ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕನ್ನಡಿಗರ ಮನೆಮಾತಾದ ನಟಿ ಮೇಘಾ ಶೆಟ್ಟಿ ಹಿರಿತೆರೆಯಲ್ಲೂ ತಮ್ಮ ಜರ್ನಿ ಮುಂದುವರೆಸಿದ್ದು, ಹೊಸ ಸಿನಿಮಾಕ್ಕೆ ಮೇಘಾ ಶೆಟ್ಟಿ ಸಹಿ ಹಾಕಿದ್ದಾರಂತೆ.

ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರೋ ಡಾರ್ಲಿಂಗ್ ಕೃಷ್ಣಾ ಹೊಸ ಚಿತ್ರಕ್ಕೆ ಮೇಘಾ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸೆ.೨೭ ರಂದು ಹೊಸ ಸಿನಿಮಾದ ಟೈಟಲ್ ಲಾಂಚ್ ಆಗಲಿದೆ.

ಲವ್ ಮಾಕ್ಟೆಲ್ ಸಿನಿಮಾ ನಿರ್ದೇಶಿಸಿದ್ದ ಡಾರ್ಲಿಂಗ್ ಕೃಷ್ಣಾ ಈಗ ಸ್ಯಾಂಡಲ್ ವುಡ್ ಬಹು ಬೇಡಿಕೆ ನಟರಾಗಿದ್ದು ಅವರ ಹೊಸ ಸಿನಿಮಾದಲ್ಲಿ ಮೇಘಾ ಶೆಟ್ಟಿ ಜೊತೆಗೆ ನಿಶ್ವಿಕಾ ನಾಯ್ಡು ಕೂಡ ನಾಯಕಿಯಾಗಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ನಟಿ ಮೇಘಾ ಶೆಟ್ಟಿ ತ್ರಿಬಲ್ ರೈಡಿಂಗ್ ಶೂಟಿಂಗ್ ಮುಗಿಸಿದ್ದು ಈ ವೇಳೆ ಸದ್ಯದಲ್ಲೇ ಇನ್ನೊಂದು ಸಿನಿಮಾದಲ್ಲಿ ನಟಿಸುವುದಾಗಿ ಹೇಳಿದ್ದರು. ಈಗ ಡಾರ್ಲಿಂಗ್ ಕೃಷ್ಣ ಜೊತೆ ನಟಿಸೋದು ಅಂತಿಮವಾಗಿದೆ.

ಪೊಲೀಸ್ ಅಧಿಕಾರಿ ರವಿ.ಡಿ.ಚನ್ನಣ್ಣನವರ್ ಸಿನಿಮಾ ಟೈಟಲ್ ಲಾಂಚ್ ಮಾಡಲಿರೋದರಿಂದ ಇದೊಂದು ಪೊಲೀಸ್ ಅಧಿಕಾರಿಯ ಕತೆಯಾಗಿರಬಹುದೆಂದು ಅಂದಾಜಿಸಲಾಗುತ್ತಿದೆ.ಸುಮಂತ್ ಕ್ರಾಂತಿ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಶಿವ ತೇಜಸ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ.ರವಿವರ್ಮ ಆಕ್ಷನ್ ದ್ಯಶ್ಯಗಳನ್ನು ನಿರ್ದೇಶಿಸಲಿದ್ದಾರೆ.
(Jote joteyali actress megha shetty sighned new movie with darling krishna)