ಸಿನಿಮಾದಲ್ಲಿ ನಾಯಕಿಯರಿಗೇ ಅಂತಹ ಕಷ್ಟವೇನೂ ಇರೋದಿಲ್ಲ.ಸುಂದರವಾದ ಮೇಕಪ್, ಕಾಸ್ಟ್ಯೂಮ್ ಹಾಕಿಕೊಂಡು ಕುಣಿದು,ನಲಿದ್ರಾಯ್ತು ಅಂತ ಮಾತನಾಡಿ ಕೊಳ್ಳೋರಿಗೆ ನಟಿ ಆಶಿಕಾ ರಂಗನಾಥ್ Madhagaja actress Ashika Ranganath ) ಸಖತ್ ತಿರುಗೇಟು ನೀಡಿದ್ದು ಸಿನಿಮಾ ಗೆ ತಾವು ಪಟ್ಟ ಕಷ್ಟವನ್ನು ಸೋಷಿಯಲ್‌ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ರಾಜ್ಯದಲ್ಲಿ ತೆರೆ ಕಂಡಿರೋ ಮದಗಜ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮಹೇಶ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಸಿನಿಮಾದಲ್ಲಿ ಶ್ರೀಮುರುಳಿ ನಾಯಕರಾಗಿ ಅಬ್ಬರಿಸುವ ಪ್ರದರ್ಶನ ನೀಡಿದ್ದಾರೆ. ಈ ಸಿನಿಮಾದಲ್ಲಿ ನಟಿ ಆಶಿಕಾ ರಂಗನಾಥ ಹಳ್ಳಿಹುಡುಗಿ ಪಲ್ಲವಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರಕ್ಕಾಗಿ ಅಶಿಕಾ ಗದ್ದೆಯಲ್ಲಿ ಕೃಷಿ ಕೆಲಸ ಮಾಡೋದು, ಟ್ರ್ಯಾಕ್ಟರ್ ಓಡಿಸೋದು, ಗದ್ದೆ ಉಳುವುದು ಸೇರಿದಂತೆ ಹಲವು ಕೆಲಸ ಮಾಡಿದ್ದಾರೆ.

ಇದರ ಫಲವಾಗಿ ಅತಿಯಾಗಿ ಬಿಸಿಲಿಗೆ ಒಡ್ಡಿಕೊಂಡಿರೋದರಿಂದ ಅಶಿಕಾ ಬೆನ್ನಿನ ತುಂಬ ಕೆಂಪು ಬರೆ ಬಂದಿದ್ದು, ಸುಟ್ಟ ಗುಳ್ಳೆಗಳು ಕಾಣಿಸಿಕೊಂಡಿದೆಯಂತೆ. ಈ ವಿಚಾರವನ್ನು ಸ್ವತಃ ಆಶಿಕಾ ರಂಗನಾಥ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಪೋಟೋಜೊತೆ ಹಂಚಿಕೊಂಡಿದ್ದಾರೆ. ಬಿಸಿಲಿಗೆ ಸುಟ್ಟಿರುವ ಬೆನ್ನಿನ ಪೋಟೋ ಹಂಚಿಕೊಂಡಿರುವ ಆಶಿಕಾ, ಇದು ಮದಗಜ ಸಿನಿಮಾಗೆ ಪಟ್ಟ ಶ್ರಮ ಎಂದಿದ್ದಾರೆ. ಮಾತ್ರವಲ್ಲ ಕಂಡಷ್ಟು ಸುಲಭವಲ್ಲ ಮದಗಜದ ನಾಯಕಿ ಪಲ್ಲವಿ ನಾಯಕಿ ಮಾತ್ರ ನಟಿಸುವುದು. ಆ ಪಾತ್ರಕ್ಕಾಗಿ ಸಾಕಷ್ಟು ಶ್ರಮಕಷ್ಟ ಹಾಗೂ ತಾಳ್ಮೆಗಳನ್ನು ಸುರಿದಿದ್ದೇನೆ.

