ಭಾನುವಾರ, ಏಪ್ರಿಲ್ 27, 2025
HomeCinemaಸಾವಿನಲ್ಲೂ ಸಾರ್ಥಕತೆ ಮೆರೆದ ಅಭಿನಯ ಶಾರದೆ….! ನೇತ್ರದಾನದಿಂದ ಅಂಧರ ಬಾಳಿಗೆ ಬೆಳಕಾದ ಜಯಂತಿ…!!

ಸಾವಿನಲ್ಲೂ ಸಾರ್ಥಕತೆ ಮೆರೆದ ಅಭಿನಯ ಶಾರದೆ….! ನೇತ್ರದಾನದಿಂದ ಅಂಧರ ಬಾಳಿಗೆ ಬೆಳಕಾದ ಜಯಂತಿ…!!

- Advertisement -

ಕನ್ನಡ ಚಿತ್ರರಂಗದ ಅಭಿನಯ ಶಾರದೆ ಖ್ಯಾತಿಯ ನಟಿ ಜಯಂತಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ನಿದ್ರೆಯಲ್ಲೇ ಚಿರನಿದ್ರೆಗೆ ಜಾರಿದ ಜಯಂತಿಯವರ ಆಸೆಯಂತೆ ಅವರ ಕಣ್ಣುಗಳನ್ನು ಡಾ.ರಾಜ್ ಐ ಬ್ಯಾಂಕ್ ಗೆ ಡೊನೇಟ್ ಮಾಡಲಾಗಿದೆ.

ಕತ್ತಲೆಯಲ್ಲಿ ಬದುಕು ನಡೆಸುವ ಅಂಧರಿಗೆ ನೆರವಾಗುವುದು ಪುಣ್ಯದ ಕೆಲಸ. ಹೀಗಾಗಿ ಮರಣಾನಂತರ ನೇತ್ರದಾನ ಮಾಡಿ ಎಂದು ಡಾ.ರಾಜ್ ಕುಮಾರ್ ಕರೆ ನೀಡಿದ್ದರು. ಅಷ್ಟೇ ಅಲ್ಲ ತಾವು ಕೂಡ ನೇತ್ರದಾನ ಮಾಡಿದ್ದರು.

ಡಾ.ರಾಜ್ ಜೊತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದ ಜಯಂತಿ ಕೂಡ ಡಾ.ರಾಜ್ ಆದರ್ಶವನ್ನೇ ಪಾಲಿಸಿದ್ದು, ತಮ್ಮ ನೇತ್ರದಾನ ಮಾಡಿದ್ದಾರೆ. ನಾರಾಯಣ ನೇತ್ರಾಲಯದಲ್ಲಿರುವ ಡಾ.ರಾಜ್ ಕುಮಾರ್ ಐ ಬ್ಯಾಂಕ್ ಗೆ ದಾನ ಮಾಡಲಾಗಿದೆ.

ವಯೋಸಹಜ ಕಾಯಿಲೆ ಹಾಗೂ ಅಸ್ತಮಾದಿಂದ ಬಳಲುತ್ತಿದ್ದ ಜಯಂತಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಸದಾ ಕೃತಕ ಆಮ್ಲಜನಕದ ಸಹಾಯದಿಂದಲೇ ಜಯಂತಿಯವರು ಉಸಿರಾಡುತ್ತಿದ್ದರು. ಜಯಂತಿಯವರ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬಳಿಕ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಜಯಂತಿಯವರ ಅಂತ್ಯಸಂಸ್ಕಾರ ನಡೆಯಿತು. ಪುತ್ರ ಕೃಷ್ಣಕುಮಾರ್ ಜಯಂತಿಯವರ ಅಂತಿಮ ವಿಧಿವಿಧಾನ ನಡೆಸಿದರು.

RELATED ARTICLES

Most Popular