ಭಾನುವಾರ, ಏಪ್ರಿಲ್ 27, 2025
HomeCinemaRayan Raj Sarja : ಮೊಟ್ಟೆ ಬಾಸ್ ಇನ್ ಹೌಸ್: ಹೊಸ ಪೋಸ್ಟ್ ಗೆ ಮೇಘನಾರಾಜ್...

Rayan Raj Sarja : ಮೊಟ್ಟೆ ಬಾಸ್ ಇನ್ ಹೌಸ್: ಹೊಸ ಪೋಸ್ಟ್ ಗೆ ಮೇಘನಾರಾಜ್ ಟ್ಯಾಗ್ ಲೈನ್

- Advertisement -

ಹುಟ್ಟು ಹುಟ್ಟುತ್ತಲೇ ಸ್ಟಾರ್ ಇಮೇಜ್ ಪಡೆದುಕೊಂಡ ಕಂದ ಸ್ಯಾಂಡಲ್ ವುಡ್ ಸ್ಮೈಲ್ ಕಿಂಗ್ ಪುತ್ರ ರಾಯನ್ ರಾಜ್ ಸರ್ಜಾ (Rayan Raj Sarja). ಪತಿಯ ಅಗಲಿಕೆ ನೋವಿನ ನಡುವೆಯೂ ಪುತ್ರನ ಬಗ್ಗೆ ಸದಾ ಅಪ್ಡೇಟ್ ಮಾಹಿತಿಯನ್ನು ಸೋಷಿಯಲ್ ಮೀಡಿಯಾ ದಲ್ಲಿ ಹಂಚಿಕೊಳ್ಳುತ್ತ ಬಂದಿರುವ ಮೇಘನಾ ರಾಜ್ ಈಗ ಪುತ್ರನಿಗೆ ಮೊಟ್ಟೆ ಬಾಸ್ ( egg boss ) ಎನ್ನುತ್ತ ಹೊಸ ಅಪ್ಡೇಟ್ ನೀಡಿದ್ದಾರೆ.

ಹೌದು ಇತ್ತೀಚಿಗಷ್ಟೇ ನಟಿ‌ ಮೇಘನಾ ರಾಜ್ ಅದ್ದೂರಿಯಾಗಿ ತಮ್ಮ ಮಗನ‌ ಮೊದಲ ವರ್ಷದ ಹುಟ್ಟುಹಬ್ಬವನ್ನು ಅಚರಿಸಿದ್ದಾರೆ. ಜಂಗಲ್ ಕಿಂಗ್ ಥೀಮ್‌ನಲ್ಲಿ ರಾಯನ್ ಹುಟ್ಟುಹಬ್ಬ ಆಚರಿಸಿದ ಮೇಘನಾ ನಮ್ಮ ಮನೆಗೆ ರಾಯನ್ ರಾಜನಿದ್ದಂತೆ ಎಂದಿದ್ದರು.ಸದಾ ಕಾಲ ಮಗನ ಹೊಸ ಹೊಸ ಪೋಟೋಗಳನ್ನು ಶೇರ್ ಮಾಡ್ತಿದ್ದ ಮೇಘನಾ ರಾಜ್ ಮೊನ್ನೆ ಮೊನ್ನೆಯಷ್ಟೇ ರಾಯನ್ ದೀಪಾವಳಿ ಸಂಭ್ರಮದ ಪೋಟೋ ಶೇರ್ ಮಾಡಿದ್ದರು.

ನೋಡಲು ಮುದ್ದು ಮುದ್ದಾಗಿರೋ ರಾಯನ್ ಸರ್ಜಾ ಮೊದಲ ಆಕರ್ಷಣೆ ಅಂದ್ರೇ ಅವರ ಸಿಲ್ಕಿ ಸಿಲ್ಕಿ ಹೇರ್. ಆದರೆ ಈಗ ಮೇಘನಾ ಅದಕ್ಕೆ ಕತ್ತರಿ ಹಾಕಿಸಿದ್ದು ರಾಯನ್ ರಾಜ್ ಸರ್ಜಾ ಕೇಶಮುಂಡನ ಮಾಡಿಸಿದ್ದಾರೆ. ಹುಟ್ಟಿದ ಮಗುವಿನ ಕೂದಲು ತೆಗೆಸುವ ಸಂಪ್ರದಾಯದಂತೆ ಮೇಘನಾ ಸರ್ಜಾ ಮಗನ ಕೂದಲು ತೆಗೆಸಿದ್ದು ಬೋಳಾದ ತಲೆಯ ಜೊತೆಗೆ ಮಗನ ಹೊಸ ಪೋಟೋ ಶೇರ್ ಮಾಡಿದ್ದಾರೆ.

ಮಾತ್ರವಲ್ಲ ಮೊಟ್ಟೆ ಬಾಸ್ ಇನ್ ಹೋಂ ಎಂದು ಟೈಟಲ್ ಕೂಡ ನೀಡಿದ್ದಾರೆ. ಪಂಜೆ ಶರ್ಟ್ ನಲ್ಲಿ ಗುಂಡು ಗುಂಡಾಗಿ ಮುದ್ದು ಮುದ್ದಾಗಿ ಕಾಣ್ತಿರೋ ರಾಯನ್ ಪೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಹಿಂದೊಮ್ಮೆ ಮಾಧ್ಯಮಗಳಿಗೆ ಸಂದರ್ಶನ ನೀಡುವ ವೇಳೆ ಮೇಘನಾ ಮಗನ ಉಡುಪು, ಹೇರ್ ಸ್ಟೈಲ್ ಎಲ್ಲದರ ಬಗ್ಗೆಯೂ ನಾನು ಹೆಚ್ಚು ಕಾಳಜಿ ವಹಿಸುತ್ತೇನೆ ಎಂದಿದ್ದರು. ಮಾತ್ರವಲ್ಲ ನನ್ನ ಇಷ್ಟದಂತೆಯೇ ಅವನಿಗೆ ಡ್ರೆಸ್ ಅಪ್ ಮಾಡಲು ಬಯಸುತ್ತೇನೆ ಎಂದಿದ್ದರು.

ಹೇರ್ ಸ್ಟೈಲ್ ಮಾತ್ರ ಸದ್ಯ ಮಾಡಿಸಿಲ್ಲ. ಮಗನ ಮುಡಿ ಶಾಸ್ತ್ರವಾದ ಮೇಲೆ ಹೇರ್ ಸ್ಟೈಲ್ ಬಗ್ಗೆ ನಿರ್ಧರಿಸುತ್ತೇನೆ ಎಂದಿದ್ದರು.ಈಗ ಪುತ್ರನ ಮುಡಿ ಶಾಸ್ತ್ರ ಮುಗಿಸಿ ಪೋಟೋ ಶೇರ್ ಮಾಡಿದ್ದಾರೆ. ಮಗನ ಪೋಟೋಗೆ ರೌಡಿ ಇನ್ ಹೋಂ ಎಂದು ಕೂಡ ಮೇಘನಾ ಕಾಲೆಳೆದಿದ್ದಾರೆ . ಮೇಘನಾ ಪೋಸ್ಟ್ ಗೆ ಪನ್ನಗಾಭರಣ ಸೇರಿದಂತೆ ಹಲವರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ : MeToo : ಅರ್ಜುನ್ ಸರ್ಜಾ ಮೀಟೂ ಪ್ರಕರಣಕ್ಕೆ ಬಿ ರಿಪೋರ್ಟ್: ಮೇಘನಾ, ಧ್ರುವ್ ಸರ್ಜಾ ಸಖತ್ ಪೋಸ್ಟ್

ಇದನ್ನೂ ಓದಿ : ಬಣ್ಣದ ಲೋಕಕ್ಕೆ ಕುಟ್ಟಿಮಾ ಕಮ್ ಬ್ಯಾಕ್: ವರ್ಕೌಟ್ ಪೋಟೋ ಮೂಲಕ ರೀ ಎಂಟ್ರಿ ಸುಳಿವುಕೊಟ್ಟ ಮೇಘನಾ ರಾಜ್

( Meghnaraj Sarja uploaded a photo of him tagging his son Rayan Raj Sarja as an egg boss)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular