ಮಂಗಳವಾರ, ಏಪ್ರಿಲ್ 29, 2025
HomeCinemaಮಗನಿಗಾಗಿ ಏನೆಲ್ಲ ಪ್ಲ್ಯಾನ್ ಮಾಡಿದ್ದಾರೆ ಮಮ್ಮಿ : ಇಲ್ಲಿದೆ ಮೇಘನಾ ರಾಜ್ ಸರ್ಜಾ Exclusive Talk

ಮಗನಿಗಾಗಿ ಏನೆಲ್ಲ ಪ್ಲ್ಯಾನ್ ಮಾಡಿದ್ದಾರೆ ಮಮ್ಮಿ : ಇಲ್ಲಿದೆ ಮೇಘನಾ ರಾಜ್ ಸರ್ಜಾ Exclusive Talk

- Advertisement -

ಸ್ಯಾಂಡಲ್ ವುಡ್ ನ ನ್ಯೂ ಮಮ್ಮೀಸ್ ಲಿಸ್ಟ್ ನಲ್ಲಿರೋ (Sandalwood New Mummy’s List) ಮೇಘನಾ ರಾಜ್ ಸರ್ಜಾ ಕೇವಲ ನ್ಯೂ ಮಮ್ಮೀ ಮಾತ್ರವಲ್ಲದೇ ಸ್ಟ್ರಾಂಗ್ ಮಮ್ಮೀ ಕೂಡ. ಸದ್ಯ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡ್ತಿರೋ ಮೇಘನಾ ತಮ್ಮ ಮಗನ ಬಗ್ಗೆ ನೊರೆಂಟು ಕನಸು ಹಂಚಿಕೊಂಡಿದ್ದಾರೆ..

ಯಾವುದೇ ಮಗುವಾದ್ರೂ ತಂದೆ ಹಾಗೂ ತಾಯಿ ಜೊತೆ ಬೆಳೆಯೋದು, ಅವರ ಪ್ರೀತಿ ಅಪೇಕ್ಷಿಸೋದು ಕಾಮನ್. ಆದರೆ ತಾಯಿಯ ಹೊಟ್ಟೆಯಲ್ಲಿದ್ದಾಗಲೇ ತಂದೆಯನ್ನು ಕಳೆದುಕೊಂಡ ರಾಯನ್ ರಾಜ್ ಸರ್ಜಾಗೆ ಈ ಅವಕಾಶ ಸಿಕ್ಕಿಲ್ಲ. ಆದರೆ ರಾಯನ್ ಗೆ ತಂದೆ ಹಾಗೂ ತಾಯಿಯಾಗಿ ಮೇಘನಾ ಶಕ್ತಿ ತುಂಬುತ್ತಿದ್ದಾರೆ. ಸದ್ಯ ಎರಡೂವರೆ ವರ್ಷದ ಆರ್ಯನ್ ತುಂಬ ಮಾತನಾಡುತ್ತಾನಂತೆ. ಅಷ್ಟೇ ಅಲ್ಲ‌ ಚಿರುನಂತೇ ಆಕ್ಟಿವ್ ಆಗಿರೋ ಆರ್ಯನ್ ಸದಾ ಪ್ರೆಂಡ್ಸ್ ಜೊತೆ ಕಾಲ ಕಳೆಯೋಕೆ ಇಷ್ಟ ಪಡುತ್ತಾನಂತೆ.

