ಸೋಮವಾರ, ಏಪ್ರಿಲ್ 28, 2025
HomeCinemaಪವರ್ ಸ್ಟಾರ್ ಗೆ ಫಿಲ್ಮ್ ಚೆಂಬರ್ ನಮನ: ನ.16 ರಂದು ಅದ್ದೂರಿ ಕಾರ್ಯಕ್ರಮ

ಪವರ್ ಸ್ಟಾರ್ ಗೆ ಫಿಲ್ಮ್ ಚೆಂಬರ್ ನಮನ: ನ.16 ರಂದು ಅದ್ದೂರಿ ಕಾರ್ಯಕ್ರಮ

- Advertisement -

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದಿಂದ ಚಿತ್ರರಂಗಕ್ಕೆ ಶೋಕ ಸಾಗರದಲ್ಲಿ ಮುಳುಗಿದೆ. ಈ ನೋವಿನ ನಡುವೆಯೂ ಚಲನಚಿತ್ರ ವಾಣಿಜ್ಯ ಮಂಡಳಿ ಬಾಲನಟನಿಂದ ಸ್ಟಾರ್ ಸ್ಥಾನಕ್ಕೇರಿದ ಪುನೀತ್ ಗೆ ಗೌರವ ಸಲ್ಲಿಸಲು ಅದ್ದೂರಿ ಕಾರ್ಯಕ್ರಮ ಆಯೋಜನೆಗೆ ಸಿದ್ಧವಾಗಿದೆ. ನ.16 ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಪುನೀತ್ ನಮನ ಕಾರ್ಯಕ್ರಮ ಆಯೋಜಿಸಿದೆ.

ಗೀತ ನಮನ, ಗಾಯನನಮನ ಸೇರಿದಂತೆ ವಿವಿಧ ರೀತಿಯಲ್ಲಿ ಪುನೀತ್ ರಾಜ್ ಕುಮಾರ್ ಗೆ ಗೌರವ ಸಲ್ಲಿಸಲಾಗುವುದು ಎಂದು ಫಿಲ್ಮ್ ಚೆಂಬರ್ ಅಧ್ಯಕ್ಷರು ಮಾಹಿತಿ‌ ನೀಡಿದ್ದಾರೆ. ಪುನೀತ್ ನಮನ ಕಾರ್ಯಕ್ರಮದಲ್ಲಿ ರಾಜಕೀಯ ಕ್ಷೇತ್ರದ ಗಣ್ಯರು, ದಕ್ಷಿಣ ಭಾರತದ ಚಿತ್ರತಂಡದ ಸ್ಟಾರ್ ಗಳಾದ ರಜನಿಕಾಂತ್, ಕಮಲ್ ಹಾಸನ್, ವಿಜಯ್, ಧನುಷ್ ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿದೆ.

ಗಾಯತ್ರಿ ವಿಹಾರದ ನಾಲ್ಕನೇ ಗೇಟ್ ನಿಂದ ಎಲ್ಲರಿಗೂ ಪ್ರವೇಶಾವಕಾಶವಿದ್ದು, 2000 ಜನರು ದೀಪ ಬೆಳಗಿ ಪುನೀತ್ ಗೆ ದೀಪನಮನ ಸಲ್ಲಿಸಲಿದ್ದಾರೆ. ಈ ವಿಶೇಷ ಸಂದರ್ಭಕ್ಕಾಗಿ ಸಾಹಿತ್ಯಕಾರ ನಾಗೇಂದ್ರ್ ಪ್ರಸಾದ್ ವಿಶೇಷವಾದ ೫ ನಿಮಿಷದ ಹಾಡೊಂದನ್ನು ಬರೆದಿದ್ದಾರೆ. ಅಷ್ಟೇ ಅಲ್ಲ ಪುನೀತ್ ಜೀವನಗಾಥೆಯೂ ನುಡಿನಮನದಲ್ಲಿ ಪ್ರದರ್ಶಿತಗೊಳ್ಳಲಿದೆ.

ಒಟ್ಟಿನಲ್ಲಿ ಬಾಲ್ಯದಿಂದಲೂ ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ ನಟ ಪುನೀತ್ ರಾಜ್ ಕುಮಾರ್ ಸಾವು ಚಿತ್ರರಂಗವನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಹೀಗಾಗಿ ಎಲ್ಲ ಗಣ್ಯರು ಪುನೀತ್ ಗೆ ಕೊನೆಯ ನಮನ ಸಲ್ಲಿಸಲು ನಿರ್ಧರಿಸಿದ್ದು ಅದ್ದೂರಿ ಕಾರ್ಯಕ್ರಮದ ಮೂಲಕ ಕನ್ನಡದ ಪವರ್ ಸ್ಟಾರ್ ಗೆ ಕನ್ನಡಿಗರ ನಮನ ಸಲ್ಲಲಿದೆ.

ಇದನ್ನೂ ಓದಿ : ಪುನೀತ್ ಚಿಕಿತ್ಸೆಯಲ್ಲಿ ಲೋಪ ಆರೋಪ: ಡಾ.ರಮಣರಾವ್ ಗೆ ಭದ್ರತೆ ಒದಗಿಸಲು ಫನಾ ಆಗ್ರಹ

ಇದನ್ನೂ ಓದಿ : ಅಪ್ಪು ಪ್ರತಿಮೆ ಸ್ಥಾಪನೆಗೆ ವಿಘ್ನ: ಪವರ್ ಸ್ಟಾರ್ ಅಭಿಮಾನಿಗಳಿಗೆ ಬಿಬಿಎಂಪಿ ಶಾಕ್

(Film Chamber pays tribute to Power Star Puneet Raj Kumar)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular