ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣದ ಆರೋಪದಲ್ಲಿ ಸಿಸಿಬಿ ವಶದಲ್ಲಿರುವ ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಅವರ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಅಲ್ಲದೇ ಇಬ್ಬರು ನಟಿಯರ ಜಾಮೀನು ಅರ್ಜಿ ಕೂಡ ಇಂದೇ ವಿಚಾರಣೆಗೆ ಬರಲಿದೆ.

ಸಿಸಿಬಿ ವಶದಲ್ಲಿರುವ ರಾಗಿಣಿ ಹಾಗೂ ಸಂಜನಾರನ್ನು ಕಳೆದೊಂದು ವಾರಗಳಿಂದಲೂ ವಿಚಾರಣೆ ನಡೆಸಿರುವ ಸಿಸಿಬಿ ಪೊಲೀಸರು ಇಂದು ನಟಿ ಮಣಿಯರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಆದರೆ ಮತ್ತೆ ಪೊಲೀಸ್ ಕಸ್ಟಡಿಗೆ ಕೇಳುವುದು ಬಹುತೇಕ ಡೌಟು.

ಹೀಗಾಗಿ ರಾಗಿಣಿ ಹಾಗೂ ಸಂಜನಾ ಜೈಲು ಸೇರುವುದು ಪಕ್ಕಾ. ಇನ್ನೊಂದೆಡೆ ನಟಿಯರ ಜಾಮೀನು ಅರ್ಜಿಯ ವಿಚಾರಣೆಯನ್ನು ಕೂಡ ನ್ಯಾಯಾಲಯ ಇಂದೇ ಕೈಗೆತ್ತಿಕೊಳ್ಳಲಿದೆ. ಆದರೆ ಪ್ರಕರಣದಲ್ಲಿ ನಟಿಯರಿಗೆ ಜಾಮೀನು ಸಿಗದೆ ಹೋದ್ರೆ ಪರಪ್ಪನ ಅಗ್ರಹಾರ ಜೈಲು ಸೇರೋದು ಪಕ್ಕಾ.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಆರೋಪಿಗಳಾಗಿರುವ ರಾಹುಲ್, ವಿರೇನ್ ಖನ್ನಾ, ರವಿಶಂಕರ್ ಹಾಗೂ ಲೂಯಿ ಪೆಪ್ಪರ್ ಕಸ್ಟಡಿ ಅವಧಿ ಮುಕ್ತಾಯವಾಗಲಿದ್ದು, ಅವರನ್ನೂ ಕೂಡ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.