ಸೋಮವಾರ, ಏಪ್ರಿಲ್ 28, 2025
HomeCinemaಭಜರಂಗಿ 2 ಸಿನಿಮಾದ ಕಥೆ ರಿವಿಲ್‌ ಮಾಡಿದ ನಿರ್ದೇಶಕ ಹರ್ಷ

ಭಜರಂಗಿ 2 ಸಿನಿಮಾದ ಕಥೆ ರಿವಿಲ್‌ ಮಾಡಿದ ನಿರ್ದೇಶಕ ಹರ್ಷ

- Advertisement -

ಭಜರಂಗಿ 2 ಸಿನಿಮಾ ಬಿಡುಗಡೆಗೂ ಮುನ್ನವೇ ಸಕತ್ ಸಿನಿಮಾ ಸದ್ದು ಮಾಡುತ್ತಿದೆ. ಶಿವಣ್ಣನ ಅಭಿಮಾನಿಗಳಂತೂ ಕಾತುರತೆಯಿಂದ ಕಾಯುತ್ತಿದ್ದಾರೆ. ಇಂತ ಸಂದರ್ಭದಲ್ಲಿ ‌ನೃತ್ಯ ಸಂಯೋಜನೆಯ ಜೊತೆಗೆ ನಿರ್ದೇಶನದಲ್ಲಿಯೂ ಭಾರಿ ಹೆಸರು ಮಾಡಿರುವ ಹರ್ಷ ಭಜರಂಗಿ 2 ಸಿನಿಮಾದ ಕಥೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಭಜರಂಗಿ 2 ಸಿನಿಮಾ ಯಾವುದೇ ಸಿನಿಮಾದ ಮುಂದುವರಿದ ಭಾಗವಲ್ಲಾ. ಭಜರಂಗಿ ಸಿನಿಮಾದ ಮುಂದುವರಿದ ಭಾಗವು ಅಲ್ಲಾ. ಇದು ಹೊಸ ಕಥೆ ಎಂದು ಹೇಳಿದ್ದಾರೆ.

ನಿರ್ದೇಶಕ ಹರ್ಷ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಸಿನಿಮಾ ಭಜರಂಗಿ 2. ಈ ಸಿನಿಮಾ ನಾಳೆ ತೆರೆಮೇಲೆ ಬರಲು ಸಿದ್ದವಾಗಿದೆ. 2013 ರಲ್ಲಿ ಬಂದ ಸಿನಿಮಾ ಭಜರಂಗಿ ಚಿತ್ರದ ಮುಂದುವರಿದ ಭಾಗ ಭಜರಂಗಿ 2 ಸಿನಿಮಾ ಅಲ್ಲಾ. ಅದಕ್ಕೂ ಇದಕ್ಕೂ ಸಂಬಂಧ ಇಲ್ಲಾ ಎಂದು ನಿರ್ದೇಶಕ ಹರ್ಷ ಸ್ಪಷ್ಟ ಪಡಿಸಿದ್ದಾರೆ.  ಆ ಸಿನಿಮಾದ ಜನಪ್ರಿಯತೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಸಿನಿಮಾಕ್ಕೆ ಭಜರಂಗಿ 2 ಎಂದು ಹೆಸರು ಇಟ್ಟಿದ್ದೇವೆ ಎಂದಿದ್ದಾರೆ. ಈ ಚಿತ್ರ ಪ್ಯಾಂಟಸಿ ಆಧರಿತವಾಗಿದೆ.

ಇದನ್ನೂ ಓದಿ: Ravi Basrur – Salman Khan: ಬಾಲಿವುಡ್‌ಗೆ ಎಂಟ್ರಿ ಕೊಟ್ಟ ರವಿ ಬಸ್ರೂರು : ಸಲ್ಮಾನ್‌ ಖಾನ್‌ ಸಿನಿಮಾಕ್ಕೆ ಬಸ್ರೂರು ಮ್ಯೂಸಿಕ್‌

Bajarangi 2

ಚಿತ್ರ ತಂಡದ ಬೆಂಬಲ ಇಲ್ಲದಿದ್ದರೆ ಈ ಚಿತ್ರವನ್ನು ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ . ಶಿವಣ್ಣ ಮತ್ತು ನಿರ್ಮಾಣ ಸಂಸ್ಥೆ ಜಯಣ್ಣ ಫಿಲಂಸ್ ನ ಬೆಂಬಲ ಕೂಡ ಸಾಕಷ್ಟಿತ್ತು. ನಾನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರನ್ನ ಸಿನಿಮಾದ 2ನೇ ನಾಯಕ ಎಂದು ಪರಿಗಣಿಸುತ್ತೇನೆ. ಅವರು ಅದ್ಭುತವಾದ ಸಂಗೀತವನ್ನು ನೀಡಿದ್ದಾರೆ. ಗ್ರಾಫಿಕ್ಸ್ ವರ್ಕ್ ಕೂಡ ಬಹಳ ಚೆನ್ನಾಗಿ ಮಾಡಿದ್ದಾರೆ. ಮೇಕಪ್,  ಕೇಶ ವಿನ್ಯಾಸ ಎಲ್ಲವೂ ಕೂಡ  ಚಿತ್ರವನ್ನು ಮತ್ತಷ್ಟು ಸುಂದರವನ್ನಾಗಿ ಮಾಡಿದೆ ಎಂದಿದ್ದಾರೆ ನಿರ್ದೇಶಕ ಹರ್ಷ.ಭಜರಂಗಿ 2 ಸಿನಿಮಾದ ಕಥೆ ರಿವಿಲ್‌ ಮಾಡಿದ ನಿರ್ದೇಶಕ ಹರ್ಷ

ಇದನ್ನೂ ಓದಿ: ಮಲೆನಾಡ ಭೂಗತ ಲೋಕವನ್ನು ಅನಾವರಣಗೊಳಿಸಿದ “ಕಾರ್ಗಲ್ ನೈಟ್ಸ್”

( Director Harsha reveals the story of Bajrangi 2)

RELATED ARTICLES

Most Popular