ಭಾನುವಾರ, ಏಪ್ರಿಲ್ 27, 2025
HomeCinemaMeghanaraj: ಜ್ಯೂನಿಯರ್ ಚಿರುಗೆ ನಾಮಕರಣ ಯಾವಾಗ? ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ

Meghanaraj: ಜ್ಯೂನಿಯರ್ ಚಿರುಗೆ ನಾಮಕರಣ ಯಾವಾಗ? ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ

- Advertisement -

ಸ್ಯಾಂಡಲ್ ವುಡ್ ಸ್ಮೈಲ್ ಕಿಂಗ್ ಚಿರಂಜೀವಿ ಸರ್ಜಾ ಇನ್ನಿಲ್ಲವಾಗಿ ವರ್ಷವೇ ಕಳೆದಿದೆ. ಥೇಟ್ ಚಿರುವಂತೇ ಕಾಣೋ ಜ್ಯೂನಿಯರ್ ಚಿರುವನ್ನು ನೋಡಿ ಅಭಿಮಾನಿಗಳು ದುಃಖ ಮರೆಯುತ್ತಿದ್ದಾರೆ. ಜ್ಯೂನಿಯರ್ ಚಿರು ಅಂತಾನೇ ಕರೆಸಿಕೊಳ್ತಿರೋ ಮೇಘನಾ ಹಾಗೂ ಚಿರು ಮಗನಿಗೆ ಅಸಲಿ ಹೆಸರು ಸಿಗೋ ಕಾಲ ಸನ್ನಿಹಿತವಾಗಿದ್ದು, ನಾಮಕರಣ ಯಾವಾಗ ಎಂಬ ಅಭಿಮಾನಿಗಳ ಪ್ರಶ್ನೆಗೆ ಮೇಘನಾ ರಾಜ್ ಉತ್ತರ ನೀಡಿದ್ದಾರೆ.

ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಸ್ಯಾಂಡಲ್ ವುಡ್ ನ ಫೇವರಿಟ್ ಜೋಡಿ. ಆದರೆ ಮದುವೆಯಾಗಿ ಎರಡು ವರ್ಷ ಕಳೆಯುವಷ್ಟರಲ್ಲಿ ಚಿರು ತೀವ್ರ ಹೃದಯಾಘಾತದಿಂದ ನಿಧನರಾದ್ರು. ಪತಿ ತೀರಿಕೊಂಡ ಐದು ತಿಂಗಳ ಬಳಿಕ ಮೇಘನಾ ರಾಜ್  ಅಕ್ಟೋಬರ್ 22 , 2020 ರಲ್ಲಿ  ಗಂಡುಮಗುವಿಗೆ ಜನ್ಮ ನೀಡಿದ್ದಾರೆ.

ಆದರೆ ಕೋವಿಡ್ ಹಾಗೂ ಚಿರು ನಿಧನ ಹೀಗೆ ನಾನಾಕಾರಣಕ್ಕೆ ಜ್ಯೂನಿಯರ್ ಚಿರು ನಾಮಕರಣ ಮಹೋತ್ಸವ ವಿಳಂಬವಾಗುತ್ತಲೇ ಇದೆ. ಸಾಮಾನ್ಯವಾಗಿ 9 ತಿಂಗಳಿಗೆ ನಾಮಕರಣ ಮಾಡೋ ಸಂಪ್ರದಾಯವಿದೆ. ಆದರೆ ಮೇಘನಾ ರಾಜ್ ಹಾಗೂ ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಚಿರು ನಾಮಕರಣ ಅದ್ದೂರಿಯಾಗಿ ಮಾಡೋ ಕನಸಿದೆ.

 ಕೊರೋನಾ ಕಾರಣಕ್ಕೆ ವಿಜೃಂಭಣೆಯಿಂದ ಕಾರ್ಯಕ್ರಮಗಳನ್ನು ಮಾಡೋದಿಕ್ಕೆ ಅವಕಾಶವಿಲ್ಲದೇ ಇರೋದರಿಂದ ಇನ್ನೂ ನಾಮಕರಣಕ್ಕೆ ಮುಹೂರ್ತ ಹುಡುಕುತ್ತಿದ್ದಾರೆ ಮೇಘನಾ ರಾಜ್. ಆದರೆ ಸೋಷಿಯಲ್ ಮೀಡಿಯಾದಲ್ಲಿ ಸದಾ ಮಗನ ನಾಮಕರಣ ಯಾವಾಗ? ಹೆಸರೇನು? ಅನ್ನೋ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ.

ಪ್ರಶ್ನೆಗಳಿಗೆ ಉತ್ತರ ನೀಡಿರೋ ಮೇಘನಾ ರಾಜ್, ವರ್ಷ ಖಂಡಿತಾ ಜ್ಯೂನಿಯರ್ ಚಿರು ನಾಮಕರಣವಾಗುತ್ತೆ. ಇನ್ನೂ ಹೆಸರು ಫೈನಲ್ ಮಾಡಿಲ್ಲ. ಸಧ್ಯ, ಚಿಂಟು,ಬಟಾಣಿ ಅಂತೆಲ್ಲ ಕರೆಯುತ್ತೇವೆ ನಾವು ಅಂತ ಮೇಘನಾ ಮಾಹಿತಿ ನೀಡಿದ್ದಾರೆ.

ಸಪ್ಟೆಂಬರ್ ವೇಳೆಗೆ ಜ್ಯೂನಿಯರ್ ಚಿರು ನಾಮಕರಣ ನಡೆಸೋಕೆ ಎರಡು ಕುಟುಂಬ ಸಿದ್ಧವಾಗಿದ್ದು, ಒಳ್ಳೆಯ ಮುಹೂರ್ತಕ್ಕಾಗಿ ಹುಡುಕಾಟ ನಡೆಸಿದ್ದಾರಂತೆ.

RELATED ARTICLES

Most Popular