮೋಹನ್ ಕುಮಾರ್ ನಿಧನಕ್ಕೆ ಚಂದನವನ ಕಂಬನಿ ಮಿಡಿದಿದೆ.
ಇದನ್ನು ಓದಿ : Bus Lorry Accident : ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ : ಬಸ್ -ಲಾರಿ ಢಿಕ್ಕಿ, 9 ಸಾವು, 24 ಮಂದಿಗೆ ಗಾಯ
ಇದನ್ನೂ ಓದಿ : Harshal Patel injured : ಆರ್‌ಸಿಬಿ ತಂಡಕ್ಕೆ ಬಿಗ್ ಶಾಕ್ : ಖ್ಯಾತ ಬೌಲರ್ ಹರ್ಷಲ್ ಪಟೇಲ್‌ಗೆ ಗಾಯ
sandalwood director kn mohan kumar passes away