ಇಂದು ರಾಜ್ಯದಾದ್ಯಂತ ನನ್ನ ಪಾತ್ರಕ್ಕೆ ಪ್ರಶಂಸೆ ಸುರಿಮಳೆಯಾಗುತ್ತಿದೆ. ಇದು ನನ್ನ ಶ್ರಮಕ್ಕೆ ಫಲ. ಬಹಳ ಸಂತೋಷವಾಗುತ್ತಿದೆ. ನನ್ನನ್ನು ನನ್ನಂತೆಯೇ ಪ್ರೀತಿಸುವ ಎಲ್ಲ ಹುಡುಗರಿಗೂ ಧನ್ಯವಾದ ಎಂದು ಆಶಿಕಾ ರಂಗನಾಥ್ ಬರೆದಿದ್ದಾರೆ. ಉಮಾಪತಿ ಶ್ರೀನಿವಾಸ್ ಬಂಡವಾಳ ಹೂಡಿರುವ ಈ ಸಿನಿಮಾದಲ್ಲಿ ರಂಗಾಯಣ ರಘು ಸೇರಿದಂತೆ ಹಲವು ಹಿರಿಯ ನಟ-ನಟಿಯರ ತಾರಾಗಣ ಇದೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಅಶಿಕಾ ರಂಗನಾಥ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಅಶಿಕಾ ನಟನೆಯ ರೆಮೋ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ.

ಇನ್ನು ಶರಣ್ ಜೊತೆಗಿನ ಅವತಾರ್ ಪುರುಷ ದಲ್ಲೂ ಅಶಿಕಾ ರಂಗನಾಥ್ ನಟಿಸಿದ್ದು, ಇದಕ್ಕೆ ಸಿಂಪಲ್ ಸುನಿ ನಿರ್ದೇಶನವಿದೆ. ಇನ್ನು ಮೇಲ್ನೋಟಕ್ಕೆ ಆಶಿಕಾ ಗ್ಲಾಮರ್ ಗಾಗಿ ಬೆನ್ನು ತೋರಿಸುವ ಪೋಟೋ ಹಂಚಿಕೊಂಡಿದ್ದಾರೆ ಎಂದುಕೊಂಡಿದ್ದ ಅಭಿಮಾನಿಗಳಿಗೆ ಮದಗಜ ಸಿನಿಮಾಗೆ ಅಶಿಕಾಪಟ್ಟಿರೋ ಶ್ರಮದ ಅರಿವಾಗುತ್ತಿದ್ದಂತೆ ನಟಿಮಣಿಯ ಶ್ರಮವನ್ನು ಅಭಿಮಾನಿಗಳು ಶ್ಲಾಘಿಸಿದ್ದಾರೆ.
ಇದನ್ನೂ ಓದಿ : Yash Radhika Pandit : ಯಶ್ ರಾಧಿಕಾಗೆ ಆನ್ಯಿವರ್ಸರಿ ಸಂಭ್ರಮ : ಪತಿ ಬಗ್ಗೆ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಏನಂದ್ರು ಗೊತ್ತಾ
ಇದನ್ನೂ ಓದಿ : Rakul Preet Singh : ಸೋಷಿಯಲ್ ಮೀಡಿಯಾದ ತುಂಬಾ ಬಿಕನಿ ಪೋಟೋಗಳು: ಇದು ಜಲಕನ್ಯೆ ರಕುಲ್ ಅವತಾರ
ಇದನ್ನೂ ಓದಿ : Avatara Purusha : ಅವತಾರ ಪುರುಷ ಆಗಮಿಸಲು ಶರಣ್ ಸಿದ್ಧತೆ: ಸಾಥ್ ಕೊಡ್ತಿದ್ದಾರೆ ಚುಟು ಚುಟು ಬೆಡಗಿ
( Madhagaja actress Ashika Ranganath share photos)