ಭಾನುವಾರ, ಏಪ್ರಿಲ್ 27, 2025
HomeCinemaMeghanaraj: ಮೇಘನಾ ರಾಜ್ ಅಭಿಮಾನಿಗಳಿಗೆ ಸಿಹಿಸುದ್ದಿ…! ಸಧ್ಯದಲ್ಲೇ ಸಿನಿಮಾಗೆ ಮರಳಲಿದ್ದಾರೆ ನ್ಯೂಮಮ್ಮಿ….!!

Meghanaraj: ಮೇಘನಾ ರಾಜ್ ಅಭಿಮಾನಿಗಳಿಗೆ ಸಿಹಿಸುದ್ದಿ…! ಸಧ್ಯದಲ್ಲೇ ಸಿನಿಮಾಗೆ ಮರಳಲಿದ್ದಾರೆ ನ್ಯೂಮಮ್ಮಿ….!!

- Advertisement -

ಮೊನ್ನೆ ಮೊನ್ನೆಯಷ್ಟೇ ಮಗನಿಗೆ 9 ತಿಂಗಳು ತುಂಬಿದ ಖುಷಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಮಗನ ಪೋಟೋ ಹಾಕಿದ್ದ ನಟಿ ಮೇಘನಾ ರಾಜ್ ಅಭಿಮಾನಿಗಳಿಗೆ ಇನ್ನೊಂದು ಸಿಹಿಸುದ್ದಿ ನೀಡಿದ್ದಾರೆ. ಸದ್ಯದಲ್ಲೇ ಕುಟ್ಟಿಮಾ ನಟನೆಗೆ ಮರಳಲಿದ್ದಾರಂತೆ.

ಕೊರೋನಾ ಹಿನ್ನೆಲೆಯಲ್ಲಿ ಬ್ರೇಕ್ ತೆಗೆದುಕೊಂಡಿದ್ದ ಮೇಘನಾ ರಾಜ್ ತಾಯ್ತನ ಸಂಭ್ರಮದಲ್ಲಿದ್ದರು. ಇದರ ಮಧ್ಯೆ ಆಕಸ್ಮಿಕವಾಗಿ ಚಿರು ಅಗಲುವಿಕೆ ಮೇಘನಾ ಬದುಕನ್ನೇ ಬದಲಿಸಿತು. ಸದ್ಯ ಈ ದುಃಖವನ್ನು ಮುದ್ದುಮಗನ ಮುಖ ನೋಡಿ ಮರೆಯುತ್ತಿರುವರ ಮೇಘನಾ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

ಮೊನ್ನೆಯಷ್ಟೇ ಒಂದು ವರ್ಷದ ಬಳಿಕ ಕ್ಯಾಮರಾ ಮುಂದೇ ಎನ್ನುತ್ತ ಸಪ್ರೈಸ್ ಆಗಿ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ಪೋಟೋ ಹಂಚಿಕೊಂಡಿದ್ದ ಮೇಘನಾ ಈಗ  ಇನ್ನಷ್ಟು ಅಪ್ಡೇಟ್ ನೀಡಿದ್ದಾರೆ. ಜಾಹೀರಾತಿಗಾಗಿ ಮೇಘನಾ ರಾಜ್ ಬಣ್ಣ ಹಚ್ಚಿದ್ದು, ಸಧ್ಯದಲ್ಲೇ ಈ  ಜಾಹಿರಾತು ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆಯಂತೆ.

ಇದರೊಂದಿಗೆ ಹಲವು ಕಮರ್ಷಿಯಲ್ ಸಿನಿಮಾಗಳಿಗೂ ಮೇಘನಾ ರಾಜ್ ಗೆ ಅವಕಾಶ ಬಂದಿದ್ದು, ಮೇಘನಾ ರಾಜ್ ಕತೆಗಳನ್ನು ಕೇಳಿದ್ದಾರಂತೆ. ಕೊರೋನಾ ಹಾವಳಿ ಕೊಂಚ ತಗ್ಗಿದ ಮೇಲೆ ಮತ್ತೆ ಸಿನಿಮಾರಂಗಕ್ಕೆ ಮರಳಲು ಮೇಘನಾ ರಾಜ್ ನಿರ್ಧರಿಸಿದ್ದಾರಂತೆ.

ಸದ್ಯ 9 ತಿಂಗಳ ಮಗನೊಂದಿಗೆ ಸಮಯ ಕಳೆಯುತ್ತಿರುವ ಮೇಘನಾ ಮಗನಿಗೆ ಒಂದು ವರ್ಷವಾಗುವ ಹೊತ್ತಿಗೆ ಮತ್ತೆ ಸಿನಿಮಾದಲ್ಲಿ ಸಕ್ರಿಯವಾಗೋ ಪ್ಲ್ಯಾನ್ ನಲ್ಲಿದ್ದಾರೆ. ಅಲ್ಲದೇ ಇನ್ನೂ ಮಗನ ನಾಮಕರಣ ಸಹ ನಡೆಯಬೇಕಿದ್ದು, ಜ್ಯೂನಿಯರ್ ಚಿರುಗೆ ಮುದ್ದಾದ ಹೆಸರಿಡೋ ಕಾರ್ಯಕೂಡ ನಡೆಯಬೇಕಿದೆ.

ಮಾಧ್ಯಮಗಳ ಜೊತೆ ಮಾತನಾಡಿದ ಮೇಘನಾ ರಾಜ್, ನಾನು ತರಾತುರಿಯಲ್ಲಿ ಮರಳುವ ಯೋಚನೆಯಲ್ಲಿಲ್ಲ. ಹೀಗಾಗಿ ಸೂಕ್ತ ಕತೆ ಹಾಗೂ ಸಿನಿಮಾಗಾಗಿ ಕಾಯುತ್ತಿದ್ದು, ಸಿಕ್ಕಿದೊಡನೆ ಮತ್ತೆ ಕ್ಯಾಮರಾ ಎದುರಿಸಲು ಹಾಜರಾಗುತ್ತೇನೆ ಎಂದಿದ್ದಾರೆ.  

RELATED ARTICLES

Most Popular