ಸೋಮವಾರ, ಏಪ್ರಿಲ್ 28, 2025
HomeCinemaದೊಡ್ಮನೆ ಕುಡಿ ಯುವರಾಜ್‌ಕುಮಾರ್‌ಗೆ ಹುಟ್ಟು ಹಬ್ಬದ ಸಂಭ್ರಮ

ದೊಡ್ಮನೆ ಕುಡಿ ಯುವರಾಜ್‌ಕುಮಾರ್‌ಗೆ ಹುಟ್ಟು ಹಬ್ಬದ ಸಂಭ್ರಮ

- Advertisement -

ದೊಡ್ಮನೆ ಕುಡಿ, ಜೂನಿಯರ್‌ ಪವರ್‌ಸ್ಟಾರ್‌ ನಟ ಯುವರಾಜ್‌ಕುಮಾರ್‌ಗೆ (Yuvrajkumar’s birthday) ಇಂದು (ಏಪ್ರಿಲ್‌ 23) ಹುಟ್ಟುಹಬ್ಬ ಸಂಭ್ರಮ. ಡಾ. ರಾಜ್‌ಕುಮಾರ್‌ ಅವರ ಹಿರಿಯ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್‌ ಅವರ ಎರಡನೇ ಮಗ ಯುವ ರಾಜ್‌ಕುಮಾರ್‌. ಈಗಾಗಲೇ ಯುವ ರಾಜ್‌ಕುಮಾರ್ ಅವರು ಸ್ಯಾಂಡಲ್‌ವುಡ್‌ನಲ್ಲಿ ಕೆಲಸ ಮಾಡುವ ಭಾರತೀಯ ನಟ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ನಿರ್ದೇಶಕ ಸಂತೋಷ ಆನಂದ ರಾಮ್‌ ಅವರ “ಯುವ” ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ನಟ ಯುವ ರಾಜ್‌ಕುಮಾರ್‌ಗೆ ಅಭಿಮಾನಿಗಳು, ಕುಟುಂಬಸ್ಥರು, ಸ್ನೇಹಿತರು, ಸಿನಿಗಣ್ಯರು ಸೇರಿದಂತೆ ಅನೇಕರು ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಕೋರಿದ್ದಾರೆ.

ನಟ ಯುವ ರಾಜ್‌ಕುಮಾರ್‌ 2016 ರಲ್ಲಿ ರನ್ ಆಂಟೋನಿ ಎನ್ನುವ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಅಡಿಯಲ್ಲಿ ಮೂಡಿ ಬರುತ್ತಿರುವ “ಯುವ” ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೇ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ತಮ್ಮ ಟ್ವೀಟರ್‌ನಲ್ಲಿ,”ಯುವ ಚಿತ್ರೀಕರಣ ಆರಂಭ ಲೈಟ್ಸ್‌, ಕ್ಯಾಮರಾ, ಆಕ್ಷನ್‌, ಯುವ ರೆಡಿನಾ ” ಎನ್ನುವ ಶೀರ್ಷಿಕೆಯೊಂದಿಗೆ ಸಿನಿಮಾ ಶೂಟಿಂಗ್‌ನ್ನು ಪ್ರಾರಂಭಿಸಿದ್ದಾರೆ. ಅದರೊಂದಿಗೆ ಶೂಟಿಂಗ್‌ ಸ್ಥಳದ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

ಇನ್ನು ಭಾರತ ಸಿನಿರಂಗದಲ್ಲೇ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಯುವರಾಜ್‌ಕುಮಾರ್‌ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಕಳೆದ ಕೆಲವು ತಿಂಗಳ ಹಿದೆಯಷ್ಟೇ ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆಯವರು ನಟ ಯುವರಾಜ್‌ಕುಮಾರ್‌ ಅಭಿನಯದ ಚೊಚ್ಚಲ ಸಿನಿಮಾದ ಟೈಟಲ್ ಅನ್ನು ವಿಶೇಷವಾಗಿ ಟೀಸರ್ ಮೂಲಕ ಘೋಷಿಸಿದ್ದಾರೆ. ಹೊಂಬಾಳೆ ಸಂಸ್ಥೆ ಅವರು ತಮ್ಮ ಟ್ವೀಟ್‌ನಲ್ಲಿ, “ಯುವ ಪರ್ವ ಆರಂಭ, 𝐓𝐇𝐄 𝐑𝐀𝐆𝐄 𝐁𝐄𝐆𝐈𝐍𝐒” ಎಂದು ಟೈಟಲ್‌ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಕಿರುತೆರೆಗೆ ಮತ್ತೆ ಮೋಡಿ ಮಾಡಲಿದೆ ಛೋಟಾ ಚಾಂಪಿಯನ್‌

ಇನ್ನುಳಿದಂತೆ ದೊಡ್ಮನೆ ಕುಡಿ ಯುವರಾಜ್‌ಕುಮಾರ್‌ ನಟನೆಯ ಚೊಚ್ಚಲ ಸಿನಿಮಾಕ್ಕೆ ನಾಯಕಿ ಯಾರು ಎನ್ನುವ ಕುತೂಹಲ ಮೊದಲಿನಿಂದಲೂ ಇತ್ತು. ಮೊದಲಿಗೆ ಈ ಸಿನಿಮಾಕ್ಕೆ ಮಲಯಾಳಂನ ಚೆಲುವೆ ಕಲ್ಯಾಣಿ ಪ್ರಿಯದರ್ಶನ್ ನಾಯಕಿಯಾಗಲಿದ್ದಾರೆ ಎಂಬ ಗುಸು ಗುಸು ಹರಡಿತ್ತು, ಇತ್ತೀಚೆಗಷ್ಟೆ ರುಕ್ಮಿಣಿ ವಸಂತ್ ಸಿನಿಮಾಕ್ಕೆ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿತ್ತು. ಆದರೆ ಈ ಎರಡೂ ಸಹ ಗಾಳಿಸುದ್ದಿಯಾಗಿದ್ದು, ಸಿನಿತಂಡ ತಳ್ಳಿ ಹಾಕಿದ್ದು,ಕಾಂತಾರ ಸಿನಿಮಾದ ನಾಯಕಿ ಸಪ್ತಮಿ ಗೌಡ ಅವರನ್ನು ಯುವನಿಗೆ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಸಿನಿತಂಡ ತಿಳಿಸಿದೆ.

Sandalwood Junior Power star Yuvrajkumar’s birthday celebration

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular