ಡಾಲಿ ಧನಂಜಯ್ ಸಿನಿಮಾ ಅಂದ್ರೆ ಸಾಕು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಡಾಲಿ ಧನಂಜಯ್ ಸಿನಿಮಾ ಹೊಸತನ, ವಿಶೇಷತೆಯಿಂದ ಕೂಡಿರುತ್ತೆ, ಇದೀಗ ಡಾಲಿ ಧನಂಜಯ್ ತಮ್ಮ ಸಿನಿಮಾ ‘ಬಡವ ರಾಸ್ಕಲ್ʼ ಬಿಡುಗಡೆಯ ದಿನಾಂಕವನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಡಾಲಿ ಧನಂಜಯ್ ಅಭಿನಯದ ಶಂಕರ್ ಗುರು ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಬಡವ ರಾಸ್ಕಲ್ʼ ಸಿನಿಮಾ ಡಿಸೆಂಬರ್ 24ರಂದು ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ಡಾಲಿ ಧನಂಜಯ್ ಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಅಭಿನಯಿಸಿದ್ದಾರೆ.
ಇದನ್ನೂ ಓದಿ: SALAGA : ಬಿಡುಗಡೆಗೂ ಮುನ್ನ ಸಖತ್ ಸದ್ದು ಮಾಡುತ್ತಿದೆ ಸಲಗ
ಸೆಪ್ಟೆಂಬರ್ 24ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರ ಡಿಸೆಂಬರ್ 24 ರಂದು ತೆರೆಮೇಲೆ ಬರಲು ರೆಡಿಯಾಗಿದೆ. ಇತ್ತೀಚೆಗೆ ಚಿತ್ರತಂಡ ಈ ಚಿತ್ರದ ‘ಉಡುಪಿ ಹೋಟೆಲು’ ಎಂಬ ಹಾಡನ್ನು ಬಿಡುಗಡೆ ಮಾಡಿತ್ತು. ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿಬಂದ ಈ ಹಾಡು ಈಗಾಗಲೇ ಯುಟ್ಯೂಬ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ.
ಇದನ್ನೂ ಓದಿ: ಧ್ರುವ ಸರ್ಜಾ ಹುಟ್ಟು ಹಬ್ಬದಂದೇ ಮಾರ್ಟಿನ್ ಸಿನಿಮಾದ ಪೋಸ್ಟರ್ ರಿಲೀಸ್
(Daley Dhananjay Performance Cinema ‘Badava Rascal’ Release date fix)