ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ ಸಿನಿಮಾ ರಿಲೀಸ್ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಸುದೀಪ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ನಾಳೆ ರಿಲೀಸ್ ಆಗುತ್ತೆ ಅಂತ ಹೇಳಲಾಗುತ್ತಿದೆ. ಈ ನಡುವಲ್ಲೇ ನಿರ್ಮಾಪಕ ಸೂರಪ್ಪ ಬಾಬು ವಿತರಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಟಿಗೊಬ್ಬ -3 ಸಿನಿಮಾ ರಿಲೀಸ್ ಆಗದಂತೆ ತಡೆಯುವ ನಿಟ್ಟಿನಲ್ಲಿ ಷಡ್ಯಂತ್ರ ನಡೆದಿದೆ. ಇದರಲ್ಲಿ ನನ್ನ ಯಾವುದೇ ತಪ್ಪಿಲ್ಲ. ವಿತರಕರು ನನಗೆ ಮೋಸ ಮಾಡಿದ್ರು. ಸತ್ಯ ಏನು ಅನ್ನೋದು ಸುದೀಪ್ ಸರ್‌ಗೆ ಗೊತ್ತಿದೆ. ಇಂದು ಸಿನಿಮಾ ರಿಲೀಸ್ ಆಗದೇ ಇರುವುದಕ್ಕೆ ಕ್ಷಮೆ ಕೋರುತ್ತೇನೆ. ನಾಳೆ ಬೆಳಗ್ಗೆ 6 ಗಂಟೆಗೆ ರಾಜ್ಯದಾದ್ಯಂತ ಸಿನಿಮಾ ರಿಲೀಸ್ ಆಗಲಿದೆ ಎಂದು ಸೂರಪ್ಪ ಬಾಬು ಹೇಳಿದ್ದಾರೆ.

ಕೋಟಿಗೊಬ್ಬ ಸಿನಿಮಾ ರಿಲೀಸ್ ವಿಳಂಬವಾದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ವಿಜಯಪುರದಲ್ಲಿ ಸುದೀಪ್ ಅಭಿಮಾನಿಗಳು ಥಿಯೇಟರ್ ಮೇಲೆ ದಾಳಿ ನಡೆಸಿದ್ದಾರೆ. ನಗರದ ಡ್ರೀಮ್ ಲ್ಯಾಂಡ್ ಥಿಯೇಟರ್‌ನಲ್ಲಿ ಕಲ್ಲುತೂರಾಟ ನಡೆಸಿದ್ದಾರೆ. ಥಿಯೇಟರ್ ಗಾಜು ಒಡೆದು ಹಾಕಿದ್ದಾರೆ. ಇದರಿಂದಾಗಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ಇನ್ನು ಬೆಳಗಾವಿಯಲ್ಲಿಯೂ ಸಿನಿಮಾ ರಿಲೀಸ್ ಆಗದ ಹಿನ್ನೆಲೆಯಲ್ಲಿ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಯುವಕನೋರ್ವ ಅಭಿಮಾನಿಗಳನ್ನು ಪ್ರಚೋದಿಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಕಪಾಳಮೋಕ್ಷ ಮಾಡಿದ್ದಾರೆ. ಅಲ್ಲದೇ ಲಾಠಿ ಬೀಸುವ ಮೂಲಕ ಅಭಿಮಾನಿಗಳನ್ನು ಚದುರಿಸುವ ಕಾರ್ಯವನ್ನು ಮಾಡಿದ್ದಾರೆ.

ಸಿನಿಮಾ ರಿಲೀಸ್ ಆಗದೇ ಅಭಿಮಾನಿಗಳ ಆಕ್ರೋಶ ಒಂದೆಡೆಯಾದ್ರೆ, ಇನ್ನೊಂದೆಡೆಯಲ್ಲಿ 150 ರೂಪಾಯಿ ಟಿಕೆಟ್ ಬೆಲೆಯ ಸಿನಿಮಾವನ್ನು ಬ್ಲ್ಯಾಕ್‌ನಲ್ಲಿ 800 ರೂಪಾಯಿ ಖರೀದಿಸಿದ್ದ ಪ್ರೇಕ್ಷಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಕಿಚ್ಚನ ದರ್ಶನವೂ ಇಲ್ಲ, ಇನ್ನೊಂದೆಡೆಯಲ್ಲಿ ಹಣವೂ ಹೋಯ್ತು ಅಂತಾ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
( The distributor has cheated on the issue of crores of cinema. Producer Soorappa Babu says truth Sudeep Sir knows )