ತಮ್ಮ ಪುತ್ರನ ಆಕ್ಟಿವಿಟಿಸ್ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಮೇಘನಾ ಸರ್ಜಾ ಸಾಕಷ್ಟು ವಿಚಾರ ಶೇರ್ ಮಾಡಿದ್ದಾರೆ. ಸದಾ ಏನಾದ್ರುವೊಂದು ಆಟ ಆಡೋಕೆ ಬಯಸೋ ಆರ್ಯನ್ ಗೆ ಪ್ರಾಣಿಗಳು ಹಾಗೂ ಚಿತ್ರಗಳನ್ನೊಳಗೊಂಡ ಬುಕ್ಸ್ ಅಂದ್ರೇ ಇಷ್ಟವಂತೆ. ಪ್ರಾಣಿಗಳಲ್ಲಿ ಆನೆಯನ್ನು ತುಂಬ ಇಷ್ಟ ಪಡೋ ರಾಯನ್ ಎಲ್ಲಿ ಹೋದರೂ ಒಂದು ಆನೆ ಗೊಂಬೆ ಯನ್ನು ಜೊತೆಗಿಟ್ಟುಕೊಂಡೇ ಓಡಾಡುತ್ತಾನಂತೆ. ಅವನದೇ ವಯಸ್ಸಿನ ಮಕ್ಕಳು ನನ್ನ ಪ್ರೆಂಡ್ಸ್ ಗ್ರೂಪ್ ನಲ್ಲೂ ಇರೋದರಿಂದ ಅವನಿಗೆ ಸ್ನೇಹಿತರ ಕೊರತೆಯಾಗಿಲ್ಲ.‌ ಒಮ್ಮೊಮ್ಮೆ ಯೋಚನೇ ಮಾಡಿದರೇ ಚಿರು ನನಗಾಗಿ ಸುಂದರ ಜೀವನದ ಚೌಕಟ್ಟನ್ನೇ ಪ್ಲ್ಯಾನ್ ಮಾಡಿಟ್ಟುಹೋಗಿದ್ದಾರೆ ಎಂಬ ಭಾವನೆ ಬರುತ್ತೇ ಎಂದು ಮೇಘನಾ ಭಾವುಕರಾದರು.

ಇದನ್ನೂ ಓದಿ : ಡಾ. ರಾಜ್‌ಕುಮಾರ್‌ 17ನೇ ವರ್ಷದ ಪುಣ್ಯತಿಥಿ : ಭಾವನ್ಮಾಕವಾಗಿ ನಮನ ಸಲ್ಲಿಸಿದ ಸಿಎಂ ಬೊಮ್ಮಾಯಿ

ಇದನ್ನೂ ಓದಿ : ಕೆಡಿ‌‌ ಸಿನಿಮಾ‌‌ ಶೂಟಿಂಗ್ ವೇಳೆ ದುರಂತ : ನಟ ಸಂಜಯ್ ದತ್ ಆಸ್ಪತ್ರೆಗೆ ದಾಖಲು

ಈ ವರ್ಷದಿಂದ ರಾಯನ್ ನನ್ನು ಶಾಲೆಗೆ ಸೇರಿಸೋ ಪ್ಲ್ಯಾನ್ ನಲ್ಲಿರೋ ಮೇಘನಾ ತಮ್ಮ ಬ್ಯುಸಿ ಶೆಡ್ಯೂಲ್ ಮಧ್ಯೆಯೂ ರಾಯನ್ ಗಾಗಿ ಸಮಯ ಮೀಸಲಿರಿಸೋದನ್ನು ಮರೆಯೋದಿಲ್ಲವಂತೆ. ಫ್ರೀ ಟೈಂ ನಲ್ಲಿ ಸಕ್ರೆಬೈಲ್ ಸೇರಿದಂತೆ ಆನೆಗಳು ಹೆಚ್ಚಿರೋ ಸ್ಥಳಗಳಿಗೂ ರಾಯನ್ ಜೊತೆ ಹೋಗೋ ಪ್ಲ್ಯಾನ್ ನಲ್ಲಿದ್ದಾರೆ ಮೇಘನಾ. ಇನ್ನು ಸಿನಿಮಾ ವಿಚಾರಕ್ಕೆ ಬರೋದಾದರೇ ಸದ್ಯ ಮೇಘನಾ ತತ್ಸಮ ತದ್ಬವ ಸಿನಿಮಾ ಮುಗಿಸಿದ್ದು, ಚುನಾವಣೆ ಬಳಿಕ ಸಿನಿಮಾ ತೆರೆಗೆ ಬರಲಿದೆ. ಸದ್ಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭವಾಗಿದೆ.

Sandalwood New Mummy’s List: What mummy has planned for her son: Here is Meghana Raj Sarja Exclusive Talk

RELATED ARTICLES

Most Popular