ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಉಪ್ಪಿ ಬರ್ತಡೇಗೆ ಕಬ್ಜ ಚಿತ್ರತಂಡ ಸ್ಪೆಶಲ್ ಗಿಫ್ಟ್ ನೀಡಲು ಸಿದ್ಧವಾಗಿದೆ.

ಸೆ.18 ರಂದು ಉಪ್ಪಿ ಬರ್ತಡೇ ಅಂಗವಾಗಿ ಉಪೇಂದ್ರ ಅಭಿನಯದ ಬಹುನೀರಿಕ್ಷಿತ ಚಿತ್ರ ಕಬ್ಜದ ಮೋಶನ್ ಪೋಸ್ಟರ್ ರಿಲೀಸ್ ಆಗಲಿದ್ದು. ಇದು ಉಪ್ಪಿ ಬರ್ತಡೇಗೆ ಚಿತ್ರತಂಡದ ಗಿಫ್ಟ್ ಎಂದು ನಿರ್ದೇಶಕ ಆರ್.ಚಂದ್ರು ಹೇಳಿದ್ದಾರೆ.

ಕಬ್ಜ ಸಿನಿಮಾದಲ್ಲಿ ಉಪೇಂದ್ರ ರೆಟ್ರೋ ಲುಕ್ ನಲ್ಲಿ ಗ್ಯಾಂಗ್ ಸ್ಟರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ನೀರಿಕ್ಷೆ ಮೂಡಿಸಿರುವ ಈ ಸಿನಿಮಾದಲ್ಲಿ ನಟ ಸುದೀಪ್ ಕೂಡ ಸ್ಪೆಶಲ್ ರೋಲ್ ನಲ್ಲಿ ನಟಿಸಿದ್ದಾರೆ.

ಈ ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರೋ ಸಾಧ್ಯತೆಗಳಿದ್ದು ರಿಲೀಸ್ ಆಗೋ ಪೋಸ್ಟರ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಚಿತ್ರದ ಮೋಶನ್ ಪೋಸ್ಟರ್ ರಿಲೀಸ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕ ಆರ್. ಚಂದ್ರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಸಜ್ಜಾದ ಸ್ಯಾಂಡಲ್ ವುಡ್….! ಕಬ್ಜಾ ಜೊತೆ ಸಿದ್ಧವಾಗುತ್ತಿದ್ದಾರೆ ಚಂದ್ರು…!!
ಇದನ್ನೂ ಓದಿ : ಕಬ್ಜನಿಗೆ ಕಿಚ್ಚ್ ನ ಸಾಥ್…..! 7 ಭಾಷೆಯಲ್ಲಿ ಸದ್ದು ಮಾಡಲಿದೆ ರಿಯಲ್ ಸ್ಟಾರ್ ಮೂವಿ…!!
ಇದನ್ನೂ ಓದಿ : ಉಪ್ಪಿ ಫ್ಯಾನ್ಸ್ ಗೆ ನಿರಾಸೆ: ಎಲ್ಲಿದ್ದೀರೋ ಅಲ್ಲಿಂದಲೇ ಹಾರೈಸಿ ಎಂದ್ರು ರಿಯಲ್ ಸ್ಟಾರ್
(Gift for Real Star Upendra Birthday: Release kabza Kannada movie Motion Poster )