ದೊಡ್ಮನೆ ಕುಡಿ ಯುವರಾಜ್‌ಕುಮಾರ್ (Yuva Rajkumar) ಸ್ಯಾಂಡಲ್‌ವುಡ್ (Yuva Title Teaser) ಬಹಳ ಅದ್ಧೂರಿಯಾಗಿ ಪಾದಾರ್ಪಣೆ ಮಾಡಿದ್ದಾರೆ. ಎಷ್ಟೋ ದಿನ ಜಾತಕಪಕ್ಷಿ ತರ ಕಾಯುತ್ತಿದ್ದ ಅಭಿಮಾನಿಗಳಿಗೆ ಯುವರಾಜ್‌ಕುಮಾರ್ ಗ್ರ್ಯಾಂಡ್ ಎಂಟ್ರಿಗೆ ಫಿದಾ ಆಗಿದ್ದಾರೆ. ಇನ್ನು ಅಪ್ಪು ಅಭಿಮಾನಿಗಳಿಗೆ ನಟ ಪುನೀತ್ ರಾಜ್‌ಕುಮಾರ್‌ನ್ನು ನೋಡಿದಷ್ಟೇ ಸಂತಸಗೊಂಡಿದ್ದಾರೆ. ಅಷ್ಟೇ ಅಲ್ಲದೇ ನಟ ಯುವರಾಜ್‌ಕುಮಾರ್ ಜೂ.ಪವರ್‌ಸ್ಟಾರ್ ಆಗಿ ಕನ್ನಡ ಸಿನಿರಂಗಕ್ಕೆ ಅದ್ದೂರಿ ಸ್ವಾಗತ ಸಿಕ್ಕಿರುತ್ತದೆ. ಅದಕ್ಕಿಂತ ಮಿಗಿಲಾಗಿ ಯುವರಾಜ್‌ಕುಮಾರ್ ಎಂಟ್ರಿಗೆ ತಕ್ಕಂತೆ ಟೈಟಕ್ ಟೀಸರ್ ಕೂಡ ದೊಡ್ಮನೆ ಅಭಿಮಾನಿಗಳಿಗೆ ಸಖತ್ ಖುಷಿ ತಂದಿರುತ್ತದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಟೀಸರ್ ಬಿಡುಗಡೆಯಾದ ಕೆಲವೇ ಕೆಲವು ಗಂಟೆಗಳಲ್ಲಿ ದಾಖಲೆ ವೀವ್ಸ್ ಗಳಿಸಿರುತ್ತದೆ.
ನಟ ಯುವರಾಜ್‌ಕುಮಾರ್ ಮೊದಲ ಸಿನಿಮಾದ ಟೈಟಲ್ ರಿಲೀಸ್ ಆದ ಕೂಡಲೇ ಲೆಗೆಸಿ ಮುಂದುವರೆಯುತ್ತಿದೆ ಎಂದು ಹೇಳುತ್ತಲೇ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇನ್ನು ಟೈಟಲ್ ಟೀಸರ್‌ನಲ್ಲಿ ಯುವ ರಾಜ್‌ಕುಮಾರ್ ಖಡಕ್ ಲುಕ್, ಎಂಟ್ರಿ, ಎಲ್ಲವೂ ನಟ ಪುನೀತ್ ಅಭಿಮಾನಿಗಳಿಗೆ ತುಂಬಾನೇ ಇಷ್ಟ ಆಗಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಟೀಸರ್‌ನಲ್ಲಿರೋ ಡೈಲಾಗ್‌ಗಳನ್ನು ಕೇಳಿ ಫ್ಯಾನ್ಸ್ ಫಿದಾ ಆಗಿದ್ದಾರೆ. ನಿನ್ನೆಯಷ್ಟೇ ಬಿಡುಗಡೆಯಾಗಿರುವ ‘ಯುವ’ ಟೀಸರ್ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ.
ಹೊಸದಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿರುವ ನಟ ಯುವರಾಜ್‌ಕುಮಾರ್ ಟೈಟಲ್ ಟೀಸರ್‌ಗೆ ಸಾಕಷ್ಟು ರೆಸ್ಪಾನ್ಸ್ ಸಿಕ್ಕಿರುವುದು ಸಿನಿರಂಗದ ಮುಂದಿನ ಬೆಳವಣಿಗೆ ಪೂರಕವಾದಂತೆ ಆಗಿದೆ. ಸಂತೋಷ್ ಆನಂದ್‌ರಾಮ್ ದೊಡ್ಮನೆಯ ಕುಡಿಗೆ ಮಾಸ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದಂತೂ ಕನ್ಫರ್ಮ್ ಆಗಿದೆ. ನಟ ಪುನೀತ್ ರಾಜ್‌ಕುಮಾರ್‌ಗೆ ಬ್ಯಾಕ್ ಟೂ ಬ್ಯಾಕ್ ಸೂಪರ್‌ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಯುವಗೂ ಅಷ್ಟೇ ದೊಡ್ಡ ಹಿಟ್ ಕೊಡಬಹುದಾ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸಿದೆ.
ಇದನ್ನೂ ಓದಿ : “ಯುವ” ಟೈಟಲ್ ನೋಡಿ ಭಾವುಕರಾದ ಅಪ್ಪು ಫ್ಯಾನ್ಸ್ : ಶೀರ್ಷಿಕೆಯಲ್ಲೇನಿದೆ ಗೊತ್ತಾ ?
ಇದನ್ನೂ ಓದಿ : ಮತ್ತೇರಿಸೋ ಮೈಮಾಟ ತೋರಿದ ಕಣ್ಸನ್ನೆ ಬೆಡಗಿ: ಪ್ರಿಯಾ ವಾರಿಯರ್ ಪೋಟೋಶೂಟ್ ಹೇಗಿದೆ ಗೊತ್ತಾ
ಇನ್ನು ಭಾರತ ಸಿನಿರಂಗದಲ್ಲೇ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಯುವರಾಜ್‌ಕುಮಾರ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯವರು ನಟ ಯುವರಾಜ್‌ಕುಮಾರ್ ಅಭಿನಯದ ಚೊಚ್ಚಲ ಸಿನಿಮಾದ ಟೈಟಲ್ ಅನ್ನು ವಿಶೇಷವಾಗಿ ಟೀಸರ್ ಮೂಲಕ ಘೋಷಿಸಿದ್ದಾರೆ.ಇನ್ನೊಂದು ಕಡೆ ಯುವ ಟೈಟಲ್ ಟೀಸರ್ 16 ಗಂಟೆಗಳ ಬಳಿಕ ಯೂಟ್ಯೂಬ್‌ನಲ್ಲಿ 32ನೇ ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಇನ್ನು ನಟ ಪುನೀತ್ ಅವರ ಹುಟ್ಟುಹಬ್ಬ (ಮಾರ್ಚ್ 17)ಕ್ಕೆ ಯುವ ರಾಜ್‌ಕುಮಾರ್ ಸಿನಿಮಾ ಸೆಟ್ಟೇರುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೀಗ ಅಂದುಕೊಂಡಿದ್ದಕ್ಕಿಂತ ಮುನ್ನವೇ ಟೈಟಲ್ ಅನೌನ್ಸ್ ಮಾಡಿ, ಸಿನಿಮಾಗೆ ಪೂಜೆನೂ ಮಾಡಲಾಗಿದೆ. ಇನ್ನು ಶೂಟಿಂಗ್ ಸೇರಿದಂತೆ ಇನ್ನಿತರ ಕಲಾವಿದರ ಬಗ್ಗೆ ಮಾಹಿತಿ ಹೊರಬೀಳಬೇಕಿದೆ.
ಇದನ್ನೂ ಓದಿ : ನಟ ಯುವರಾಜ್‌ಕುಮಾರ್ ಚೊಚ್ಚಲ ಸಿನಿಮಾದ ಟೈಟಲ್ ರಿವೀಲ್ ಮಾಡಿದ ಹೊಂಬಾಳೆ ಫಿಲ್ಮ್ಸ್
Sandalwood makes a grand entry Yuva Rajkumar: Record-breaking “Yuva” title teaser