ಸೋಮವಾರ, ಜೂನ್ 16, 2025
HomeCinemaಡಾ. ರಾಜ್‌ ಕುಮಾರ್‌ ಮುದ್ದಿನ ಮಗ ಪುನೀತ್‌ ರಾಜ್‌ ಕುಮಾರ್‌

ಡಾ. ರಾಜ್‌ ಕುಮಾರ್‌ ಮುದ್ದಿನ ಮಗ ಪುನೀತ್‌ ರಾಜ್‌ ಕುಮಾರ್‌

- Advertisement -

ಪುನೀತ್‌ ರಾಜ್‌ ಕುಮಾರ್‌ ಹೆಸರು ಕೇಳಿದ್ರೇ ಕಣ್ಣ ಮುಂದೆ ಬರೋದು ಚೂರು ಅಹಂಕಾರ ವಿಲ್ಲದ ನೋಟ, ನಗು ತುಂಬಿದ ಮುಖ. ಹಸಮ್ಮುಖಿಯಾದ ಅಪ್ಪು 1975 ರ ಮಾರ್ಚ್‌ 17 ರಂದು ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಕಿರಿಯ ಮಗನಾಗಿ ಜನಿಸಿದವರು. ಬಾಲ್ಯದಿಂದಲೇ ಅಪ್ಪನೊಂದಿಗೆ ಸಿನಿಮಾರಂಗಕ್ಕೆ ಎಂಟ್ರೀ ಕೊಟ್ಟ ಅಪ್ಪು ಬಾಲ ನಟನಾಗಿ ಹಲವು ಚಿತ್ರಗಳಲ್ಲಿ ಅಭಿಯಿಸಿದ್ದಾರೆ.

ಪುನೀತ್‌ ರಾಜ್‌ ಕುಮಾರ್‌ ಬಾಲ ನಟನಾಗಿ ಪ್ರೇಮದ ಕಾಣಿಕೆ, ಭಾಗ್ಯವಂತ, ಎರಡು ನಕ್ಷತ್ರಗಳು, ಬೆಟ್ಟದ ಹೂವು, ಚಲಿಸುವ ಮೋಡಗಳು, ಶಿವ ಮೆಚ್ಚಿದ ಕಣ್ಣಪ್ಪ, ಪರಶುರಾಮ್, ಯಾರಿವನು, ಭಕ್ತ ಪ್ರಹ್ಲಾದ, ವಸಂತ ಗೀತ ಸಿನಿಮಾಗಳಲ್ಲಿ ದೊಡ್ಡ ದೊಡ್ಡ ನಟರೆಲ್ಲಾ ನಾಚುವಂತೆ ಅಭಿನಯಿಸಿದ್ದಾರೆ.

ಇದನ್ನೂ ಓದಿ: Punit rajkumar Died : ಬಾರದ ಲೋಕಕ್ಕೆ ಪಯಣಿಸಿದ ಪವರ್‌ ಸ್ಟಾರ್‌ ಪುನಿತ್‌ ರಾಜ್‌ ಕುಮಾರ್‌

ಬಾಲ ನಟನಾಗಿ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದ ಪುನಿತ್‌ ರಾಜ್‌ ಕುಮಾರ್‌ 2002ರಲ್ಲಿ ಅಪ್ಪು ಸಿನಿಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಮತ್ತೆ ಪದಾರ್ಪಣೆ ಮಾಡಿದ್ದರು. ನಂತರ ಅಭಿ, ವೀರ ಕನ್ನಡಿಗ, ವಂಶಿ, ಅರಸು, ಮಿಲನ, ಹುಡುಗರು, ಅಣ್ಣ ಬಾಂಡ್‌, ರಾಜಕುಮಾರ, ನಟ ಸಾರ್ವಭೌಮ ಹೀಗೆ ಸಾಲು ಸಾಲು 28 ಹಿಟ್‌ ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿ ಕರ್ನಾಟಕದ ಜನರ ಮನಸ್ಸನ್ನ ಗೆದ್ದಿದ್ದರು.

ಅಪ್ಪು ಅಭಿನಯದ ಮೂಲಕ ಮಾತ್ರವಲ್ಲದೇ ಸಿನಿಮಾ ನಿರ್ಮಾಪಕನಾಗಿ ಮತ್ತು ಗಾಯನ ಹಾಗೂ ನೀರೂಪಕನಾಗಿಯು ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೇ ಮೈಸೂರಿನ ಶಕ್ತಿದಾಮ ಆಶ್ರಮದ ಮೂಲಕ ಸಮಾಜ ಸೇವೆಯಲ್ಲಿ ತಮ್ಮನ ತಾವು ಪುನೀತ್‌ ರಾಜ್‌ ಕುಮಾರ್‌ ತೊಡಗಿಸಿಕೊಂಡಿದ್ದರು.

ಇದನ್ನೂ ಓದಿ: ಪುನಿತ್‌ ಮನೆಗೆ ಬಿಗಿ ಭದ್ರತೆ, ಸೈಂಟ್‌ ಆನ್ಸ್‌ ಶಾಲೆಗೆ ರಜೆ ಘೋಷಣೆ : ಆಸ್ಪತ್ರೆಗೆ ಸಿಎಂ ಬೊಮ್ಮಾಯಿ ಭೇಟಿ

ಪುನೀತ್‌ ರಾಜ್‌ ಕುಮಾರ್‌ ಬೆಂಗಳೂರು ಪ್ರೀಮಿಯರ್‌ ಫುಟ್‌ ಬಾಲ್‌ ತಂಡದ ವಡೆತನವನ್ನು ಹೊಂದಿದ್ದರು. ಅಲ್ಲದೇ ಅಪ್ಪು ಕರ್ನಾಟಕ ಸರ್ಕಾರದ ಹಲವು ಉತ್ಪದನೆಯ ರಾಯಭಾರಿಯಾಗಿಯು ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಪುನೀತ್‌ ರಾಜ್‌ ಕುಮಾರ್‌ ತಮ್ಮ ಸಾಧನೆಯ ಮೂಲಕ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು.

(Dr. Rajkumar’s son Puneet Rajkumar)

RELATED ARTICLES

Most Popular