ಮಂಗಳವಾರ, ಏಪ್ರಿಲ್ 29, 2025
HomeCinemaಸಿಂಹಾದ್ರಿಯ ಸಿಂಹ ಖ್ಯಾತಿಯ ಚಂದನವನದ ಹಿರಿಯ ನಿರ್ಮಾಪಕ ಬಿ. ವಿಜಯ್ ಕುಮಾರ್ ವಿಧಿವಶ

ಸಿಂಹಾದ್ರಿಯ ಸಿಂಹ ಖ್ಯಾತಿಯ ಚಂದನವನದ ಹಿರಿಯ ನಿರ್ಮಾಪಕ ಬಿ. ವಿಜಯ್ ಕುಮಾರ್ ವಿಧಿವಶ

- Advertisement -

ಬೆಂಗಳೂರು : ಸಿಂಹಾದ್ರಿಯ ಸಿಂಹ ಖ್ಯಾತಿಯ ಕನ್ನಡಚಿತ್ರರಂಗದ ಹಿರಿಯ ನಿರ್ಮಾಪಕ ಬಿ ವಿಜಯ್‌ ಕುಮಾರ್‌ ರವರಿಗೆ ಆದಿತ್ಯವಾರ ರಾತ್ರಿ 9.20ಕ್ಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಹೃದಯಾಘಾತ ಸಂಭವಿಸಿದ ತಕ್ಷಣ ಅವರನ್ನು ಸಾಗರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ಕರೆದೊಯ್ಯವ ಅಷ್ಟರಲ್ಲಿ ಅವರು ಉಸಿರಾಟವನ್ನು ನಿಲ್ಲಿಸಿದ್ದರು. ಕನ್ನಡ ಚಿತ್ರರಂಗಕ್ಕೆ ಸಾಲು ಸಾಲು ಹಿಟ್‌ ಸಿನಿಮಾವನ್ನು ನೀಡಿದ ಬಿ. ವಿಜಯ್ ಕುಮಾರ್ ರವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ವಿಜಯ್​​ಕುಮಾರ್ ಅವರು ಸಿಂಹಾದ್ರಿಯ ಸಿಂಹ, ಲಯನ್ ಜಗಪತಿ ರಾವ್, ಮೌನಗೀತೆ, ಜಗದೇಕ ವೀರ, ಸ್ವಚ್ಛ ಭಾರತ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದವರು.

ಅಲ್ಲದೇ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಹಾಗೂ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷರಾಗಿಯೂ ಬಿ ವಿಜಯ್‌ ಕುಮಾರ್ ಸೇವೆ ಸಲ್ಲಿಸಿದ್ದರು. ಸೋಮವಾರ ಬೆಳಗ್ಗೆ ಜಯನಗರದಲ್ಲಿ ಬಿ ವಿಜಯ್‌ ಕುಮಾರ್‌ ರವರ ಅಂತ್ಯಕ್ರಿಯೆ ಮಾಡುವುದಾಗಿ ಅವರ ಪುತ್ರ ಪವನ್ ತಿಳಿಸಿದ್ದಾರೆ.

ಇದನ್ನೂ ಓದಿ : ಲವ್​ ಮಾಕ್ಟೆಲ್ 2 : ತೆರೆಗೆ ಬರಲು ರೆಡಿಯಾಯ್ತು ಕೃಷ್ಣ ಮಿಲನಾ ಮತ್ತೊಂದು ಸಿನಿಮಾ

ಇದನ್ನೂ ಓದಿ : ನನ್ನ ಬೆಳೆಸಿರೋ ಜನ ನನ್ನ ನಂಬ್ತಾರೆ : ಸರಿ ತಪ್ಪುಗಳ ಲೆಕ್ಕ ಆ ಭಗವಂತನ ಬಳಿಯಿದೆ ಎಂದ ಡಿಂಪಲ್‌ ಕ್ವೀನ್ ರಚಿತಾ ರಾಮ್‌

RELATED ARTICLES

Most Popular