ಸೋಮವಾರ, ಏಪ್ರಿಲ್ 28, 2025
HomeCinemaAjay Rao: ಫೈಟರ್ ವಿವೇಕ ಸಾವು ಪ್ರಕರಣ: ನೀರಿಕ್ಷಣಾ ಜಾಮೀನಿನ ಮೊರೆ ಹೋದ ನಟ ಅಜಯರಾವ್.

Ajay Rao: ಫೈಟರ್ ವಿವೇಕ ಸಾವು ಪ್ರಕರಣ: ನೀರಿಕ್ಷಣಾ ಜಾಮೀನಿನ ಮೊರೆ ಹೋದ ನಟ ಅಜಯರಾವ್.

- Advertisement -

ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ನಡೆದ ಫೈಟರ್ ವಿವೇಕ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಜಯ್ ರಾವ್ ಜಾಮೀನಿನ‌ಮೊರೆ ಹೋಗಿದ್ದಾರೆ. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವ ಮುನ್ನವೇ ನಟ ನ್ಯಾಯಲಯದ ‌ಮೆಟ್ಟಿಲೇರಿದ್ದಾರೆ.

ಫೈಟರ್ ವಿವೇಕ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಗಸ್ಟ್ ೨೬ ರಂದು ಅಜಯ್ ರಾವ್ ಬಿಡದಿ ಪೊಲೀಸರ ಮುಂದೇ ಹಾಜರಾಗಲಿದ್ದಾರೆ. ಆದರೆ ಪೊಲೀಸರ ವಿಚಾರಣೆಗೂ ಮುನ್ನವೇ ಅಜಯ್ ರಾವ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

ಅಜಯ್ ರಾವ್ ಗೆ ಬಂಧನ ಭೀತಿ ಎದುರಾಗಿರೋದರಿಂದ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ರಾಮನಗರದ ಮೂರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಅಜಯ್ ರಾವ್ ಬೇಲ್ ಅರ್ಜಿ ಸಲ್ಲಿಸಿದ್ದಾರೆ.

ಅಗಸ್ಟ್ ೯ ರಂದು ಬಿಡದಿ ಸನಿಹದ ಜೋಗಯ್ಯನ ಪಾಳ್ಯದಲ್ಲಿ ಶೂಟಿಂಗ್ ವೇಳೆ ಅವಘಡ ನಡೆದಿದ್ದು, ಫೈಟರ್ ವಿವೇಕ್ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದ್ದರು. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಬಂಧಿಸಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಚಿತಾರಾಮ್ ಕೂಡ ಮಂಗಳವಾರ ಬಿಡದಿ ಠಾಣೆಗೆ ಹಾಜರಾಗಿದ್ದು ವಿಚಾರಣೆ ಎದುರಿಸಿದ್ದಾರೆ.

RELATED ARTICLES

Most Popular