ಸೋಮವಾರ, ಏಪ್ರಿಲ್ 28, 2025
HomeCinemaDuniya Vijay : ಟಾಲಿವುಡ್ ಗೆ ಸ್ಯಾಂಡಲ್ ವುಡ್ ಸಲಗ : ವಿಲನ್ ಆಗ್ತಿದ್ದಾರೆ ದುನಿಯಾ...

Duniya Vijay : ಟಾಲಿವುಡ್ ಗೆ ಸ್ಯಾಂಡಲ್ ವುಡ್ ಸಲಗ : ವಿಲನ್ ಆಗ್ತಿದ್ದಾರೆ ದುನಿಯಾ ವಿಜಯ್

- Advertisement -

ನಟನೆ ಬಳಿಕ ನಿರ್ದೇಶನದಲ್ಲೂ ಸೈ ಎನ್ನಿಸಿಕೊಂಡಿರೋ ನಟ ಕರಿ ಚಿರತೆ ಸ್ಯಾಂಡಲ್ ವುಡ್ ಬಾರ್ಡರ್ ದಾಟಿ ಟಾಲಿವುಡ್ ಗೆ ಪ್ರವೇಶಿಸಿದ್ದಾರೆ. ನಟನೆ ನಿರ್ದೇಶನದ ಬಳಿಕ ದುನಿಯಾ ವಿಜಯ್ ಖಳನಾಯಕನಾಗಿ‌ ಮಿಂಚಲು ಸಿದ್ಧವಾಗಿದ್ದಾರೆ. ಸ್ಯಾಂಡಲ್ ವುಡ್ ನಟಿಯರು ಟಾಲಿವುಡ್ ನಲ್ಲಿ ಮಿಂಚೋದು ಕಾಮನ್ ಸಂಗತಿ. ಆದರೆ ಈ ಭಾರೀ ಕನ್ನಡದ ಕರಿಚಿರತೆ ನಟ ದುನಿಯಾ‌ ವಿಜಯ್ (Duniya Vijay) ಟಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ‌.

ಸದ್ಯ ಸಲಗ ಗೆಲುವಿನ ಖುಷಿಯಲ್ಲಿರೋ ದುನಿಯಾ ವಿಜಯ್ ಟಾಲಿವುಡ್ ನ ನಂದಮೂರಿ ಬಾಲಕೃಷ್ಣಗೆ ವಿಲನ್ ಆಗಿ ನಟಿಸಲಿದ್ದಾರೆ. ಬಹುತೇಕ ಅಧಿಕೃತ ಸುದ್ದಿ ಹೊರ ಬಂದಿದ್ದು ಸಿನಿಮಾ ತಂಡದ ಅಧಿಕೃತ ಘೋಷಣೆಯೊಂದೇ ಬಾಕಿ ಎನ್ನಲಾಗುತ್ತಿದೆ. ಮಾಸ್ ಎಂಟ್ರೈನಮೆಂಟ್ ಸಿನಿಮಾ ಇದಾಗಿದ್ದು ರಾಯಲಸೀಮೆಯಲ್ಲಿ ನಡೆದ ನಿಜಕತೆಯನ್ನು ಆಧರಿಸಿ ಸಿನಿಮಾ ಸಿದ್ಧವಾಗಿದೆ ಎನ್ನಲಾಗುತ್ತಿದೆ. ಚಿತ್ರಕ್ಕೆ ಎಸ್ ತಮನ್ ಸಂಗೀತವಿದೆ.

ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಲಿದ್ದಾರೆ. ಸದ್ಯ ಮಾಸ್ತಿಗುಡಿ ಬಳಿಕ ಒಂದು ಬ್ರೇಕ್ ಪಡೆದಿದ್ದ ದುನಿಯಾ ವಿಜಯ್ ಭರ್ಜರಿ ಸಿದ್ಧತೆಯೊಂದಿಗೆ ಸಲಗ ಸಿನಿಮಾ ಸಿದ್ಧಪಡಿಸಿದ್ದಾರೆ. ಅಲ್ಲದೇ ನಿರ್ದೇಶಕರಾಗಿಯೂ ಗೆದ್ದಿದ್ದಾರೆ. ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ದುನಿಯಾ ವಿಜಯ್ ನಂದಮೂರಿ ಬಾಲ್ ಕೃಷ್ಣ ಗೆ ವಿಲನ್ ಆಗೋ ಮೂಲಕ ಟಾಲಿವುಡ್ ನಲ್ಲಿ ತಮ್ಮ ಜರ್ನಿ ಅರಂಭಿಸಲಿದ್ದಾರೆ. ಈ ಸಿನಿಮಾವನ್ನು ಕ್ರ್ಯಾಕ್ ಡೈರೆಕ್ಟರ್ ಗೋಪಿ ಚಂದ್ ಮಾಲಿನೇನಿ ನಿರ್ದೇಶಿಸುತ್ತಿದ್ದು ತಾತ್ಕಾಲಿಕವಾಗಿ ಸಿನಿಮಾ ಎನ್ ಬಿಕೆ 107 ಎಂಬ ಟೈಟಲ್ ಇಡಲಾಗಿದೆ.

ಒಟ್ಟಿನಲ್ಲಿ ಒಂಟಿಸಲಗದಂತೆ ಸ್ಯಾಂಡಲ್ ವುಡ್ ನಲ್ಲಿ ಬೆಳೆದು ನಿಂತ ದುನಿಯಾ ವಿಜಯ್ ಈಗ ತೆಲುಗಿಗೆ ಕಾಲಿಡಲು ಸಿದ್ಧವಾಗಿದ್ದು, ನಾಯಕನಾಗಿರೋ ದುನಿಯಾ ವಿಜಯ್ ಸಡನ್ ವಿಲನ್ ಆಗಿ ಎಂಟ್ರಿ ಕೊಡ್ತಿರೋದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಕಲಾವಿದನಿಗೆ ಯಾವ ಪಾತ್ರವಾದರೂ ಸರಿ ನಟಿಸಬೇಕೆನ್ನುವ ಮಾತಿನಂತೆ ದುನಿಯಾ ವಿಜಯ್ ನಾಯಕರಾಗಿ ಉತ್ತುಂಗದಲ್ಲಿದ್ದಾಗಲೇ ವಿಲನ್ ಪಾತ್ರಕ್ಕೆ ಎಂಟ್ರಿ ಕೊಡ್ತಿರೋದು ಸಿನಿಮಾ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಪುನೀತ್‌ ರಾಜ್‌ ಕುಮಾರ್ ಪುಣ್ಯಸ್ಮರಣೆ : ಅಭಿಮಾನಿಗಳಿಗೆ ಊಟ ಬಡಿಸಿದ ದೊಡ್ಮನೆ ಕುಟುಂಬ

ಇದನ್ನೂ ಓದಿ : ಪೂನಂ ಪಾಂಡೆಗೆ ಪತಿಯಿಂದ ಹಲ್ಲೆ : ಆಸ್ಪತ್ರೆಗೆ ದಾಖಲಾದ ಮಾದಕ ಬೆಡಗಿ

( Duniya Vijay to make an entry in Tollywood)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular